1. ಸುದ್ದಿಗಳು

ಐಐಎಸ್‌ಸಿಯಿಂದ “ಗ್ರೀನ್‌ ಟೀ” ಮೂಲಕ ಏರ್‌ಫಿಲ್ಟರ್‌ ಅಭಿವೃದ್ಧಿ!

Hitesh
Hitesh
Development of air filter by "green tea" from IISC!

ದೇಹದಲ್ಲಿನ ಕೊಬ್ಬಿನಾಂಶವನ್ನು ಇಳಿಸುವ ನಿಟ್ಟಿನಲ್ಲಿ ಗ್ರೀನ್‌ ಟೀ ಸಹಕಾರಿಯಾಗಿದೆ. ಇದೀಗ ಗ್ರೀನ್ ಟೀ ಗಾಳಿಯಲ್ಲಿರುವ ಸೂಕ್ಷ್ಮಾಣುಗಳನ್ನೂ ನಾಶ ಮಾಡಲು ಸಮರ್ಥವಾಗಿದೆ ಎನ್ನುವ ವಿಷಯ ಬೆಳಕಿಗೆ ಬಂದಿದ್ದು, ಐಐಎಸ್ಸಿ ಇದನ್ನು ಖಚಿತಪಡಿಸಿದೆ.  

COVID ಕೇಂದ್ರ ಸರ್ಕಾರದಿಂದ ತುರ್ತು ಸಭೆ: ಜನನಿಬಿಡ ಪ್ರದೇಶಲ್ಲಿ ಮಾಸ್ಕ್‌ ಧರಿಸಲು ಸೂಚನೆ

ಗ್ರೀನ್ ಟೀಯಲ್ಲಿರುವ ಪ್ರಯೋಜನಗಳ ಕುರಿತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ಯ ಸಂಶೋಧಕರು ಸುದೀರ್ಘವಾದ ಸಂಶೋಧನೆಯನ್ನು ನಡೆಸಿದ್ದಾರೆ. ಇದರಲ್ಲಿ ಸೂಕ್ಷ್ಮಾಣು ನಾಶಕ ಏರ್ ಫಿಲ್ಟರ್‌ ಸಹ ಅಭಿವೃದ್ಧಿಪಡಿಸಿದ್ದಾರೆ.

ಸಂಶೋಧಕರು ಗ್ರೀನ್ ಟೀನಲ್ಲಿರುವ ಪಾಲಿಫಿನಾಲ್‌ಗಳು ಮತ್ತು ಪಾಲಿಕಯಾನಿಕ್ ಪಾಲಿಮರ್‌ಗಳಂತಹ ಪದಾರ್ಥಗಳಿಂದ ಜರ್ಮ್ ಕಿಲ್ಲರ್ ಏರ್ ಫಿಲ್ಟರ್‌ನ್ನು ಅಭಿವೃದ್ಧಿಪಡಿಸಿದ್ದಾರೆ. 

ಈ ಜರ್ಮ್ ಕಿಲ್ಲರ್ ಸೂಚಿತ ಪ್ರದೇಶದಲ್ಲಿ   ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತದೆ. ಅಲ್ಲದೇ ಈ ಫಿಲ್ಟರ್‌ಗಳು ಗಾಳಿಯಿಂದ ಹರಡುವ ರೋಗಕಾರಕಗಳಿಂದ ಉಂಟಾಗುವ ರೋಗಗಳನ್ನು ತಡೆಯುವ ಸಾಮೃರ್ಥ್ಯವನ್ನು ಹೊಂದಿದೆ.  

Sugarcane| ಕಬ್ಬು ಬೆಳಗಾರರಿಗೆ 21 ಕೋಟಿ ಪಾವತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  

ಐಐಎಸ್ಸಿ ಅಭಿವೃದ್ಧಿಪಡಿಸಿರುವ ಈ ಫಿಲ್ಟರ್‌ಗಳನ್ನು ಏರ್ ಕಂಡಿಷನರ್‌ಗಳು, ಸೆಂಟ್ರಲ್ ಡಕ್ಟ್‌ಗಳು ಮತ್ತು ಏರ್ ಪ್ಯೂರಿಫೈಯರ್‌ಗಳಲ್ಲಿಯೂ ಬಳಸಲು ಅನುವಾಗುವಂತೆ ಖಚಿತತೆ ಪಡೆಸಿಕೊಳ್ಳಲಾಗಿದೆ.   

ಏರ್ ಫಿಲ್ಟರ್‌ಗಳ ನಿರಂತರ ಬಳಕೆಯು ಸೂಕ್ಷ್ಮಾಣುಜೀವಿಗಳ ಸಂತಾನೋತ್ಪತ್ತಿ ಸ್ಥಳಗಳನ್ನೂ ನಾಶಪಡಿಸಲಿದೆ ಎನ್ನುವುದು ಈ ವೇಳೆ ಖಚಿತವಾಗಿದೆ.  ಸಂತಾನೋತ್ಪತ್ತಿ ಸ್ಥಳಗಳನ್ನು ಮುಚ್ಚಿ, ಅದರ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಸೂಕ್ಷ್ಮಾಣುಗಳ ಪುನರುಜ್ಜೀವನದಿಂದ ಎದುರಾಗುವ ಸೋಂಕನ್ನೂ ಇದು ತಡೆಯಲಿದೆ.

ಆಂಟಿಮೈಕ್ರೊಬಿಯಲ್ ಏರ್ ಫಿಲ್ಟರ್‌ಗಳನ್ನು ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಟೆಸ್ಟಿಂಗ್ ಮತ್ತು ಕ್ಯಾಲಿಬ್ರೇಶನ್ ಲ್ಯಾಬೊರೇಟರೀಸ್ (NABL) ನಲ್ಲಿ ಪರೀಕ್ಷಿಸಲಾಗಿದೆ. ಇದು 99.24 ಶೇಕಡಾ ದಕ್ಷತೆಯೊಂದಿಗೆ ಕೋವಿಡ್‌ನ ಡೆಲ್ಟಾ ರೂಪಾಂತರವನ್ನು ನಿಷ್ಕ್ರಿಯಗೊಳಿಸಿರುವುದು ವರದಿ ಆಗಿದೆ.

ಕೋವಿಡ್ ಸಮಯದಲ್ಲಿ ನಡೆದ ಈ ಸಂಶೋಧನೆಗೆ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ (SERB) ಮತ್ತು SERB-ತಂತ್ರಜ್ಞಾನ ಅನುವಾದ ಪ್ರಶಸ್ತಿಗಳು (SERB-TETRA) ಬೆಂಬಲ ನೀಡಿದ್ದು, ಈ ವರ್ಷ ಇದಕ್ಕೆ ಪೇಟೆಂಟ್  ಆಗಿದೆ. ಸಂಶೋಧನೆಯ ತಂಡದ ನೇತೃತ್ವವನ್ನು ಪ್ರಾಧ್ಯಾಪಕ ಸೂರ್ಯಸಾರಥಿ ಬೋಸ್ ಮತ್ತು ಪ್ರಾಧ್ಯಾಪಕ ಕೌಶಿಕ್ ಚಟರ್ಜಿ ವಹಿಸಿದ್ದರು.

Published On: 21 December 2022, 04:53 PM English Summary: Development of air filter by "green tea" from IISC!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.