1. ಸುದ್ದಿಗಳು

Report Fish Disease App : ಮೀನಿನಲ್ಲಿ ರೋಗ ಪತ್ತೆಗೆ ಮತ್ತು ರೈತರಿಗೆ ವೈಜ್ಞಾನಿಕ ಸಲಹೆ ನೀಡಲು ಮೊಬೈಲ್ App ಅಭಿವೃದ್ಧಿ

Kalmesh T
Kalmesh T
Developed the Mobile App for Fish Diseases and timely scientific advice to aqua-farmers

Report Fish Disease App : ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನಿನ ರೋಗಳನ್ನು ತ್ವರಿತವಾಗಿ ಪತ್ತೆ ಮಾಡಲು ಮತ್ತು ಮೀನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಸಕಾಲಿಕ ವೈಜ್ಞಾನಿಕ ಸಲಹೆಗಾಗಿ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಮಾಡಲಾಗಿದೆ.

Report Fish Disease App : ರೈತರೇ ಮೀನುಗಳ ರೋಗಗಳ ಬಗ್ಗೆ ವರದಿ ನೀಡುವ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಲು ‘ರಿಪೋರ್ಟ್ ಫಿಶ್  ಡಿಸಿಸ್’ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಆಪ್ ಅನ್ನು ಇತ್ತೀಚೆಗೆ 2023ರ ಜೂನ್ 28ರಂದು ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರಷೋತ್ತಮ ರೂಪಾಲ ಇತ್ತೀಚೆಗೆ ಬಿಡುಗಡೆ ಮಾಡಿದರು.

ಈ ಹೊಸ ಆಪ್ ಬಳಸಿ ರೈತರು ತಮ್ಮ ಫಿನ್ ಫಿಶ್, ಸೀಗಡಿ ಮತ್ತಿತರ ಮೀನುಗಳಿಗೆ ಬಂದಿರುವ ರೋಗಗಳ ಕುರಿತು ಕ್ಷೇತ್ರಮಟ್ಟದ ಅಧಿಕಾರಿಗಳು ಮತ್ತು ಮೀನು ಆರೋಗ್ಯ ತಜ್ಞರಿಗೆ ಮಾಹಿತಿ ನೀಡುವುದು ಹಾಗೂ ಮೀನುಗಾರಿಕೆ ಮಾಡುವ ಸ್ಥಳದಲ್ಲಿ ರೋಗಗಳ ಸಮಸ್ಯೆ ನಿವಾರಣೆಗೆ ತ್ವರಿತವಾಗಿ ವೈಜ್ಞಾನಿಕ ಸಲಹೆಗಳನ್ನು ಪಡೆದುಕೊಳ್ಳುವುದು.

ಈ ಆಪ್ ಮೀನುಗಾರಿಕೆಯಲ್ಲಿ ತೊಡಗಿರುವ ರೈತರು ಕ್ಷೇತ್ರಮಟ್ಟದ ಅಧಿಕಾರಿಗಳು ಮತ್ತು ಮೀನು ಆರೋಗ್ಯ ತಜ್ಞರನ್ನು ಒಂದೆಡೆ ಬೆಸೆಯುವ ವೇದಿಕೆಯಾಗಿದೆ.

 

ಮೀನುಗಾರಿಕೆ ಪ್ರಗತಿಗೆ ರೋಗಗಳು ಅತ್ಯಂತ ಗಂಭೀರ ಅಡ್ಡಿಯಾಗಿವೆ ಮತ್ತು ಮೀನುಗಳಿಗೆ ಬರುವ ರೋಗದಿಂದ ಮೀನುಗಾರಿಕೆಗೆ ತೊಡಗಿರುವ ರೈತರು ಭಾರೀ ಆರ್ಥಿಕ ನಷ್ಟಕ್ಕೆ ತುತ್ತಾಗುತ್ತಿರುವುದು ವರದಿಯಾಗಿದೆ.

