1. ಸುದ್ದಿಗಳು

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 14,20,426 ರೈತರ ನೋಂದಣಿ: ಬೀದರ್ ಜಿಲ್ಲೆ ಮತ್ತೆ ಟಾಪ್, ಬೆಂಗಳೂರು ನಗರ ಬಾಟಮ್

2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅರ್ಜಿ ಸಲ್ಲಿಕೆ ಹಾಗೂ ನೋಂದಣಿಯಲ್ಲಿ (Crop insurance registration)ಮತ್ತೆ ಬೀದರ್‌ ಜಿಲ್ಲೆಯು ರಾಜ್ಯದಲ್ಲೇ ಮೊದಲನೇ ಸ್ಥಾನದಲ್ಲಿದೆ. ಬೆಂಗಳೂರು ನಗರ ಕಡೆಯ ಸ್ಥಾನದಲ್ಲಿದೆ.

ಕಳೆದ ಐದು ವರ್ಷಗಳಿಂದ ಮೊದಲ ಸ್ಥಾನದಲ್ಲೇ ಇರುವ ಬೀದರ್‌ ಜಿಲ್ಲೆ , ಈ ಬಾರಿ ತನ್ನ ಸ್ಥಾನವನ್ನು ಅಬಾಧಿತವಾಗಿ ಮುಂದುವರಿಸಿಕೊಂಡು ಬಂದಿದೆ. ಬೆಳೆ ವಿಮೆಯಡಿ ಅರ್ಜಿ ಸಲ್ಲಿಕೆಗೆ ಕೆಲವು ಬೆಳೆಗಳಿಗೆ ಜೈಲ 31 ಇನ್ನೂ ಕೆಲವು ಬೆಳೆಗಳಿಗೆ ಆಗಸ್ಟ್ 14  ಅಂತಿಮ ದಿನವಾಗಿದ್ದು, ಈ ವರೆಗೆ 14,20,426 ರೈತರು (farmers) ಅರ್ಜಿ ಸಲ್ಲಿಸಿ, ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.  ಕಡೆಯ ದಿನದವರೆಗೆ ಸಲ್ಲಿಕೆಯಾದ ಅರ್ಜಿಗಳನ್ನು ಅಪ್‌ ಲೋಡ್‌ ಮಾಡಲು ಇನ್ನೂ ಸಮಯಾವಕಾಶ ನೀಡಲಾಗಿದೆ. ಹೀಗಾಗಿ, ಕೊನೆಯ ಹಂತದಲ್ಲಿ ಸಲ್ಲಿಕೆಯಾದ ಅರ್ಜಿಗಳು (Application) ಅಪ್‌ ಲೋಡ್‌ ಬಳಿಕ ರಾಜ್ಯದಲ್ಲಿ ನೋಂದಣಿಯಾದ ರೈತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.

2,13, 653 ರೈತರು ಅರ್ಜಿ ಸಲ್ಲಿಸುವ ಮೂಲಕ ಬೀದರ್‌ ಮೊದಲ ಸ್ಥಾನದಲ್ಲಿದ್ದರೆ, 1,26,762 ರೈತರ ಅರ್ಜಿಯೊಂದಿಗೆ ಹಾವೇರಿ ಎರಡನೇ ಸ್ಥಾನದಲ್ಲಿದೆ. 1,25,929 ರೈತರ ಅರ್ಜಿಯೊಂದಿಗೆ ಗದಗ ಮೂರನೇ ಸ್ಥಾನದಲ್ಲಿದೆ. ಬಳಿಕ ಕ್ರಮವಾಗಿ ಧಾರವಾಡ (1,06,243,696), ಕೊಪ್ಪಳ 98,303, ಉತ್ತರ ಕನ್ನಡ 96,441, ವಿಜಯಪುರ 92683,  ಚಿದ್ರದುರ್ಗ 92476 ರೈತರು ನೋಂದಣಿ ಮಾಡಿಸಿದ್ದಾರೆ. ಬೆಂಗಳೂರು ನಗರ ಕೇವಲ 241 ರೈತರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ  4 ಲಕ್ಷಕ್ಕೂ ಹೆಚ್ಚು ಜನ ರೈತರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷ 10,02,612 ಪ್ರದಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ರೈತರು ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ವರ್ಷ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 14,20,426  ರೈತರು ಅರ್ಜಿ ಸಲ್ಲಿಸಿದ್ದಾರೆ.

