1. ಸುದ್ದಿಗಳು

ಧಾರವಾಡ ಕೃಷಿ ವಿವಿ ಜೋಳ ಸಂಶೋಧನಾ ವಿಭಾಗವು ದೇಶದ ಅತ್ಯುತ್ತಮ ಸಂಶೋಧನಾ ಕೇಂದ್ರ

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಜೋಳ ಸಂಶೋಧನಾ ವಿಭಾಗವು ದೇಶದ ‘ಅತ್ಯುತ್ತಮ ಸಂಶೋಧನಾ ಕೇಂದ್ರ’ ಎಂಬ ಪ್ರಶಸ್ತಿಗೆ ಆಯ್ಕೆಯಾಗಿದೆ. 

2017-2020 ರ ಅವಧಿಗೆ ದೇಶದ ಅತ್ಯುತ್ತಮ ಸಂಶೋಧನಾ ಕೇಂದ್ರ ಎಂದು ಪ್ರಶಸ್ತಿಗೆ ಆಯ್ಕೆಯಾಗಿದ್ದು, 50ನೇ ಅಖಿಲ ಬಾರತ ಸಂಶೋಧನಾ ಕಾರ್ಯಾಗಾರದಲ್ಲಿ ಪ್ರಕಟಿಸಲಾಗಿದೆ.  ದೇಶದ ಒಟ್ಟಾರೆ ಜೋಳದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. 1969ರಲ್ಲಿ ಈ ಕೇಂದ್ರವು ಕಾರ್ಯಾರಂಭ ಮಾಡಿದ್ದು ಸುವರ್ಣ ಸಂಭ್ರಮ ವರ್ಷಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಬಂದಿದ್ದು ವಿಶೇಷವಾಗಿದೆ’ ಎಂದು ಕುಲಪತಿ ಡಾ. ಮಹಾದೇವ ಚೆಟ್ಟಿ ತಿಳಿಸಿದ್ದಾರೆ.

ಈ ಕೇಂದ್ರವು ಮುಂಗಾರು ಜೋಳದಲ್ಲಿ ಇಲ್ಲಿಯವರೆಗೆ 4 ಹೈಬ್ರೀಡ್  ಮತ್ತು 7 ಸುಧಾರಿತ ತಳಿಗಳನ್ನೂ, ಹಿಂಗಾರು ಜೋಳದಲ್ಲಿ 2 ಹೈಬ್ರೀಡ್ ಮತ್ತು 3 ಸುಧಾರಿತ ತಳಿಗಳನ್ನೂ ಅಭಿವೃದ್ಧಿಪಡಿಸಿ ರೈತರಿಗೆ ಬಿಡುಗಡೆ ಮಾಡಿದೆ. ಜೊತೆಗೆ ಅನೇಕ ಬೆಳೆ ಉತ್ಪಾದನೆ ಹಾಗೂ ಸಸ್ಯ ಸಂರಕ್ಷಣಾ ತಂತ್ರಜ್ಞಾನಗಳನ್ನು ಶಿಫಾರಸ್ಸು ಮಾಡಲಾಗಿದೆ. ಇದಲ್ಲದೆ ಕೇಂದ್ರವು ಅಭಿವೃದ್ಧಿಪಡಿಸಿದ ಬೇಗನೆ ಮಾಗುವ ಮುಂಗಾರು ಜೋಳದ ಹೈಬ್ರೀಡ್ ತಳಿ ಎಸ್.ಪಿ.ಎಚ್-1883ನ್ನು ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಲಾಗಿದೆ.

ಈ ತಳಿಯನ್ನು ಡಾ. ಎನ್.ಇ. ಹನುಮರಟ್ಟಿ ಹಾಗೂ ಡಾ. ಎಸ್.ಟಿ. ಕಜ್ಜಿಡೋಣಿ ಅವರು ಡಾ. ವಿ.ಎಸ್. ಕುಬಸದ, ಡಾ. ಟಿ.ಟಿ ಬಂಡಿವಡ್ಡರ, ಡಾ. ಎಸ್.ಎನ್. ಚಟ್ಟಣವರ. ಡಾ. ಎಚ್.ಎಂ.ಶೈಲಾರವರ ಸಹಾಯದೊಂದಿಗೆ ಅಭಿವೃದ್ಧಿಪಡಿಸಿದ್ದಾರೆ.

Published On: 04 July 2020, 12:47 PM English Summary: Dharwad agriculture university got national award (1)

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.