ಮುಂಚಿತವಾಗಿಯೇ ರೋಗಗಳನ್ನು ಕಂಡುಹಿಡಿಯುವುದು ಮತ್ತು ರೋಗಗಳ ನಿಯಂತ್ರಣಕ್ಕೆ ಅತ್ಯಂತ ಪ್ರಮುಖವಾಗಿದೆ. ಅದನ್ನು ವ್ಯವಸ್ಥಿತ ನಿಗಾ ಅಥವಾ ಕಣ್ಗಾವಲು ಕಾರ್ಯಕ್ರಮದ ಮೂಲಕ ಸಾಧಿಸಬಹುದಾಗಿದೆ.

ರೋಗಗಳ ನಿಗಾದ ಪ್ರಾಮುಖ್ಯತೆಯನ್ನು ಅರ್ಥೈಸಿಕೊಂಡು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಡಿ ಬರುವ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯದ ಬೆಂಬಲದೊಂದಿಗೆ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಮೀನುಗಾರಿಕೆ ರೋಗಗಳ ಮೇಲೆ ನಿಗಾವಹಿಸುವ ಕಾರ್ಯಕ್ರಮವನ್ನು ಹೈದರಾಬಾದ್ ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ನಿಗಮ(ಎನ್ ಎಫ್ ಡಿಬಿ) ಮೂಲಕ 2013ರಲ್ಲಿ ಜಾರಿಗೊಳಿಸಲಾಗಿದೆ. 

ಈ ಕಾರ್ಯಕ್ರಮವನ್ನು ಮೀನುಗಾರಿಕೆ ಹೆಚ್ಚಿನ ಪ್ರಮಾಣದಲ್ಲಿರುವ 14 ರಾಜ್ಯಗಳಲ್ಲಿ ಆರಂಭಿಸಲಾಗಿದೆ ಮತ್ತು ಇದರಲ್ಲಿ 24 ಸಹಭಾಗಿತ್ವ ಕೇಂದ್ರಗಳು ಭಾಗಿಯಾಗಿದ್ದು, ಇದನ್ನು ಐಸಿಎಆರ್ ನ ಮೀನು ವಂಶವಾಹಿ ಸಂಪನ್ಮೂಲ ರಾಷ್ಟ್ರೀಯ ಬ್ಯೂರೋ ಸಮನ್ವಯ ನಡೆಸುತ್ತಿದೆ.

ದೇಶದಲ್ಲಿ ಮೀನುಗಳ ರೋಗಗಳ ಬಗ್ಗೆ ನಿಗಾವಹಿಸುವುದನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಎನ್ಎಸ್ ಪಿಎಎಡಿ ಒಟ್ಟು 33,778 ಕೋಟಿ ರೂಪಾಯಿ ವೆಚ್ಚದಲ್ಲಿ 3 ವರ್ಷಗಳ ಅವಧಿಗೆ ಪಿಎಂಎಂಎಸ್ ವೈ ಅಡಿಯಲ್ಲಿ 2ನೇ ಹಂತವನ್ನು ದೇಶವ್ಯಾಪಿ ಜಾರಿಗೊಳಿಸಲಾಗಿದೆ ಮತ್ತು ಇದರಲ್ಲಿ ರಾಜ್ಯಗಳ ಮೀನುಗಾರಿಕೆ ಇಲಾಖೆಗಳು ಮತ್ತು ಕಡಲ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಭಾರತ ಸರ್ಕಾರದ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪರಷೋತ್ತಮ ರೂಪಾಲ ಚೆನ್ನೈನ ಐಸಿಎಆರ್ – ಸಿಐಬಿಎನಲ್ಲಿ 2023ರ ಫೆಬ್ರವರಿ 27ರಂದು ಚಾಲನೆ ನೀಡಿದರು.

ಕಳೆದ 9 ವರ್ಷಗಳಲ್ಲಿ ಎನ್ಎಸ್ ಪಿಎಎಡಿ ಅಡಿಯಲ್ಲಿ ಸಾಧಿಸಿರುವ ಕೆಲವು ಪ್ರಮುಖ ಮುಖ್ಯಾಂಶಗಳಲ್ಲಿ ಇವು ಸೇರಿವೆ.

