1. ಸುದ್ದಿಗಳು

MFOI ಕೃಷಿ ಜಾಗರಣದಿಂದ ವಿನೂತನ ಪ್ರಯತ್ನ, ಪ್ರಶಸ್ತಿ ಪ್ರದಾನಕ್ಕೆ ಕ್ಷಣಗಣನೆ!

Hitesh
Hitesh
ಮಿಲಿನಿಯೇರ್‌ ಫಾರ್ಮರ್‌ ಆಫ್‌ ಇಂಡಿಯಾ

ದೇಶದಲ್ಲೇ ಮೊದಲ ಬಾರಿ ಕೃಷಿ ಜಾಗರಣವು ವಿನೂತನ ಪ್ರಯತ್ನವನ್ನು ಮಾಡುತ್ತಿದೆ. ಅದಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.

ಮಹೀಂದ್ರಾ ಟ್ರಾಕ್ಟರ್ಸ್ ಪ್ರಾಯೋಜಿಸಿದ ಭಾರತದ ಮಿಲಿಯನೇರ್ ಫಾರ್ಮರ್ಸ್ ಅವಾರ್ಡ್ಸ್ 2023 (Millionaire Farmers of India Awards 2023 sponsored

by Mahindra Tractors) ದೇಶದಲ್ಲೇ ಮೊದಲ ಬಾರಿ ಕೃಷಿ ಜಾಗರಣದಿಂದ ರೈತರನ್ನು ಗೌರವಿಸಿ, ಸನ್ಮಾನಿಸುವ ವಿನೂತನ ಪ್ರಯತ್ನವಾಗಿದೆ.

ಕೃಷಿ ಜಾಗಣರಣವು ದೇಶದಲ್ಲೇ ಇದೇ ಮೊದಲ ಬಾರಿ ವಿನೂತನವಾದ ಪ್ರಯತ್ನವೊಂದನ್ನು ಮಾಡಿದೆ. ಅದೇ ದೇಶದ ಶ್ರೀಮಂತ ರೈತರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವುದು.  

ಕೃಷಿಯಲ್ಲೂ ಯಶಸ್ಸು ಸಾಧಿಸಬಹುದು ಹಾಗೂ ಶ್ರೀಮಂತರಾಗಬಹುದು ಎನ್ನುವುದು ಕೃಷಿ ಜಾಗರಣ ಸಂಸ್ಥೆಯ ಸಂಸ್ಥಾಪಕ

ಹಾಗೂ ಪ್ರಧಾನ ಸಂಪಾದಕರಾದ ಎಂ. ಸಿ. ಡೊಮಿನಿಕ್‌ ಹಾಗೂ ಮ್ಯಾನೇಜಿಂಗ್‌ ಡೈರೆಕ್ಟರ್ ಶೈನಿ ಡೊಮಿನಿಕ್‌ ಅವರ ಆಶಯ.

ಅವರ ಆಶಯದಂತೆಯೇ MFOI ಎನ್ನುವ ಮಹಾಕುಂಭವನ್ನು ಆಯೋಜಿಸಲಾಗಿದೆ.

Millionaire Farmers of India Awards 2023 sponsored by Mahindra Tractorsಗೆ ಪ್ರಾಯೋಜಕರಾಗಿದೆ.

ಎಫ್‌ಎಂಸಿ ಕಾರ್ಪೊರೇಷನ್ ಸಹ ಪ್ರಯೋಜಕತ್ವವನ್ನು ವಹಿಸಿದ್ದು, ಹಲವು ಪ್ರತಿಷ್ಠಿತ ಕೃಷಿ

ವಿಶ್ವವಿದ್ಯಾಲಯಗಳು ಹಾಗೂ ಸಂಸ್ಥೆಗಳು ಕೃಷಿ ಜಾಗರಣದೊಂದಿಗೆ ಕೈಜೋಡಿಸಿವೆ. 

Millionaire Farmers of India Awards 2023 sponsored by Mahindra Tractors ಅನ್ನು

ಡಿಸೆಂಬರ್‌ 6ರಿಂದ ಡಿಸೆಂಬರ್‌ 8ರ ದೆಹಲಿಯ IARI ಪುಸಾ ಮೇಳಾ ಗ್ರೌಂಡ್‌ನಲ್ಲಿ ಆಯೋಜಿಸಲಾಗಿದೆ.  