ಅದರಲ್ಲಿ ಬೀದರ್‌ ಒಂದೇ ಜಿಲ್ಲೆಯಲ್ಲಿ 2.13 ಲಕ್ಷ ರೈತರು ನೋಂದಣಿ ಮಾಡಿಸಲು ಅರ್ಜಿ ಹಾಕಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕದಲ್ಲೇ ಬೀದರ್‌ ಜಿಲ್ಲೆಯಲ್ಲಿ ಹೆಚ್ಚಿನ ರೈತರು ಅರ್ಜಿ ಸಲ್ಲಿಸಿ, ನೋಂದಣಿ ಮಾಡಿಸುವ ಮೂಲಕ ಗಮನ ಸೆಳೆಯುತ್ತಿದೆ.

ಐದು ವರ್ಷಗಳಿಂದ ಬೀದರ್‌ ನಂ.1(last five years bidar district is top)


2016-17ನೇ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆ ಅನುಷ್ಠಾನಕ್ಕೆ ಬಂದಾಗಿನಿಂದಲೂ ಕರ್ನಾಟಕ ರಾಜ್ಯದಲ್ಲೇ ಬೀದರ್‌ ಜಿಲ್ಲೆಯಲ್ಲಿ ಅತಿ ಹೆಚ್ಚಿನ ರೈತರು ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. 2016-17ರಲ್ಲಿ 1.74 ಲಕ್ಷ ರೈತರು, 2017-18ರಲ್ಲಿ 1.80 ಲಕ್ಷ ರೈತರು, 2018-19ರಲ್ಲಿ 1.13 ಲಕ್ಷ ರೈತರು ಈ ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿದ್ದರು.  2019-20ರಲ್ಲಿ ಈ ವರೆಗೆ 1.57 ಲಕ್ಷ ರೈತರು 2020-21 ಸಾಲಿನಲ್ಲಿ 2.13 ಲಕ್ಷ ರೈತರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ, ಇದು ಇನ್ನು ಹೆಚ್ಚುವ ನಿರೀಕ್ಷೆಯಿದೆ. 

 

ಅರ್ಜಿ ಸಲ್ಲಿಕೆ ವಿವರ

 

ಹೆಸರು

ಜಿಲ್ಲೆ

ನೋಂದಣಿ ಮಾಡಿಸಿದವರ ಸಂಖ್ಯೆ

1

ಬೀದರ

213653

2

ಹಾವೇರಿ

126762

3

ಗದಗ

125929

4

ಧಾರವಾಡ

106243

5

ಕೊಪ್ಪಳ

98303

6

ಉತ್ತರಕನ್ನಡ

96441

7

ವಿಜಯಪುರ

92663

8

ಚಿತ್ರದುರ್ಗ

92476

9

ತುಮಕುರು

86063

10

ರಾಯಚೂರು

56881

11

ಶಿವಮೊಗ್ಗ

37736

12

ಕಲಬುರಗಿ

37650

13

ಹಾಸನ

35944

14

ದಕ್ಷಿಣ ಕನ್ನಡ

33095

15

ಬಾಗಲಕೋಟೆ

30985

16

ಬೆಳಗಾವಿ

29632

17

ಚಿಕ್ಕಮಂಗಳೂರು

25343

18

ದಾವಣಗೆರೆ

20909

19

ಚಿಕ್ಕಬಳ್ಳಾಪುರ

17907

20

ಬಳ್ಳಾರಿ

15469

21

ಚಾಮರಾಜನಗರ

11579

22

ಯಾದಗಿರಿ

9652

23

ಕೋಲಾರ

4720

24

ಉಡುಪಿ

4227

25

ಮಂಡ್ಯ

2617

26

ಕೊಡಗು

2560

27

ಮೈಸೂರು

2253

28

ರಾಮನಗರ

1449

29

ಬೆಂಗಳೂರು ಗ್ರಾಮಾಂತರ

1044

30

ಬೆಂಗಳೂರು ನಗರ

241

 

ಒಟ್ಟು

1420426

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.