1. ಸುದ್ದಿಗಳು

ಸೇವಾ ನ್ಯೂನ್ಯತೆ : ಸೋಲಾರ್‌ ಕಂಪನಿಗೆ 50 ಸಾವಿರ ರೂ ಫೈನ್‌! ಏನಿದು ಕೇಸ್‌..?

Maltesh
Maltesh
Deficiency of service: Rs 50 thousand fine for solar company!

ಧಾರವಾಡ : ಧಾರವಾಡದ, ತಪೋವನ ನಗರದ ನಿವಾಸಿಯಾದ ಮಹಾದೇವಿ ಮಠಪತಿ ಅನ್ನುವವರು ತಮ್ಮ ವಸತಿ ನಿಲಯಕ್ಕೆ ಸುಮಾರು ರೂ.1 ಲಕ್ಷ 18 ಸಾವಿರದ 500/- ಗಳನ್ನು ವಿನಿಯೋಗಿಸಿ ಬೆಂಗಳೂರಿನ ಅನು ಕಂಪನಿಯ ಸೋಲಾರ ವಾಟರ್ ಹೀಟರ್‍ಗಳನ್ನು ಡೀಲರ್ ಕಡೆಯಿಂದ ಹಾಕಿಸಿದ್ದರು.

ಅವುಗಳ ಬಳಕೆ ಸಮಯದಲ್ಲಿ ಆ ವಾಟರ್ ಹೀಟರ್‍ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಹಾಗೂ ವಾಟರ್ ಟ್ಯಾಂಕ್‍ನಲ್ಲಿ ಲಿಕೇಜ ಇದೆ ಅಂತಾ ಅದನ್ನು ಸರಿಪಡಿಸಿಕೊಡಲು ಎದುರುದಾರರಿಗೆ ಹಲವು ಬಾರಿದೂರು ಸಲ್ಲಿಸಿದ್ದರು.  ಆದರೂ ಸದರಿ ಸೋಲಾರ್ ಕಂಪನಿ ಅಥವಾ ಡೀಲರ್‍ಗಳು ದೂರುದಾರರ ಕೋರಿಕೆಯನ್ನು ಮನ್ನಿಸಿರಲಿಲ್ಲ. ಆದ್ದರಿಂದ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಎದುರುದಾರರು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅವರ ವಿರುದ್ಧಕ್ರಮ ಕೈಗೊಳ್ಳಲು ದೂರುದಾರರು ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಕೆ.ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭುಸಿ. ಹಿರೇಮಠ ಅವರು 2018 ರಲ್ಲಿ 500 ಲೀಟರ್ ಸಾಮಥ್ರ್ಯದ ಮೂರು ಸೋಲಾರ್ ವಾಟರ್ ಹೀಟರ್‍ಗಳನ್ನು ಎದುರುದಾರರು ಹಣ ಪಡೆದು ದೂರುದಾರರಿಗೆ ಮಾರಾಟ ಮಾಡಿದ್ದು, ವಾರಂಟಿ ಅವಧಿಯಲ್ಲಿ ನ್ಯೂನ್ಯತೆ ಕಂಡು ಬಂದಿದ್ದರೂ ಅದನ್ನು ಸರಿಪಡಿಸದೇ ಇರುವುದು ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗಿರುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ಮೆಣಸಿನಕಾಯಿ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಇಲ್ಲಿವೆ ಉತ್ತಮ ಸಲಹೆಗಳು

 ಎದುರುದಾರ ಸೋಲಾರ ಕಂಪನಿ ಮತ್ತು ಡೀಲರ್‍ರವರಿಂದ ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ದೂರುದಾರರಿಗೆ ರೂ.50,000/- ಪರಿಹಾರ ಮತ್ತು ರೂ.5,000/- ಪ್ರಕರಣದ ಖರ್ಚು ವೆಚ್ಚ ಒಟ್ಟು ರೂ.55,000/- ಎದುರುದಾರರು ನೀಡುವಂತೆ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.

ಸೈನಿಕ ವಸತಿ ನಿಲಯಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

2023-24ನೇ ಶೈಕ್ಷಣಿಕ ವರ್ಷಕ್ಕಾಗಿ ಧಾರವಾಡ ಶಹರದ ಸಪ್ತಾಪೂರ ರಸ್ತೆಯಲ್ಲಿರುವ ಮಿಲಿಟರಿ ಬಾಲಕಿಯರ ವಸತಿ ನಿಲಯದಲ್ಲಿ ಧಾರವಾಡ, ಗದಗ, ಹಾವೇರಿ, ಮತ್ತು ಬಳ್ಳಾರಿ ಜಿಲ್ಲೆಗಳ ಗ್ರಾಮಾಂತರ ಪ್ರದೇಶ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿರುವ ಯುದ್ಧದಲ್ಲಿ ಮಡಿದ ಯೋಧರ ಮತ್ತು ಮಾಜಿ ಸೈನಿಕರ ಹೆಣ್ಣು ಮಕ್ಕಳಿಗೆ ಮೆಟ್ರಿಕ್ ಪೂರ್ವ 5ನೇ ತರಗತಿಯಿಂದ 10ನೇ ತರಗತಿಯವರೆಗೆ ಹಾಗೂ ಮೆಟ್ರಿಕ್ ನಂತರ ಪಿಯುಸಿ 1 ಮತ್ತು 2 ಆದ್ಯತೆ ಹಾಗೂ ಅರ್ಹತೆ ಮೇರೆಗೆ ವಸತಿ ನಿಲಯದಲ್ಲಿ ಉಚಿತ ಪ್ರವೇಶವನ್ನು ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಧಾರವಾಡ ನಗರದಲ್ಲಿರುವ ವಿದ್ಯಾ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ನಂತರ ನಿಲಯದಲ್ಲಿ ಪ್ರವೇಶ ನೀಡಲಾಗುವದು.  

PM Kisan: ಪಿಎಂ ಕಿಸಾನ್ 14 ನೇ ಕಂತಿನ ಮಹತ್ವದ ಅಪ್‌ಡೇಟ್‌..14 ಕೋಟಿ ರೈತರಲ್ಲಿ ಹೊಸ ನೀರಿಕ್ಷೆ!

 ಅರ್ಜಿ ಸಲ್ಲಿಸಲು ಜೂನ್ 1 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಾರ್ಯಲಯ ಆವರಣದಲ್ಲಿರುವ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ  ಸಂಪರ್ಕಿಸಬಹುದು  ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Image Courtesy @freepik

Published On: 25 April 2023, 03:22 PM English Summary: Deficiency of service: Rs 50 thousand fine for solar company!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.