1. ಸುದ್ದಿಗಳು

ಜೂನ್ 14 ರಿಂದ ಜಿಲ್ಲೆಯಾದ್ಯಂತ ದೈನಂದಿನ ಲಾಕ್ ಡೌನ್ ಸಡಿಲಿಕೆ, ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ ಜಾರಿ

ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಕಲಬುರಗಿ ಜಿಲ್ಲೆಯಾದ್ಯಂತ ಜೂನ್ 14ರ ಬೆಳಗ್ಗೆ 6 ಗಂಟೆಯಿಂದ ಜೂನ್ 21ರ ಬೆಳಿಗ್ಗೆ 6 ಗಂಟೆ ವರೆಗೆ ಅತ್ಯಗತ್ಯ ಸೇವೆಗಳ ಜೊತೆಗೆ ಕೃಷಿ, ಕೈಗಾರಿಕೆ ಚಟುವಟಿಕೆಗಳಿಗೆ ಅನುಮತಿ ನೀಡುವ ಮೂಲಕ ಲಾಕ್ ಡೌನ್ ಸಡಿಲಿಗೊಳಿಸಿದಲ್ಲದೆ ವಿಪತ್ತು ನಿರ್ವಹಣಾ ಕಾಯ್ದೆ-2005 ಕಲಂ 34 (ಎಂ) ರನ್ವಯ ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸಾö್ನ ಅವರು ರವಿವಾರ ಆದೇಶ ಹೊರಡಿಸಿದ್ದಾರೆ.

ದೈನಂದಿನ ಲಾಕ್ ಡೌನ್ ಸಡಿಲಿಕೆಯನ್ವಯ ಜೂನ್ 14ರ ಬೆಳಿಗ್ಗೆ 6 ಗಂಟೆಯಿAದ ಜೂನ್ 18ರ ರಾತ್ರಿ 7 ಗಂಟೆ ವರೆಗೆ ಅನುಮತಿಸಲಾದ ಚಟುವಟಿಕೆಗಳ ವಿವರ ಇಂತಿದೆ:

ಅಗತ್ಯ ವಸ್ತುಗಳಾದ ಹಾಲು, ಆಸ್ಪತ್ರೆಗಳು, ಔಷಧಿ ಅಂಗಡಿಗಳು ಹಾಗೂ ಅಗತ್ಯ ಸೇವೆಗಳಾದ ಅಂಬುಲೆನ್ಸ್, ಅಗ್ನಿಶಾಮಕ ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳು, ವಿದ್ಯುತ್, ಪೆಟ್ರೋಲ್ ಪಂಪ್, ನೀರು, ನೈರ್ಮಲ್ಯ ಸೇವೆಗಳಿಗೆ ಅನುಮತಿಸಲಾಗಿದೆ. ಆರೋಗ್ಯ ವಲಯಕ್ಕೆ ಸಂಬಂಧಿಸಿದ ಕೌಶಲ್ಯ ತರಬೇತಿಗಳನ್ನು ಆಯೋಜಿಸಲು ಅನುಮತಿಸಲಾಗಿದೆ.

ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೃಷಿ ಮತ್ತು ಕೃಷಿ ಸಂಬAಧಿತ ಚಟುವಟಿಕೆಗಳು, ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ ಅಂಗಡಿಗಳಿಗೆ, ಆಹಾರ, ದಿನಸಿ/ಕಿರಾಣಿ ಅಂಗಡಿಗಳು, ಹಣ್ಣು-ತರಕಾರಿಗಳು, ಡೈರಿ ಮತ್ತು ಹಾಲಿನ ಬೂತ್‌ಗಳು, ಮಾಂಸ ಮತ್ತು ಮೀನು ಮತ್ತು ಪ್ರಾಣಿಗಳ ಮೇವುಗಳೊಂದಿಗೆ ವ್ಯವಹರಿಸುವ ಅಂಗಡಿಗಳು ತೆರೆಯಲು, ಆಪ್ಟಿಕಲ್ ಅಂಗಡಿಗಳು ತೆರೆಯಲು, ಬೀದಿ ಬದಿ ಮಾರಾಟಗಾರರ ವ್ಯಾಪಾರಕ್ಕೆ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸಲು ಅನುಮತಿಸಲಾಗಿರುತ್ತದೆ.