1) ದೇಶದಲ್ಲಿ ಮೀನುಗಳ ಆರೋಗ್ಯ ಪ್ರಯೋಗಾಲಯಗಳ ಬಲಿಷ್ಠ ಜಾಲ ವೃದ್ಧಿ

2) ಪ್ರಾಣಿಗಳ ಆರೋಗ್ಯ ಕುರಿತಾದ ವಿಶ್ವಸಂಸ್ಥೆ(ಡಬ್ಲ್ಯೂಒಎಎಚ್) ಪಟ್ಟಿ ಮಾಡಿರುವ ಮತ್ತು ಹೊಸದಾಗಿ ಮೀನುಗಳಲ್ಲಿ ಕಾಣಿಸಿಕೊಳ್ಳುವ ರೋಗಗಳನ್ನು ಪತ್ತೆಹಚ್ಚಲು ಡಯಾಗ್ನಾಸ್ಟಿಕ್ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು.

3) ದೇಶದಲ್ಲಿ ನಿಷ್ಟ್ರೀಯ ರೋಗಗಳ ಕಣ್ಗಾವಲು ಬಲವರ್ಧನೆ

4) ರೋಗಗಳ ನಿರ್ವಹಣೆಗೆ ರೈತರಿಗೆ ವೈಜ್ಞಾನಿಕ ಸಲಹೆಯನ್ನು ನೀಡುವುದು

5) ದೇಶದಲ್ಲಿ ಇದೇ ಮೊದಲ ಬಾರಿ 9 ಹೊಸ ರೋಗಕಾರಕಗಳ (ಪೆಥಗಾನ್) ಗಳ ಪತ್ತೆ

6) ರೋಗಗಳ ನಿರ್ವಹಣೆಗೆ ಮೊದಲ ಬಾರಿಗೆ ಕಾರ್ಯತಂತ್ರ ಸ್ಥಾಪನೆ ಮತ್ತು ರೋಗ ಮತ್ತಷ್ಟು ಹರಡದಂತೆ ತಡೆಯಲು ಹೊಸ ರೋಗಗಳ ಬಗ್ಗೆ ಸಂಬಂಧಿಸಿದವರಿಗೆ ಎಚ್ಚರಿಕೆ, ಸಲಹೆಗಳನ್ನು ನೀಡುವುದು

7) ಅಕ್ಯೂಟ್ ಹೆಪಟೊಪಾನ್ಕ್ರಿಯಾಟಿಕ್ ನಿಸಿರೋಸ್ ಡಿಸೀಸ್(ಎಎಚ್ ಪಿಎನ್ ಡಿ) (ಇದು ಡಬ್ಲ್ಯೂಒಎಚ್ ನ ಪಟ್ಟಿಯಲ್ಲಿರುವ ಕಾಯಿಲೆ) ಇದರ ಕುರಿತು ವ್ಯಾಪಕ ಮಿಥ್ಯಗಳನ್ನು ಯಶಸ್ವಿಯಾಗಿ ದೂರಮಾಡಲಾಗುತ್ತಿದೆ. ಇದು ಸೀಗಡಿ ಮೀನಿನ ವ್ಯಾಪಾರದ ಮೇಲೆ ಭಾರೀ ಪರಿಣಾಮ ಬೀರುತ್ತದೆ.

8) ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಅಂದರೆ ಪ್ರಾಣಿಗಳ ಆರೋಗ್ಯ ಕುರಿತಾದ ವಿಶ್ವಸಂಸ್ಥೆ(ಒಐಇ) ಮತ್ತು ಏಷ್ಯಾ ಪೆಸಿಫಿಕ್ ನಲ್ಲಿ ಅಕ್ವ ಕಲ್ಚರ್ ಕೇಂದ್ರಗಳ ಜಾಲ ಮೀನುಗಳ ರೋಗಗಳ ಬಗ್ಗೆ ವರದಿಗಳನ್ನು ನೀಡುವ ಮೂಲಕ ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳುವುದು.

Published On: 10 July 2023, 03:38 PM English Summary: Developed the Mobile App for Fish Diseases and timely scientific advice to aqua-farmers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.