1. ಸುದ್ದಿಗಳು

ರಾಜ್ಯಾದ್ಯಂತ ಜಿಮ್, ಸ್ವಿಮ್ಮಿಂಗ್ ಪೂಲ್ ಬಂದ್: ಚಿತ್ರಮಂದಿರಗಳಲ್ಲಿ ಶೇ.50 ಸಾಮರ್ಥ್ಯ ಕ್ಕೆ ಆದೇಶ

Gym

ರಾಜ್ಯದಲ್ಲಿ ಮತ್ತೆ ಕೊರೋನಾ ಎರಡನೇ ಅಲೆ ಹೆಚ್ಚಾಗಿದ್ದರ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಏಪ್ರಿಲ್ 2ರಂದು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಶಾಲಾ ತರಗತಿಗಳನ್ನು ಸ್ಥಗಿತಗೊಳಿಸಿರುವುದರ ಜೊತೆಗೆ ಜಿಮ್, ಈಜುಕೊಳಗಳನ್ನೂ ಬಂದ್‌ ಮಾಡುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ಚಿತ್ರಮಂದಿರಗಳಲ್ಲಿ ಶೇಕಡ 50 ರಷ್ಟು ಸಾಮರ್ಥ್ಯವನ್ನು ಮಿತಿಗೊಳಿಸಿ ಸರ್ಕಾರ ಇಂದು ಆದೇಶ ಹೊರಡಿಸಿದೆ

ರಾಜ ಸರ್ಕಾರ ಹೊಸದಾಗಿ ಹೊರಡಿಸಿರುವ ಮಾರ್ಗಸೂಚಿಗಳು ಏಪ್ರಿಲ್ 20ರ ತನಕ ಅನ್ವಯವಾಗಲಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ. ಜಿಮ್ ಗಳು,ಈಜುಕೊಳ, ಪಾರ್ಟಿ ಹಾಲ್,ಕ್ಲಬ್ ಹೌಸ್ ಸಂಪೂರ್ಣವಾಗಿ ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ.

ಶೇ. 50 ರ ಸಾಮರ್ಥ್ಯ:

ರಾಜ್ಯದಲ್ಲಿ ಕೊರೊನಾ ಸೋಂಕು ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಶೇಕಡ 50ರಷ್ಟು ಪ್ರೇಕ್ಷಕರ ಸಾಮರ್ಥ್ಯವನ್ನು ಮಿತಿಗೊಳಿಸಿ ಆದೇಶ ಹೊರಡಿಸಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು ಕಲಬುರ್ಗಿ, ದಕ್ಷಿಣ ಕನ್ನಡ, ಉಡುಪಿ ಬೀದರ್ ಧಾರವಾಡ ಜಿಲ್ಲೆಗಳಲ್ಲಿ ಶೇಕಡ 50 ರಷ್ಟು ಪ್ರೇಕ್ಷಕರ ಸಾಮರ್ಥ್ಯ ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ. ಇದರ ಜೊತೆಗೆ ರಾಜಕೀಯ ಸಭೆ-ಸಮಾರಂಭಗಳು ಧಾರ್ಮಿಕ ಸಮಾರಂಭಗಳಲ್ಲಿ ಜನ ಸೇರುವುದನ್ನು ಕಡ್ಡಾಯವಾಗಿ ನಿಷೇಧ ಹೇರಲಾಗಿದೆ.

ಆರರಿಂದ 9ನೇ ತರಗತಿಯ ಶಾಲೆಗಳಿಗೆ ಹಾಜರಾಗುವುದನ್ನು ಸರ್ಕಾರ ನಿಷೇಧಿಸಿದೆ ಆದ್ದರಿಂದ 12ನೇ ತರಗತಿಯ ಶಾಲೆಗಳು ಎಂದಿನಂತೆ ನಡೆಯಲಿವೆ. ಕಾಲೇಜು ತರಗತಿಗಳು ಕೂಡ ಬಂದ್ ಮಾಡಲಾಗಿದೆ. ಜೊತೆಗೆ ಎಂದಿನಂತೆ ಬೋರ್ಡ್ ಪರೀಕ್ಷೆಗಳು ಮತ್ತು ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದುವರೆಯಲಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ

