ರಾಜ್ಯ ಸರ್ಕಾರದ 2023-24ನೇ ಸಾಲಿನ ಬಜೆಟ್‌ಗೆ ಕ್ಷಣಗಣನೆ ಪ್ರಾರಂಭವಾಗಿದೆ.
ರಾಜ್ಯದಲ್ಲಿ ಚುನಾವಣೆಯ ಹೊಸ್ತಿನಲ್ಲಿದೆ. ಹೀಗಾಗಿ, ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚು ಜನಪ್ರಿಯ ಹಾಗೂ ಜನರನ್ನು ಮೆಚ್ಚಿಸುವ ಕಸರತ್ತುಗಳನ್ನು ಒಳಗೊಂಡ ಬಜೆಟ್ ಮಂಡನೆ ಆಗುವ ಸಾಧ್ಯತೆಯೇ ಇದೆ.
"ಇಂದು ಎರಡನೇ ಬಜೆಟ್ ಮಂಡಿಸುತ್ತಿರುವುದು ನನ್ನ ಸೌಭಾಗ್ಯವಾಗಿದೆ.
ಇದರ ಪ್ರಯುಕ್ತ ಬೆಂಗಳೂರಿನ ಶ್ರೀಕಂಠೇಶ್ವರ ದೇವಸ್ಥಾನ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ,
ಕರ್ನಾಟಕದ ಸಮಸ್ತ ಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಲಾಯಿತು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡನೇ ಬಾರಿ ಕರ್ನಾಟಕ ಬಜೆಟ್ ಮಂಡಿಸಲಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವುದರಿಂದಾಗಿ ಬಜೆಟ್‌ನಲ್ಲಿ ಹಲವಾರು ಕೊಡುಗೆಯನ್ನು ಸರ್ಕಾರ ನೀಡುವ ನಿರೀಕ್ಷೆಯ ಇದೆ.
ಸರ್ಕಾರದ ಈ ಆಡಳಿತಾವಧಿಯ ಕೊನೆಯ ಬಜೆಟ್ ಇದಾಗಿದೆ. ಆದ್ದರಿಂದ ಜನರಿಗೆ ಬಜೆಟ್ ನಿರೀಕ್ಷೆ ಅಧಿಕವಾಗಿಯೇ ಇದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 17ರ ಶುಕ್ರವಾರ ಬೆಳಗ್ಗೆ ಬಜೆಟ್ ಮಂಡನೆ ಮಾಡಲಿದ್ದಾರೆ.
ಬೆಳಿಗ್ಗೆ 9.45ಕ್ಕೆ ವಿಧಾನಸೌಧದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯಿತು. ಇನ್ನು ಬಜೆಟ್ ಮಂಡನೆಗೂ ಮುನ್ನ ಸಾಮಾನ್ಯವಾಗಿ ನಡೆಯುವ ಸಭೆಗಳು ನಡೆದವು.
ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪ್ರದಾಯದಂತೆ ಸಚಿವ ಸಂಪುಟದ ಒಪ್ಪಿಗೆಯನ್ನು ಪಡೆಯಲಿದ್ದಾರೆ.
ನಂತರ ವಿಧಾನಸಭೆ ಕಲಾಪ ಆರಂಭವಾಗಲಿದ್ದು, 10.15ಕ್ಕೆ ಬಜೆಟ್ ಮಂಡನೆ ಆರಂಭ ಮಾಡಲಿದ್ದಾರೆ.
ವಿಧಾನಸಭೆ ಚುನಾವಣೆಗೂ ಮುನ್ನ ಬರುವ ಬಜೆಟ್ ಇದಾಗಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದೆ.
ಏಪ್ರಿಲ್ ಅಂತ್ಯ ಅಥವಾ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಬರುವ ಬಜೆಟ್ ಇದಾಗಿದೆ.
ಕರ್ನಾಟಕದಲ್ಲಿ 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಜೆಟ್ ಅಧಿವೇಶನವು ಫೆಬ್ರವರಿ 23ರ ತನಕ ನಡೆಯಲಿದೆ.
ಬಜೆಟ್ ಮೇಲೆ ನಡೆಯುವ ಎಲ್ಲ ಚರ್ಚೆಗೆ ಮುಖ್ಯಮಂತ್ರಿಗಳು ಅಧಿವೇಶನದ ಕೊನೆಯಲ್ಲಿ ಉತ್ತರ ನೀಡಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಮಾರು 1 ಗಂಟೆಗಳ ಕಾಲ ಬಜೆಟ್ ಮಂಡಿಸಲಿದ್ದಾರೆ.
ಫೆಬ್ರವರಿ 20 ರಿಂದ 22ರ ತನಕ ಬಜೆಟ್ ಮೇಲೆ ಚರ್ಚೆ ನಡೆಯಲಿದೆ.
2022-23ನೇ ಸಾಲಿನ ರಾಜ್ಯ ಬಜೆಟ್ ಗಾತ್ರ 2 ಲಕ್ಷದ 66 ಸಾವಿರ ಕೋಟಿ ರೂಪಾಯಿ ಆಗಿದ್ದು,
ಈ ಬಾರಿಯ ಅಂದರೆ 2023-24ನೇ ಸಾಲಿನ ಕರ್ನಾಟಕ ಬಜೆಟ್ 3 ಲಕ್ಷ ಕೋಟಿ ರೂಪಾಯಿಗಳ ಗಡಿ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳ ಆದಾಯ ಸಂಗ್ರಹವು ಆರೋಗ್ಯಕರವಾಗಿದೆ.
ಅಲ್ಲದೇ ಕಳೆದ ಹಾಗೂ ಪ್ರಸಕ್ತ ತ್ರೈ ಮಾಸಿಕದಲ್ಲಿ ತೆರಿಗೆ ಹಾಗೂ ಆದಾಯ ಸಂಗ್ರಹವು ರಾಜ್ಯಕ್ಕೆ ಉತ್ತಮ ಮಟ್ಟದಲ್ಲಿ ಲಭ್ಯವಾಗಿದೆ.
ಹೀಗಾಗಿ, ಈ ಬಾರಿಯ ಬಜೆಟ್‌ಸ ಸುಗಮವಾಗಿ ಮಂಡನೆಯಾಗುವ ಬಹಳಷ್ಟು ಸಾಧ್ಯತೆಗಳಿವೆ.
ರಾಜ್ಯ ಸರ್ಕಾರಕ್ಕೆ ಬೊಕ್ಕಸದಲ್ಲಿ ಅಂದಾಜಿಗಿಂತಲೂ ಹೆಚ್ಚಿನ ಹಣದೊಂದಿಗೆ ಆರ್ಥಿಕ ವರ್ಷವನ್ನು ಅಂತ್ಯಗೊಳಿಸಲು
ಮುಂದಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ (ಫೆ 17) ಮಂಡಿಸಲಿರುವ 2023-24ನೇ ಸಾಲಿನ
ರಾಜ್ಯ ಬಜೆಟ್ ಗಾತ್ರವು 3 ಲಕ್ಷ ಕೋಟಿ ರೂ.ಗಳ ಗಡಿ ಮುಟ್ಟುವ ಸಾಧ್ಯತೆ ಇದೆ.
Share your comments