1. ಸುದ್ದಿಗಳು

Delhi AIIMS server hack: 200 ಕೋಟಿ Cryptocurrency ಬೇಡಿಕೆ! ಪೊಲೀಸರು ಹೇಳಿದ್ದೇನು..?

Maltesh
Maltesh

ದೇಶದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ ದೆಹಲಿಯ ಏಮ್ಸ್ (Delhi AIIMS) ಸರ್ವರ್ ಹ್ಯಾಕ್  ಆಗಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಸಂಪೂರ್ಣ ಆಸ್ಪತ್ರೆಯ ಸಾಫ್ಟ್‌ವೇರ್‌ಗಳು ಮಂದಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ರೋಗಿಗಳ ಡೇಟಾ ನಿರ್ವಹಣೆ ಮಾಡುವುದು ಸವಾಲಾಗಿದೆ. ಅಷ್ಟೇ ಅಲ್ಲದೆ ಸಾಕಷ್ಟು ಗಣ್ಯರ ಡಾಟಾಗಳನ್ನು ಕೂಡ ಹ್ಯಾಕರ್‌ಗಳೂ ಹ್ಯಾಕ್‌ ಮಾಡಿದ್ದಾರೆಎ ಎನ್ನಲಾಗುತ್ತಿದೆ.

ಸದ್ಯ ಹ್ಯಾಕರ್‌ಗಳು AIIMS ನಿಂದ 200 ಕೋಟಿ ರೂ. ಕ್ರಿಪ್ಟೋ ಕರೆನ್ಸಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.ಈ ಕುರಿತಂತೆ ಸಾಕಷ್ಟು ವರದಗಳಾಗಿವೆ. ಸದ್ಯ ಈ ಕುರಿತು ದೆಹಲಿ ಪೊಲೀಸರು ಮಾಹಿತಿ ನೀಡಿದದ್ದು, ಈ ವದಂತಿಗಳನ್ನು ಅಲೆಗಳೆದಿದ್ದಾರೆ. ಹ್ಯಾಕರ್‌ಗಳು ಯಾವುದೇ ರೀತಿಯ ಸುಲಿಗೆಗೆ ಬೇಡಿಕೆ ಇಟ್ಟಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಪಿಎಂ ಕಿಸಾನ್‌ ಫಲಾನುಭವಿಗಳಿಗೆ ಬಿಗ್‌ ನ್ಯೂಸ್‌: ನವೆಂಬರ್‌ 30ರಂದು ಖಾತೆಗೆ ಬರಲಿದೆ ಹಣ

ಆಸ್ಪತ್ರೆಯ ಒಪಿಡಿ ಮತ್ತು ಐಪಿಡಿಗೆ ಬರುವ ರೋಗಿಗಳು ಚಿಕಿತ್ಸೆ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಸರ್ವರ್ ಸ್ಥಗಿತದಿಂದಾಗಿ ಆನ್‌ಲೈನ್ ಅಪಾಯಿಂಟ್‌ಮೆಂಟ್ ಬುಕಿಂಗ್ ಮತ್ತು ಟೆಲಿಕನ್ಸಲ್ಟೇಶನ್‌ನಂತಹ ಡಿಜಿಟಲ್ ಸೇವೆಗಳು ಸಹ ಪರಿಣಾಮ ಬೀರಿವೆ. ಆದಾಗ್ಯೂ, ಈ ಎಲ್ಲಾ ಸೇವೆಗಳನ್ನು ಕೈಯಾರೆ ನಡೆಸಲಾಗುತ್ತಿದೆ.

ನೆಟ್ವರ್ಕ್ನ ಸಂಪೂರ್ಣ ದೋಷದಿಂದ ಮುಕ್ತಗೊಳಿಸಲು ಇನ್ನೂ 5 ದಿನಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಇದರ ನಂತರ, ಇ-ಆಸ್ಪತ್ರೆ ಸೇವೆಗಳನ್ನು ಪ್ರಾರಂಭಿಸಬಹುದು. ಒಪಿಡಿ, ಎಮರ್ಜೆನ್ಸಿ, ಇನ್ ಪೇಷಂಟ್ ಲ್ಯಾಬೋರೇಟರಿ ಇತ್ಯಾದಿ ಸೇವೆಗಳನ್ನು ಮ್ಯಾನುವಲ್ ಮೋಡ್‌ನಲ್ಲಿ ಮುಂದುವರಿಸಲಾಗುತ್ತಿದೆ.

ಪ್ರಕರಣದ ಹಿನ್ನೆಲೆ..!

ನವೆಂಬರ್ 23 ರಂದು ransomware ದಾಳಿಯಿಂದ AIIMS ನ ಸರ್ವರ್ ಹ್ಯಾಕ್ ಆಗಿದೆ. ಇದರಿಂದ ಆಸ್ಪತ್ರೆಯ ಸೇವೆಗೆ ತೊಂದರೆಯಾಗಿದೆ. ಬಳಿಕ ಏಮ್ಸ್ ಭದ್ರತಾ ಅಧಿಕಾರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ದೇಶದ ಎಲ್ಲಾ ದೊಡ್ಡ ಮತ್ತು ಪ್ರಸಿದ್ಧ ವ್ಯಕ್ತಿಗಳ ವೈದ್ಯಕೀಯ ದಾಖಲೆಗಳು ಮತ್ತು ಇತರ ಮಾಹಿತಿಯು ಏಮ್ಸ್ ನವದೆಹಲಿಯ ಸರ್ವರ್‌ನಲ್ಲಿದೆ.

ಬಿಗ್‌ನ್ಯೂಸ್‌: ರಾಜ್ಯದ 34 ಲಕ್ಷ ರೈತರಿಗೆ 24 ಸಾವಿರ ಕೋಟಿ ಸಾಲ ನೀಡಲು ತಿರ್ಮಾನ..ಸಿಎಂ ಘೋಷಣೆ

ಇದರಲ್ಲಿ ರಾಷ್ಟ್ರಪತಿ, ಪ್ರಧಾನಿ, ಮಾಜಿ ಪ್ರಧಾನಿ ಮತ್ತು ಇತರ ಹಲವು ಸಚಿವರ ದತ್ತಾಂಶವೂ ಸೇರಿದೆ. ಅಂತಹ ಪರಿಸ್ಥಿತಿಯಲ್ಲಿ, ಸರ್ವರ್‌ನಲ್ಲಿರುವ ಮಾಹಿತಿಯನ್ನು ಬಹಳ ಸೂಕ್ಷ್ಮವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ, ಹ್ಯಾಕಿಂಗ್ ಸಾಧ್ಯತೆ ಮುನ್ನೆಲೆಗೆ ಬಂದಾಗ, ತಕ್ಷಣವೇ ಸೈಬಲ್ ಸೆಲ್‌ಗೆ ಮಾಹಿತಿ ನೀಡಲಾಯಿತು ಮತ್ತು ವಿಷಯದ ತನಿಖೆಯನ್ನು ಪ್ರಾರಂಭಿಸಲಾಯಿತು.

Published On: 29 November 2022, 10:13 AM English Summary: Delhi AIIMS Server Hack: 200 Crore Cryptocurrency Demand!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.