1. ಸುದ್ದಿಗಳು

ಮರಣಹೊಂದಿದ ತಿಮಿಂಗಿಲ ಏಕೆ ಅಪಾಯಕಾರಿ ?

whale

ಮಾನವನ ದೈನಂದಿನ ಚಟುವಟಿಕೆಗಳಿಂದ ನೈಸರ್ಗಿಕ ಸಂಪನ್ಮೂಲಗಳು ಆದ ಗಾಳಿ, ಹಾಗೂ ನೀರು ಮುಂತಾದವುಗಳ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಿದೆ.ಇದರಿಂದ ಅನೇಕ ಜಲಸಂಪನ್ಮೂಲಗಳು (ಕೆರೆ,ನದಿ,ಹಳ್ಳ) ಹಾಳಾಗುತ್ತಿದ್ದು,ಇದರಿಂದಅಲ್ಲಿನ ಜೀವ ಸಂಕುಲಕ್ಕೆ ಕುತ್ತಾಗಿ ಪರಿಣಮಿಸಿದೆ. ಆದ ಕಾರಣ ಅನೇಕಜೀವಿಗಳು ಅಸಹಜನೀಯ ಮರಣ ಹೊಂದುತ್ತಿವೆ. ಅವುಗಳಲ್ಲಿ ತಿಮಿಂಗಲುಗಳ ಸಾವು ತುಂಬಾ ಆತಂಕಕಾರಿ ವಿಷಯವಾಗಿದೆ.

ಹೌದು ,ತಿಮಿಂಗಲವು ಜಲಚರಗಳಲ್ಲಿ ಅತೀ ದೊಡ್ಡ ಸಸ್ತನಿಯಾಗಿದೆ. ಸಮುದ್ರ, ನದಿ ಮುಂತಾದವುಗಳ ಜೀವವೈವಿಧ್ಯತೆಗೆ ಸಾಕ್ಷಿಯಾಗಿವೆ. ಈ ಜೀವಿಗಳು ಸತ್ತಾಗ ಸಾಮಾನ್ಯವಾಗಿ ದಡದ ಹತ್ತಿರ ಇವುಗಳ ದೇಹ ಕಾಣ ಸಿಗುತ್ತದೆ,ಹಾಗೂ ಮನುಷ್ಯರು ಕುತೂಹಲಕ್ಕೆ ಒಳಗಾಗಿ ಅದರ ಹತ್ತಿರ ಹೋದರೆ ಅಪಾಯಕಟ್ಟಿಟ್ಟ ಬುತ್ತಿ . ಹಾಗಾದರೆ ಯಾವ ಕಾರಣಗಳಿಂದ ಅದು ಅಪಾಯಕಾರಿಎಂದು ನೋಡೋಣ.

ತಿಮಿಂಗಲುಸತ್ತ ನಂತರ ಅದರ ಉಸಿರಾಟ ನಿಂತು, ಇಂಗಾಲದ ಡೈಆಕ್ಸಡ್ ಪ್ರಮಾಣದೇಹದಲ್ಲಿ ಜಾಸ್ತಿ ಆಗುತ್ತದೆ, ಇದರಿಂದಅದರ ದೇಹದಲ್ಲಿ ಆಮ್ಲೀಯಸ್ಥಿತಿ (acidic condition)ಉಂಟಾಗುತ್ತದೆ, ಇದರಿಂದ ಜೀವಕೋಶಗಳು (cell)  ತಮ್ಮ ಸಹಜಸ್ಥಿತಿಯನ್ನು ಕಳೆದುಕೊಳ್ಳುತ್ತವೆ

ಜೀವಕೋಶಗಳು (cell) ತಮ್ಮ ಮೊದಲಿನ ಸ್ಥಿತಿ ಕಳೆದುಕೊಂಡ ಪರಿಣಾಮ ಅವು ಸಹ ನಿರ್ಜೀವ ಹೊಂದಿ ತಮ್ಮಲಿನ ಅಂಶಗಳಾದ ಪ್ರೋಟೀನ್,ಶರ್ಕರಪಿಷ್ಟ (carbohydrates) ಮುಂತಾದವುಗಳನ್ನು ಬಿಡುಗಡೆಗೊಳಿಸುತ್ತವೆ..