ವಾಕಿಂಗ್ ಮತ್ತು ಜಾಗಿಂಗ್ ಉದ್ದೇಶಕ್ಕಾಗಿ ಬೆಳಿಗ್ಗೆ 5 ರಿಂದ ಬೆಳಿಗ್ಗೆ 10 ಗಂಟೆ ವರೆಗೆ ಉದ್ಯಾನವನಗಳನ್ನು ತೆರೆಯಲು ಅನುಮತಿ ನೀಡಿದೆ, ಆದರೆ ಗುಂಪು ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.

ಎಲ್ಲಾ ಉತ್ಪಾದನಾ ಘಟಕಗಳು / ಕೈಗಾರಿಕೆಗಳು ಶೇ.50ರಷ್ಟು ಸಿಬ್ಬಂದಿಯೊAದಿಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಆದರೆ ಗಾರ್ಮೆಂಟ್ ತಯಾರಿಕೆಯಲ್ಲಿ ತೊಡಗಿರುವ ಘಟಕಗಳು, ಸಂಸ್ಥೆ ಹಾಗೂ ಕೈಗಾರಿಕೆಗಳು ಶೇ.30ರಷ್ಟು ಸಿಬ್ಬಂದಿಯೊAದಿಗೆ ಕಾರ್ಯನಿರ್ವಹಿಸುವುದು.

ಕಟ್ಟಡ ನಿರ್ಮಾಣ ಸಾಮಗ್ರಿಗಳೊಂದಿಗೆ ವ್ಯವಹರಿಸುವ ಅಂಗಡಿ-ಸAಸ್ಥೆಗಳು, ವಿಶೇಷವಾಗಿ ಸಿಮೆಂಟ್ ಮತ್ತು ಸ್ಟೀಲ್ ಸೇರಿದಂತೆ ಎಲ್ಲಾ ನಿರ್ಮಾಣ ಚಟುವಟಿಕೆಗಳು, ದುರಸ್ತಿ ಕಾರ್ಯಗಳು ಅನುಮತಿಸಲಾಗಿದೆ. ಟ್ಯಾಕ್ಸಿಗಳು, ಮತ್ತು ಆಟೋ ರಿಕ್ಷಾಗಳು ಗರಿಷ್ಠ ಇಬ್ಬರು ಪ್ರಯಾಣಿಕರನ್ನು ಸಾಗಿಸಲು ಅನುಮತಿಸಿದೆ.

ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಚೇರಿಗಳ ಜೊತೆಗೆ ಶೇ.50% ಸಿಬ್ಬಂದಿಯೊAದಿಗೆ ಕೃಷಿ ಮತ್ತು ಸಂಬAಧಿತ ಕಚೇರಿಗಳು, ಲೋಕೋಪಯೋಗಿ, ವಸತಿ,  ಪ್ರಾದೇಶಿಕ ಸಾರಿಗೆ, ಸಹಕಾರ, ನಬಾರ್ಡ್ ಮತ್ತು ಭಾರತ ಸರ್ಕಾರದ ಕಂದಾಯ ಇಲಾಖೆಯ ಕಚೇರಿಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.

ಮದ್ಯ ಪಾರ್ಸಲ್‌ಗೆ ಅವಕಾಶ: ಸ್ವತಂತ್ರ / ಪ್ರತ್ಯೇಕ ಮದ್ಯ ಅಂಗಡಿಗಳು ಮತ್ತು ಮಳಿಗೆಗಳು ಬೆಳಿಗ್ಗೆ 6 ಗಂಟೆಯಿAದ ಮಧ್ಯಾಹ್ನ 2 ಗಂಟೆಯವರೆಗೆ ಪಾರ್ಸೆಲ್ ಸೇವೆ ಮೂಲಕ ಮದ್ಯ ಮಾರಾಟಕ್ಕೆ ಅನುಮತಿಸಿದೆ.

ರಾತ್ರಿ ಕರ್ಫ್ಯೂ ಮಾರ್ಗಸೂಚಿ:

ಜೂನ್ 14 ರಿಂದ 18ರ ವರೆಗೆ ಪ್ರತಿದಿನ ರಾತ್ರಿ 7 ರಿಂದ ಬೆಳಿಗ್ಗೆ 5 ಗಂಟೆ ವರೆಗೆ ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ವ್ಯಕ್ತಿಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ತುರ್ತು ಅಗತ್ಯವಿರುವ ರೋಗಿಗಳು ಮತ್ತು ಅವರ ಪಾಲಕರ ಸಂಚಾರಕ್ಕೆ ಅನುಮತಿಸಲಾಗಿರುತ್ತದೆ.

