1. ಸುದ್ದಿಗಳು

ಸದ್ದಿಲ್ಲದೆ ಹೆಸರು ಮಾಡುತ್ತಿರುವ ಕಡಕನಾಥ ಕೋಳಿ

ಮಧ್ಯಪ್ರದೇಶ, ಛತ್ತೀಸಗಢ ರಾಜ್ಯದಲ್ಲಿ ಹೆಸರು ಮಾಡಿದ ಕಡಕನಾಥ ಈಗ ಕರ್ನಾಟಕದಲ್ಲಿಯೂ ಸದ್ದುಮಾಡುತ್ತಿದೆ. ಅಷ್ಟಕ್ಕೂ ಕಡಕ್ ನಾಥ್ ಅನ್ನೋದು ಯಾವುದೇ ವ್ಯಕ್ತಿಯ ಹೆಸರಾಗಲಿ, ವಸ್ತುವಿನ  ಹೆಸರಾಗಲಿ ಅಲ್ಲ. ಇದೊಂದು ದೇಶಿತಳಿಯ ಕೋಳಿಯ ಹೆಸರು.

ಇತ್ತೀಚೆಗೆ ಕೋವಿಡ್ ನಿಂದಾಗಿ  ಜಗತ್ತಿನಾದ್ಯಂತ ಲಕ್ಷಾಂತರ ಜನ ಪ್ರಾಣಕಳೆದುಕೊಂಡಿದ್ದಾರೆ. ಇನ್ನೂ ಲಸಿಕೆ ಬರದೆ ಇರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆಂಬು ಮಾತು ಕೇಳಿಬರುತ್ತಿದೆ. ಅದರಲ್ಲಿ ವಿಶೇಷವಾಗಿ ಕಡಕನಾಥ ಕೋಳಿ ಬಗ್ಗೆಯೂ ಹೆಚ್ಚು ಚರ್ಚೆಯಾಗುತ್ತಿದೆ. ಹೌದು ಈ ಕೋಳಿಯಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದರಿಂದ ಹೆಚ್ಚು ಚರ್ಚೆಯಾಗುತ್ತದೆ. ಕಡಕನಾಥ ಕೋಳಿಯ ಮೊಟ್ಟೆ ಹಾಗೂ ಮಾಂಸದ ಬೇಡಿಕೆಯೂ ಹೆಚ್ಚಿದೆ.

ನಾಟಿ ಕೋಳಿಯಂತೆ ಖಡಕ್ ನಾಥ ಕೋಳಿಗೆ ಬಗೆಬಗೆಯ ಬಣ್ಣ ಇರುವುದಿಲ್ಲ. ಮೈಯೆಲ್ಲಾ ಕಪ್ಪುಬಣ್ಣ ಇದ್ದು ನೋಡಲು ಆಕರ್ಷಣೆಯಾಗಿರುತ್ತವೆ. ತುಸು ಗಿಡ್ಡವಾಗಿರುತ್ತವೆ. ನಿರಂತರವಾಗಿ ಮೊಟ್ಟೆ ಹಾಕುತ್ತವೆ. ಆದರೆ ನಾಟಿ ಕೋಳಿಯಂತೆ ಚುರುಕುತನ ಇರುವುದಲ್ಲ ಬೇರೆ ಕೋಳಿಯ ಜೊತೆ ಬೆರೆಯದೆ ತಮ್ಮ ಸಂಗಾತಿ ಕೋಳಿಯ ಜೊತೆ ಓಡಾಡುತ್ತವೆ.

ಕಡಕ್ ನಾಥ್ ಹೆಚ್ಚು ಲಾಭದಾಯಕವೂ, ಹೆಸರುವಾಸಿಯಾದ ಕಪ್ಪುಕೋಳಿ ಬ್ಲಾಕ್ ಚಿಕನ್, ಆಯಾಮ್ ಸಿಮಾಲಿ ಅಂತ ಕೂಡ ಇದು ಪ್ರಚಲಿತ, ಕಡಕ್ ನಾಥ್ ಇತ್ತೀಚೆಗೆ ಹೆಚ್ಚು ಪ್ರಸಿದ್ಧಿಯಾಗ್ತಿರೋದಕ್ಕೆ ಆ ಕೋಳಿಯಲ್ಲಿರುವ ವಿಶೇಷತೆಗಳೇ ಕಾರಣ.

ಅಷ್ಟಕ್ಕೂ ಈ ಕೋಳಿಯ ಮೇಲ್ಮೈ ಕಪ್ಪು, ಮೂಳೆ,ಕಣ್ಣು, ಮಾಂಸ, ನಾಲಿಗೆಯೂ ಕಪ್ಪಾಗಿರುತ್ತದೆ.  ಬರಿ ಮೈಬಣ್ಣ ಕಪ್ಪಗಿದ್ದ ಮಾತ್ರಕ್ಕೆ ಇದು ವಿಶೇಷವಾಗಿದೆಯಾ ಅಂತಂದುಕೊಂಡಿದ್ದೀರಾ.. ಅದು ತಪ್ಪು.. ಯಾಕಂದ್ರೆ ಕಡಕ್ನಾಥ್ ತುಂಬೆಲ್ಲಾ ಔಷಧೀಯ ಗುಣಗಳೇ ಹೆಚ್ಚು. . ಈ ಕೋಳಿಯ ಮಾಂಸ ತಿನ್ನುವದರಿಂದ ಆರೋಗ್ಯ ಸುಧಾರಣೆ ಅದರಲ್ಲೂ ಮಹಿಳೆಯರ ಮುಟ್ಟಿನ ತೊಂದರೆ ಇತರೆ ಸಾಮಾನ್ಯ ಸಮಸ್ಯೆಗಳಿಗೆ ಇದು ಉತ್ತಮ ಔಷಧಿಯಂತೆ ಕೆಲಸ ಮಾಡುತ್ತದೆ. ಅಲ್ಲದೆ ಪುರುಷರ ‌ನರದೌರ್ಬಲ್ಯಕ್ಕೂ ಇದು ರಾಮಬಾಣವಂತೆ ಕೆಲಸ ಮಾಡುತ್ತದೆಯಂತೆ.

