1. ಸುದ್ದಿಗಳು

2 ಸಾವಿರದ ನೋಟುಗಳಲ್ಲಿ ಇಳಿಕೆ: ಎಲ್ಲೂ ಸಿಗ್ತಿಲ್ಲವಂತೆ ನೋಟು! ಹಾಗಿದ್ರೆ RBI ವರದಿಯಲ್ಲೇನಿದೆ?

Kalmesh T
Kalmesh T
Decrease in 2 thousand notes: See nowhere!

ಕೆಲವು ವರ್ಷಗಳಿಂದ ಎರಡು ಸಾವಿರ ರೂಪಾಯಿಯ ನೋಟುಗಳ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡು ಬಂದಿದೆ ಎಂದು ಆರ್ಬಿಐ (Reserve Bank Of India) ವರದಿ ಮಾಡಿದೆ.

ಇದನ್ನೂ ಓದಿರಿ: ಕ್ರೆಡಿಟ್‌ ಕಾರ್ಡ್‌ಗಳಿಗೆ ಹೊಸ ನಿಯಮ ತಂದ RBI..ಭಾರೀ ಬದಲಾವಣೆ

SBI ಬಂಪರ್ ಆಫರ್ : ದಾಖಲೆಗಳಿಲ್ಲದೇ 8 ಲಕ್ಷದವರೆಗೆ ಸಾಲ! ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೆ?

ಕಳೆದ ಕೆಲ ವರ್ಷಗಳಿಂದ ₹2,000 ಮುಖಬೆಲೆಯ ನೋಟುಗಳ ಸಂಖ್ಯೆಯಲ್ಲಿ ನಿರಂತರ ಕುಸಿತ ಕಂಡುಬಂದಿದೆ. ಈ ವರ್ಷದ March ಅಂತ್ಯದ ವೇಳೆಗೆ, ಒಟ್ಟು Currency ನೋಟುಗಳಲ್ಲಿ ₹2000 ಮುಖಬೆಲೆಯ ಪಾಲು ಶೇ.1.6 ಕ್ಕೆ ಇಳಿದಿದೆ.

ಅಂದರೆ 2 ಸಾವಿರ ಮುಖಬೆಲೆಯ 214 ಕೋಟಿ ನೋಟುಗಳು ಚಲಾವಣೆಯಲ್ಲಿವೆ. ಇತ್ತೀಚೆಗೆ ಬಿಡುಗಡೆಯಾದ RBI ವಾರ್ಷಿಕ ವರದಿಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ.

ಪಿಎಂ ಕಿಸಾನ್‌ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!

PM Kisan: ಪಿಎಂ ಕಿಸಾನ್‌ ಮುಂದಿನ ಕಂತು ಈ ಜನರಿಗೆ ಸಿಗುವುದಿಲ್ಲ..!

ನೋಟುಗಳ ಬಗೆಗಿನ ಮಾಹಿತಿ

2022ರ ಮಾರ್ಚ್‌ವರೆಗೆ ಎಲ್ಲಾ ಮುಖಬೆಲೆಯ ನೋಟುಗಳ ಒಟ್ಟು ಸಂಖ್ಯೆ 13,053 ಕೋಟಿಯಷ್ಟಿದೆ. ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಈ ನೋಟುಗಳ ಪ್ರಮಾಣ 12,437 ಕೋಟಿಯಷ್ಟಿತ್ತು.

ಆರ್‌ಬಿಐ ವಾರ್ಷಿಕ ವರದಿಯ ಪ್ರಕಾರ, ಮಾರ್ಚ್ 2020 ರ ಅಂತ್ಯದ ವೇಳೆಗೆ ಚಲಾವಣೆಯಲ್ಲಿರುವ 2000 ರೂಪಾಯಿ ಮುಖಬೆಲೆಯ ನೋಟುಗಳ ಸಂಖ್ಯೆ 274 ಕೋಟಿಯಷ್ಟಿದೆ. ಈ ಅಂಕಿ ಅಂಶವು ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿ ನೋಟುಗಳ ಶೇಕಡಾ 2.4 ರಷ್ಟಿತ್ತು.

ನೌಕರರಿಗೆ Good News! EPFO ಉದ್ಯೋಗಿಗಳ ಖಾತೆಗೆ ಶೀಘ್ರದಲ್ಲೆ ಬರಲಿದೆ ಬಡ್ಡಿ ಹಣ! ಈಗಲೇ ಚೆಕ್‌ ಮಾಡಿ

ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?

2021ರ ಮಾರ್ಚ್ ವೇಳೆಗೆ, ಚಲಾವಣೆಯಲ್ಲಿರುವ ₹2000 ಮುಖಬೆಲೆಯ ನೋಟುಗಳ ಸಂಖ್ಯೆ 245 ಕೋಟಿಗೆ ಇಳಿಕೆಯಾಯಿತು. ಅಂದರೆ ಒಟ್ಟು ನೋಟುಗಳ ಸಂಖ್ಯೆಯಲ್ಲಿ ಶೇ.2ಕ್ಕೆ ಇಳಿಕೆಯಾಯಿತು.

ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ ಈ ಸಂಖ್ಯೆ ಮತ್ತಷ್ಟು ಕುಸಿದು 214 ಕೋಟಿಗೆ (ಶೇ.1.6ಕ್ಕೆ) ಇಳಿದಿದೆ.

Published On: 30 May 2022, 11:53 AM English Summary: Decrease in 2 thousand notes: See nowhere!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.