1. ಸುದ್ದಿಗಳು

ಚಿನ್ನದ ಬೆಲೆಯಲ್ಲಿ ಇಳಿಕೆ: 24 ಕ್ಯಾರೆಟ್ 10 ಗ್ರಾಂ ಬಂಗಾರದ ಬೆಲೆ ಎಷ್ಟು ಗೊತ್ತಾ?

Maltesh
Maltesh
Do you know the price of 24 carat 10 gram gold?

ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕಡ ಏರಿಕೆಯಾಗುತ್ತಿದ್ದು, ಇದೀಗ ಈ ಬೆಳವಣಿಗೆಗೆ ಕಡಿವಾಣ ಬಿದ್ದಂತಿದೆ. ಇಲ್ಲಿಯವರೆಗೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಕಳೆದೆರಡು ದಿನಗಳಿಂದ ಇಳಿಕೆಯಾಗುತ್ತಿದೆ.

ಹೌದು ಬುಧವಾರ ಬಂಗಾರದ ಬೆಲೆಯಲ್ಲಿ ರೂ. 300 ಕಡಿಮೆಯಾಗಿದೆ. ಆದರೆ, ಮರುದಿನವಾದ ಗುರುವಾರವೂ ಚಿನ್ನದ ಬೆಲೆ ಗಣನೀಯವಾಗಿ ಕುಸಿದಿದೆ. ಅದರಲ್ಲೂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 300 ರೂ ಕಡಿಮೆಯಾಗಿದೆ.  ಹೊಸ ದರ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 56,400. ಇನ್ನು ದೇಶದ ಹಲವು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಈ ಇಳಿಕೆ ಕಂಡುಬಂದಿದೆ. ಪರಿಣಾಮವಾಗಿ, ಗುರುವಾರ ವಿವಿಧ ಪ್ರಮುಖ ನಗರಗಳಲ್ಲಿ ಪ್ರಸ್ತುತ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಈ ಕೆಳಗಿನಂತಿವೆ.

ಚೆನ್ನೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 56,760 ಆಗಿದ್ದರೆ 24 ಕ್ಯಾರೆಟ್ ಚಿನ್ನದ ದರ ರೂ. 62,100ರಲ್ಲಿ ಮುಂದುವರಿದಿದೆ. ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 56,600, ಅದೇ ರೀತಿ 24 ಕ್ಯಾರೆಟ್ ಚಿನ್ನದ ಬೆಲೆ ರೂ. 60,290.

ಪ್ರಸ್ತುತ ಸಿಲಿಕಾನ್‌ ಸಿಟಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 56,400, 24ಕ್ಯಾರೆಟ್ ಚಿನ್ನದ ಬೆಲೆ ರೂ. 61,530. ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆಯೂ ಚಿನ್ನದ ಟ್ರೆಂಡ್ ಅನ್ನು ಅನುಸರಿಸುತ್ತಿದೆ. ದೇಶದ ಎಲ್ಲ ಪ್ರಮುಖ ನಗರಗಳಲ್ಲೂ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಗುರುವಾರ ಒಂದು ಕೆಜಿ ಬೆಳ್ಳಿ ಬೆಲೆ ರೂ. 1200 ರೂ.ಗೆ ಗಣನೀಯವಾಗಿ ಇಳಿಕೆಯಾಗಿದೆ.

74,100 ಮುಂದುವರಿಯುತ್ತದೆ. ಹಾಗೂ ಚೆನ್ನೈನಲ್ಲಿ ಗುರುವಾರ ಕಿಲೋ ಬೆಳ್ಳಿಯ ಬೆಲೆ ರೂ. 77,000 ಆಗಿದೆ. ಮತ್ತೊಂದೆಡೆ, ಬೆಂಗಳೂರಿನಲ್ಲಿ ಪ್ರತಿ ಕಿಲೋ ಬೆಳ್ಳಿ ಬೆಲೆ ರೂ. 74,000. ಆಗಿದೆ. ಇದೇ ಸಮಯದಲ್ಲಿ, ಇತರ ಪ್ರಮುಖ ನಗರಗಳಾದ ಮುಂಬೈ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. 74,100 ಮುಂದುವರಿದಿದೆ.

Published On: 03 November 2023, 03:40 PM English Summary: Do you know the price of 24 carat 10 gram gold?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.