ಕೊರೋನಾ ಸೋಂಕು ಕೇವಲ ಜನತೆಯ ನೆಮ್ಮದಿ ಕಸಿದುಕೊಂಡಿಲ್ಲ.ಎಷ್ಟೋ ಜನರು ಕೆಲಸ ಕಳೆದುಕೊಂಡಿದ್ದಾರೆ. ನಗರದಿಂದ ಗ್ರಾಮೀಣ ಪ್ರದೇಶಗಳಿಗೆ ವಲಸೆಹೋಗಿದ್ದವರೆಲ್ಲಾ ಈಗ ತಮ್ಮೂರಿಗೆ ಮರಳಿದ್ದಾರೆ. ತರಕಾರಿ ಬೆಳೆಗಳನ್ನು ಖರೀದಿಸಲು ವ್ಯಾಪಾರಸ್ಥರು ಬರದೆ ಇರುವುದರಿಂದ ರೈತರು ತಮ್ಮ ಉತ್ಪನ್ನಗಳನ್ನು ರಸ್ತೆಗೆ ಸುರಿಯುತ್ತಿರುವುದು ಒಂದೆಡೆಯಾದರೆ ಸರ್ಕಾರದ ವಿಧಿಸಿದ ಜನತಾ ಕರ್ಫ್ಯೂದಿಂದಾಗಿ ಈಗ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿಗೆ ಬೇಡಿಕೆ ಕುಸಿಯುತ್ತಿದೆ.. ಹೀಗಾಗಿ ಹಣ್ಣಿನ ವ್ಯಾಪಾರಿಗಳು ಮಾರಾಟಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ನಗರ ಪ್ರದೇಶಗಳಿಗೆ ಪ್ರತಿ ಏಪ್ರೀಲ್ ಮೇ ತಿಂಗಳಲ್ಲಿ ಮಾವಿನ ಹಣ್ಣುಗಳು ಲಗ್ಗೆಯಿಟ್ಟಿರುತ್ತವೆ. ಆದರೆ ಕಳೆದ ವರ್ಷದಿಂದ ಮಾವಿನ ಹಣ್ಣುಗಳಿಗೆ ಬೇಡಿಕೆಯೂ ಕಡಿಮೆಯಾಗಿದೆ. ಪೂರೈಕೆಯಾಗದೆ ಕೊರೋನಾ ಕರ್ಫ್ಯೂದಿಂದಾಗಿ ಖರೀದಿಸಲು ಬರುತ್ತಿಲ್ಲ. ಈ ಬಾರಿಯು ಕರ್ಫ್ಯೂ ಆಘಾತ ಉಂಟುಮಾಡಿದೆ.
ರತ್ನಗಿರಿ ಆಪೂಸ್, ರಸಪುರಿ ಸೇರಿದಂತೆ ವಿವಿಧ ತಳಿಯ ಮಾವು ಮಾರ್ಚ್- ಏಪ್ರಿಲ್ ಅವಧಿಯಲ್ಲಿ ನಗರಗಳಿಗೆ ಮಹಾರಾಷ್ಟ್ರ, ತೆಲಂಗಾಣ ದಿಂದ ಬರುತ್ತಿತ್ತು.ಆದರೆ, ಕೊರೊನಾ ಸೋಂಕು ತಡೆಗಾಗಿ ದೇಶದಾದ್ಯಂತ ಹೇರಲಾದ ಜನತಾ ಕರ್ಫ್ಯೂದಿಂದಾಗಿ ವಾಹನಗಳ ಸಂಚಾರ ನಿಂತು ಮಾವು ಬರಲು ಸಾಧ್ಯವಾಗಿಲ್ಲ.
‘ನಿತ್ಯ ಬೆಳಿಗ್ಗೆ 12 ಗಂಟೆವರೆಗೂ ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದರೂ ನಗರಗಳಿಗೆ ಬರುವ ಮಾವನ ಹಣ್ಣುಗಳಿಗೆ ಬೇಡಿಕೆ ಕಡಿಮೆಯಿದೆ. ಉಳಿದ ಎಲ್ಲ ಹಣ್ಣುಗಳು ಮರಳಿ ಮನೆಗೆ ತೆಗೆದುಕೊಂಡು ಹೋಗಬೇಕಾಗಿದೆ. ಈ ಬಾರಿ ಬೆಲೆಯೂ ಕಡಿಮೆ ಆಗಿದೆ.
ಮುಂಗಾರು ಮಳೆ ಜೂನ್‌ನಲ್ಲಿ ಆರಂಭವಾದರೆ ಮಾವಿನ ಹಣ್ಣುಗಳಲ್ಲಿ ಹುಳುಗಳಾಗುತ್ತವೆ ಎಂದುಕೊಂಡು ಬಹಳಷ್ಟು ಜನ ಹಣ್ಣು ಖರೀದಿಸುವುದಿಲ್ಲ. ಹೀಗಾಗಿ ಮಾವು ಬೆಳೆದ ರೈತರಲ್ಲಿ ಆತಂಕ ಮನೆ ಮಾಡಿದೆ. ಹೇಗಾದರೂ ಮಾಡಿ ತಾವು ಬೆಳೆದಿರುವ ಹಣ್ಣುಗಳನ್ನು ಬೇಗನೇ ಮಾರಾಟ ಮಾಡಬೇಕೆನ್ನುವ ಆತುರದಲ್ಲಿ ಗ್ರಾಹಕರು ಕೇಳಿದಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಜನತಾ ಕರ್ಫ್ಯೂ ಹೀಗೆ ಮುಂದವರೆದರು ಮಾವು ಬೆಳೆದ ರೈತರಿಗೆ ಹಾನಿಯಾಗುತ್ತದೆ. ಬಂದಷ್ಟು ಬೆಲೆ ಬರಲಿಯೆಂದು ರೈತರು ಕಡಿಮೆ ದರದಲ್ಲಿ ಮಾವು ಮಾರಾಟ ಮಾಡುತ್ತಿದ್ದಾರೆ. ಆದರೆ ಜನತೆ ಕಡಿಮೆ ಬೆಲೆಗೂ ಕೊರೋನಾಗೆ ಹೆದರಿ ಖರೀದಿಸುತ್ತಿಲ್ಲ.
Share your comments