ಮಹೀಂದ್ರಾ ಟ್ರ್ಯಾಕ್ಟರ್ ಪ್ರಾಯೋಜಿತ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿ 2023ಕ್ಕೆ ಕೇವಲ 1 ದಿನ  ಮಾತ್ರ ಬಾಕಿ ಇದೆ.  

ಎಲ್ಲಿ ನಡೆಯಲಿದೆ ಕಾರ್ಯಕ್ರಮ

ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಪ್ರಶಸ್ತಿ 2023 ಪ್ರಾಯೋಜಿತ ಮಹೀಂದ್ರಾ ಟ್ರ್ಯಾಕ್ಟರ್ಸ್‌ಗೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ

ಈಗಾಗಲೇ ನಮ್ಮ ಕಡೆಯಿಂದ ಅಂದರೆ ಕೃಷಿ ಜಾಗರಣದ ಕಡೆಯಿಂದ ಎಲ್ಲ ರೀತಿಯ ಸಿದ್ಧತೆಗಳನ್ನು ನಾವು ಮಾಡಿಕೊಂಡಿದ್ದೇವೆ.

ದೆಹಲಿಯ ಐಎಆರ್‌ಐ ಪುಸಾ ಮೈದಾನದಲ್ಲಿ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ.

ದೇಶದ ಹಲವು ರಾಜ್ಯಗಳಿಂದ ಸಾವಿರಾರು ರೈತರು

ಕೃಷಿ ಜಾಗರಣದ ವಿನೂತನ ಪ್ರಯತ್ನ ಹಾಗೂ ಮಿಲಿನಿಯೇರ್‌ ಫಾರ್ಮರ್‌ ಆಫ್‌ ಇಂಡಿಯಾ ಪ್ರಶಸ್ತಿ 2023 ಪ್ರದಾನಕ್ಕೆ ಕರ್ನಾಟಕವೂ

ಸೇರಿದಂತೆ ದೇಶದ ಹಲವು ರಾಜ್ಯಗಳಿಂದ ರೈತರು ಬರುತ್ತಿದ್ದಾರೆ.

ಈ ಮಹಾ ಮೇಳವು ಸಾವಿರಾರು ರೈತರ ಸಮಾಗಮವೇ ಆಗಲಿದೆ.

ದೇಶದ ಮೂಲೆ ಮೂಲೆಯಿಂದಲೂ ರೈತರು ಆಗಮಿಸುತ್ತಿದ್ದು, ಅವರು ಅವರ ಕೃಷಿ ಯಶೋಗಾಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಿದ್ದಾರೆ. 

ಡಿಸೆಂಬರ್ 6, 7, 8 ರಂದು ದೇಶದ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ

ರೈತರು ಸೇರಲಿದ್ದು, ರಾಜಕಾರಣಿಗಳು, ಕೃಷಿ ತಜ್ಞರು ಪ್ರಭಾವಿಗಳು ಸಹ ಪಾಲ್ಗೊಳ್ಳಿದ್ದಾರೆ.  

MFOIಯ ಮಹತ್ವವೆನೆಂದರೆ ದೇಶದ ಅತಿದೊಡ್ಡ ಕಿಸಾನ್ ಮೇಳವನ್ನು ಕೃಷಿಜಾಗರಣ ಮಾಧ್ಯಮವು ಆಯೋಜಿಸಿದೆ.

ಇದರಲ್ಲಿ ದೇಶದ ಎಲ್ಲ ರಾಜ್ಯಗಳ ಪ್ರಮುಖ ರೈತರನ್ನೂ ಗೌರವಿಸಲಾಗುತ್ತದೆ.

ಪ್ರತಿಯೊಬ್ಬ ರೈತರನ್ನು ಗೌರವಿಸಲಾಗುತ್ತದೆ ಅಲ್ಲದೇ ಪ್ರಶಸ್ತಿ ನೀಡಲಾಗುತ್ತದೆ.

ಇದರೊಂದಿಗೆ ರೈತರ ಕೃಷಿಗೂ ವಿಭಿನ್ನ ಮನ್ನಣೆ ದೊರೆಯಲಿದೆ.   

Published On: 05 December 2023, 05:02 PM English Summary: Countdown for MFOI - Millionaire Farmer of India Awards !

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.