ಈ  ಕೋಳಿಗೆ ಹೈಪರ್ ಪಿಗ್ಮೆಂಟೇಷನ್, ಮೆಲಾನಿನ್ ಕಾರಣದಿಂದಲೇ ಕಪ್ಪು ಬಣ್ಣ ಬಂದಿದೆ. ಚೀನಾದಲ್ಲಿ ಬ್ಲಾಕ್ ಚಿಕನ್ ಅಂತಾನೆ ಇದು ಫೇಮಸ್. ಸಾಮಾನ್ಯವಾಗಿ ನಾಟಿ ಕೋಳಿ ಹೆಚ್ಚು ರುಚಿಕರ ಅಂತಾರೆ.ಇದು ಅದಕ್ಕಿಂತಲೂ ಹೆಚ್ಚು ಟೇಸ್ಟಿ..ರುಚಿಯಲ್ಲಷ್ಟೇ ಅಲ್ಲ. ಔಷಧೀಯ ಗುಣಗಳ ಸಾರವೇ ಇದರಲ್ಲಿ ಅಡಗಿದೆ.. ಇತರೆ ಕೋಳಿಗಳಲ್ಲಿ ಕೊಬ್ಬು ಹೆಚ್ಚಾಗಿರುತ್ತೆ. ಆದರೆ ಕಪ್ಪುಕೋಳಿ ಫ್ಯಾಟ್ಲೆಸ್. ಇದನ್ನ ರೋಗಿಗಳು ಕೂಡ ಬಳಸಬಹುದು. ಇದರ ಮಾಂಸ ನ್ಯೂಟ್ರಿಷಿಯನ್ ವ್ಯಾಲ್ಯೂ ಹೆಚ್ಚಿದೆ. ಅಮೋನೋ ಆಸಿಡ್ ಹೆಚ್ಚು, ಕ್ಯಾಲ್ಸಿಯಂ ಹೆಚ್ಚು, ಇದ್ರಲ್ಲಿ ಹಿಮೋಗ್ಲೋಬಿನ್ ಕೂಡ ಅಧಿಕವಾಗಿರುತ್ತದೆ.

ಕಡಕ್‌ನಾಥ್ ಕೋಳಿಗೆ ಅಪಾರ ಬೇಡಿಕೆ‌ ಇದ್ದು ವಿದೇಶಕ್ಕೆ ಜಾಸ್ತಿ ರಫ್ತಾಗುತ್ತಿದೆ. ಈ ಕಾರಕ್ಕೆ‌ ಖಡಕ್ ನಾಥ್ ಕೋಳಿಗೆ ಫುಲ್‌ ಡಿಮ್ಯಾಂಡ್ ಆಗಿದೆ.

ಇದು ಕಪ್ಪು ಬಣ್ಣದ್ದಾಗಿರುವ ಕಾರಣ ನಮ್ಮ ದೇಶದ ಜನ ಈ ಖಡಕ್ ನಾಥ ಕೋಳಿ ಮಾಂಸ ತಿನ್ನಲು ಹಿಂಜರಿಯುತ್ತಾರೆ. ಹೀಗಾಗಿ‌ ಇದರ ಸಾಕಾಣಿಕೆ ನಮ್ಮ ದೇಶದಲ್ಲಿ ಕಡಿಮೆ‌ ಇದೆ. ಆದರೆ ಮೋದಿಯವರು ಕೊಟ್ಟ ಐಡಿಯಾ‌ ಆಗಿದ್ದರಿಂದ ಇದೀಗ ಈ ಕೋಳಿ ಬೇಡಿಕೆ ಅರಿತಿರುವ ಜನ ಕಡಕ್ ನಾಥ್ ಕೋಳಿ ಸಾಗಾಣಿಕೆಗೆ‌ ಯೋಚನೆ ಮಾಡ್ತಿದ್ದಾರೆ ಎನ್ನಲಾಗಿದೆ

ಕೃಷಿಕರು ಈ ಕೋಳಿಗಳ ಸಾಕಾಣಿಕೆ‌ ಮಾಡಬಹುದು. ಆದರೆ ಅಲ್ಲಿನ ವಾತಾವರಣ‌ ಹೊಂದಿಕೊಂಡ ಅವುಗಳು ಬೇರೆ ರಾಜ್ಯಗಳ ಹವಾಮಾನಕ್ಕೆ ಹೊಂದಿಕೊಳ್ಳುತ್ತವೆಯೋ ಇಲ್ಲವೆಂಬುದನ್ನು ಪರಮಾರ್ಶಿಸಿ ಕಡಕ್ ನಾಥ್ ಕೋಳಿ ಸಾಗಾಣಿಕೆ‌ ಮಾಡಬಹುದು.

Published On: 02 December 2020, 10:24 PM English Summary: Demand For Kadaknath Chicken

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.