ರಾತ್ರಿಯಲ್ಲಿ ಕಾರ್ಯಾಚರಣೆ ಅಗತ್ಯವಿರುವ ಎಲ್ಲಾ ಕೈಗಾರಿಕೆಗಳು / ಕಂಪನಿಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದು, ಅಂತಹ ಸಂಸ್ಥೆಗಳ ನೌಕರರ ಚಲನೆಯನ್ನು ಆಯಾ ಸಂಸ್ಥೆ ನೀಡುವ ಗುರುತಿನ ಚೀಟಿ ಪ್ರದರ್ಶನದೊಂದಿಗೆ ಅನುಮತಿಸಿದೆ.

ಸರಕು ವಾಹನಗಳು ಅಥವಾ ಖಾಲಿ ವಾಹನಗಳು ಸೇರಿದಂತೆ ಎಲ್ಲಾ ರೀತಿಯ ಸರಕುಗಳ ಸಂಚಾರಕ್ಕೆ ಯಾವುದೇ ನಿರ್ಬಂಧರುವುದಿಲ್ಲ. ಟೆಲಿಕಾಂ ಮತ್ತು ಅಂತರ್ಜಾಲ ಸೇವಾ ಪೂರೈಕೆದಾರರ ನೌಕರರು ಮತ್ತು ವಾಹನಗಳು ಆಯಾ ಸಂಸ್ಥೆ ನೀಡುವ ಗುರುತಿನ ಚೀಟಿಯನ್ನು ತೋರಿಸಿ ಸಂಚರಿಸಬಹುದು. ಸಾಮಗ್ರಿಗಳನ್ನು ಮನೆಗೆ ತಲುಪಿಸುವುದು ಮತ್ತು ಇ-ಕಾಮರ್ಸ್ ಕಂಪನಿಗಳ ಕಾರ್ಯಾಚರಣೆಯನ್ನು ಅನುಮತಿಸಲಾಗಿದೆ.

ಔಷಧಾಲಯಗಳು ಸೇರಿದಂತೆ ವೈದ್ಯಕೀಯ, ತುರ್ತು ಮತ್ತು ಅಗತ್ಯ ಸೇವೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಇತರೆ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ರೈಲುಗಳು ಮತ್ತು ವಿಮಾನ ಪ್ರಯಾಣದ ಅನುಮತಿ ನೀಡಲಾಗಿರುತ್ತದೆ. ಪ್ರಯಾಣದ ಟಿಕೆಟ್‌ಗಳನ್ನು ತೋರಿಸಿ ವಿಮಾನ ನಿಲ್ದಾಣಗಳಿಗೆ ಮತ್ತು ರೈಲ್ವೆ ನಿಲ್ದಾಣಗಳಿಗೆ ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಮೂಲಕ ಸಾರ್ವಜನಿಕರು ಸಂಚರಿಸಲು ಅನುಮತಿಸಲಾಗಿದೆ.

ಮದುವೆಗೆ 40 ಜನ, ಅಂತ್ಯಕ್ರಿಯೆಗೆ 5 ಜನರಿಗೆ ಅವಕಾಶ: ಈಗಾಗಲೆ ನಿಗದಿಯಾಗಿರುವ ಮದುವೆಗಳನ್ನು ವಧು-ವರನ ಸ್ವಗೃಹದಲ್ಲಿ ಆಯೋಜಿಸಲು ಅನುಮತಿಸಿದ್ದು, ಸಂಬಂಧಿಸಿದ ತಹಶೀಲ್ದಾರರ ಪೂರ್ವಾನುಮತಿ ಪಡೆದು 40ಜನರು ಮಾತ್ರ ಪಾಲ್ಗೊಳ್ಳಬಹುದಾಗಿದೆ. ಮರಣ, ಅಂತ್ಯಕ್ರಿಯೆ, ಶವಸಂಸ್ಕಾರಕ್ಕೆ 5 ಜನರಿಗೆ ಮಾತ್ರ ಸೀಮಿತಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Published On: 13 June 2021, 11:09 PM English Summary: Daily lockdown relaxation across 11 districts from 14Th June

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.