1. ಸುದ್ದಿಗಳು

Breaking News: 14 ಬಾರಿ ದಸರಾ ಅಂಬಾರಿ ಹೊತ್ತಿದ್ದಆನೆ ಬಲರಾಮ ಇನ್ನಿಲ್ಲ!

Kalmesh T
Kalmesh T
Balarama Elephant is no more: He carried Dasara Ambari 14 times!

Dasara Elephant Balarama : ಡ ಹಬ್ಬವೆಂದೆ ಪ್ರಿಸಿದ್ದಿ ಪಡೆದಿರುವ ದಸರಾ ಹಬ್ಬದಲ್ಲಿ 14 ಬಾರಿ ಅಂಬಾರಿ ಹೊರುವ ಮೂಲಕ ಮನೆ ಮಾತಾಗಿದ್ದ ಬಲರಾಮ ಆನೆ (Balarama Elephant) ಇನ್ನಿಲ್ಲ.

ಮೈಸೂರು ದಸರಾದ (mysore dasara) ಸಂಭ್ರಮ ಹೆಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಂಬಾರಿ ಹೊರುವ ಆನೆಗಳಲ್ಲಿ ಒಂದಾದ ಬಲರಾಮ ಆನೆ ಇಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದೆ

ಮೈಸೂರು ಚಾಮುಂಡೇಶ್ವರಿ ದೇವಿಯನ್ನ ಚಿನ್ನದ ಅಂಬಾರಿಯಲ್ಲಿ ಹೊತ್ತು ರಾಜಬೀದಿಗಳಲ್ಲಿ ಸಾಗುತ್ತಿದ್ದ ಬಲರಾಮ (67) ಇದೀಗ ಸಾವನ್ನಪ್ಪಿದೆ

Balarama Elephant is no more : ಬರೋಬ್ಬರಿ 14 ಸಲ ಅಂಬಾರಿಯನ್ನು ಹೊತ್ತಿದ್ದ ಬಲರಾಮ, ಅನಾರೋಗ್ಯದಿಂದ ಅಸ್ವಸ್ಥಗೊಂಡಿತ್ತು. ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್‌ನ ಭೀಮನಕಟ್ಟೆ ಆನೆ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ. ಬಲರಾಮನಿಗೆ ಕಳೆದ ಹತ್ತು ದಿನಗಳಿಂದ ಬಾಯಲ್ಲಿ ಹುಣ್ಣಾಗಿತ್ತು.

ಇದರಿಂದ ಆಹಾರ ಸೇವಿಸಲು ಸಾಧ್ಯವಾಗದೆ ನಿತ್ರಾಣಗೊಂಡಿತ್ತು ಎನ್ನುವ ಮಾಹಿತಿ ಇದೆ. ಇದು ಟಿಬಿ (ಕ್ಷಯ) ಇರಬಹುದೆಂದು ವೈದ್ಯರು ತಿಳಿಸಿದ್ದಾರೆ.

ವಿಶ್ವ ವಿಖ್ಯಾತ ಮೈಸೂರು ದಸರೆಯಲ್ಲಿ 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಭಾನುವಾರ ಸಂಜೆ ಕೊನೆಯುಸಿರೆಳೆದಿದೆ.

ತೀವ್ರ ಅಸ್ವಸ್ಥಗೊಂಡಿದ್ದ ಬಲರಾಮ ಆನೆಗೆ ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್‌ನ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.

ಆಹಾರ ಸೇವಿಸಲು, ನೀರು ಕುಡಿಯಲು ಆಗದಂತಹ ಸ್ಥಿತಿ ಉಂಟಾಗಿದ್ದರಿಂದ ನಾಗರಹೊಳೆ ಪಶುವೈದ್ಯ ಡಾ.ರಮೇಶ್ ಸ್ಥಳದಲ್ಲೇ ಉಳಿದುಕೊಂಡು  ಚಿಕಿತ್ಸೆ ನೀಡುತ್ತಿದ್ದರು.

Published On: 07 May 2023, 09:19 PM English Summary: Dasara Elephant Balarama is no more: He carried Dasara Ambari 14 times!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.