ಇವುಗಳ ಮೇಲೆ ದೇಹದಲ್ಲಿನ ಬ್ಯಾಕ್ಟೀರಿಯ ಮತ್ತು ಇತರೆ ಸೂಕ್ಷ್ಮಾಣುಜೀವಿಗಳು ಅವುಗಳನ್ನು ಜೀರ್ಣಿಸಿಕೊಂಡುಇಂಗಾಲದ ಡೈಆಕ್ಸೈಡ್, ಮೀಥೇನ್, ಹಾಗೂ ಅನೇಕ ಅನಿಲಗಳನ್ನು ಬಿಡುಗಡೆ ಮಾಡುತ್ತವೆ .

ಆದ ಕಾರಣ ತಿಮಿಂಗಲಿನದೇಹ ನಿಧಾನವಾಗಿ ಉಬ್ಬಿಕೊಳ್ಳಲು ಪ್ರಾರಂಭಿಸುತ್ತದೆ.(bloating), ಹಾಗೂ ಅದರ ಗಾತ್ರವುಹೆಚ್ಚಾಗುತ್ತಾ ಹೋಗುತ್ತದೆ. 

ಇಷ್ಟೊಂದು ಗಾತ್ರದಲ್ಲಿ ಉತ್ಪಾದನೆಯಾದ ಅನಿಲಗಳುಬಾಯಿ ಮತ್ತು ಮುಂತಾದವುಗಳ ಮೂಲಕ ಹೊರಹೋಗಬಹುದು ಆದರೆ ದೇಹವು ಉಬ್ಬಿದ ಕಾರಣ ಅವುಗಳ ಗಾತ್ರ ಸಣ್ಣವಾಗುವುದರಿಂದ ಅವು ಹೊರಹೋಗಲು ಯಾವುದೇ ದಾರಿ ಇರುವುದಿಲ್ಲ.

ಹಾಗೆಯೇತಿ ಮಿಂಗಿಲಗಳು ದೈತ್ಯಾಕಾರದದೇಹ ಹೊಂದಿರುವುದರಿಂದ,ಅದರ ತಕ್ಕಂತೆ ಅನಿಲಗಳು ಬಾರಿ ಪ್ರಮಾಣದಲ್ಲಿ ರೂಪುಗೊಂಡಿರುತ್ತವೆ,ಇವುಗಳ ಒತ್ತಡ ಜಾಸ್ತಿಯಾದಂತೆ ದೇಹವು ಒಡೆದುಹೋಗಿ ಒಳಗಿನ ಎಲ್ಲಾ ಅಂಗಾಂಗಗಳು ಹೊರ ಚೆಲ್ಲುತ್ತವೆ.

ಹಲವು ತಜ್ಞರ ಪ್ರಕಾರ ದೇಹವು ಒಡೆದಾಗ ಅದು ಒಂದು ಮಿನಿಸ್ಪೋಟದಂತೆ ಕಾಣುವುದು ಹಾಗೂ ಅದರ ವೇಗವು ಪ್ರತಿ ಗಂಟೆಗೆ ಎಪ್ಪತ್ತು ಕಿಲೋ ಮೀಟರ್ನಷ್ಟು ಇರುತ್ತದೆ ಹಾಗೂ ಅದರ ಅಂಗಾಂಗಗಳು ಅದರಸುತ್ತಿನ 50 ಮೀಟರ್ನ ವರೆಗೂ ಸಿಡಿಯುತ್ತದೆ ಎನ್ನುತ್ತಾರೆ.

ಈಗಿನ ಕಾಲದಲ್ಲಿ ಹಲವು ಪರಿಣಿತ ಕೆಲಸಗಾರರು ಈ ಘಟನೆಯಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಅದರ ದೇಹವನ್ನು ಆಧುನಿಕವಿಧಾನಗಳನ್ನು ಬಳಸಿ ಅದನ್ನು ನಿಯತ್ರಿಂತವಾಗಿ ನಿಭಾಯಿಸುತ್ತಾರೆ.ಆದ ಕಾರಣಯಾರೂ ಮರಣ ಹೊಂದಿದ ತಿಮಿಂಗಲದ ದೇಹದ ಹತ್ತಿರ ಹೋಗಬಾರದು.

ಲೇಖಕರು: ಆತ್ಮಾನಂದ ಹೈಗರ್

Published On: 02 January 2021, 10:08 PM English Summary: dead whale explosion effect

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.