ಚಿತ್ರಮಂದಿರ‌ದ ಶೇ.50 ಮಿತಿ ತೆರವು ಮಾಡಿ: ಸರ್ಕಾರಕ್ಕೆ ಪುನೀತ್ ಮನವಿ

ಚಿತ್ರಮಂದಿರಗಳಲ್ಲಿ ಶೇಕಡ  50 ರಷ್ಟು ಪ್ರೇಕ್ಷಕರ ಮಿತಿಗೊಳಿಸುವ ಏರಿಕೆಯಿಂದಾಗಿ “ಯುವರತ್ನ” ಚಿತ್ರಕ್ಕೆ ಅನ್ಯಾಯವಾಗಲಿದೆ. ದಯವಿಟ್ಟು 100 ರ ಸಾಮರ್ಥ್ಯದಲ್ಲೇ  ಚಿತ್ರ  ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು  ನಟ ಪುನೀತ್ ರಾಜ್‌ಕುಮಾರ್ ರಾಜ್ಯ ಸರ್ಕಾರಕ್ಕೆ  ಮನವಿ ಮಾಡಿದ್ದಾರೆ. 

ಏಕಾಏಕಿ ಶೇಕಡ  50 ರಷ್ಟು ಪ್ರೇಕ್ಷಕರ ಸಾಮರ್ಥ್ಯಕ್ಕೆ ಇಳಿಸಿರುವುದು ಬೇಸರ ತರಿಸಿದೆ. ಮುಂಚೇ  ಹೇಳಿದ್ದರೆ, ಚಿತ್ರ ಬಿಡುಗಡೆಮಾಡುವುದರ  ಕುರಿತು ನಿರ್ಧಾರ ತೆಗೆದುಕೊಳ್ಳುತ್ತದ್ದೇವು. ಮುಂದೆ ಏನು ಮಾಡುವ ಕುರಿತು ನಿರ್ಧರಿಸಲಾಗುವುದು. ರಾಜ್ಯಾದ್ಯಂತ  ಯುವರತ್ನ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನಾವು ಮಾಡಿರುವ  ಪ್ರಯತ್ನಗಳಿಗೆ  ಫಲ ಸಿಗಬೇಕಾದರೆ ಅದು ಪ್ರೇಕ್ಷಕರಿಂದ ಮಾತ್ರ. ಈ ರೀತಿ  ಶೇಕಡ 50 ರಷ್ಟು ನಿಬಂಧ ಹೇರಿದರೆ ನಿಜಕ್ಕೂ ತೊಂದರೆಯಾಗಲಿದೆ. ಇದಕ್ಕೆ  ದಯವಿಟ್ಟು ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿದ್ದಾರೆ. 

ಕಡ್ಡಾಯವಾಗಿ ಮಾಸ್ಕ್ ಧರಿಸಿ:

ಪ್ರೇಕ್ಷಕರು ಚಿತ್ರಮಂದಿರದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಚಿತ್ರ ನೋಡಿ. ಜೊತೆಗೆ ಸುರಕ್ಷತೆಗೂ ಆದ್ಯತೆ ನೀಡಿ ಎಂದು ಅಭಿಮಾನಿಗಳಿಗೂ ಮತ್ತು ಜನತೆಗೆ ಮನವಿ ಮಾಡಿದ್ದಾರೆ. ಯುವರತ್ನ ಚಿತ್ರದ ಪೈರಸಿ ಬಂದಿರುವ ಕುರಿತು ಮಾತುಗಳು ಕೇಳಿ ಬಂದಿವೆ. ಪೈರಸಿಯನ್ನು ತಡೆಯಲು ಸಾಧ್ಯವಿಲ್ಲ. ಆದರೆ ಜನರು ಬದಲಾಗಬೇಕು, ಯಾವುದೇ ಕಾರಣಕ್ಕೂ ಪೈರಸಿ ಸಿನಿಮಾ ನೋಡಬೇಕು,  ಟಿಕೆಟ್ ಪಡೆದು ಸಿನಿಮಾ ನೋಡಿ ಎಂದರು. 

Published On: 02 April 2021, 09:52 PM English Summary: Corona increases: Gym, swimming pool shut

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.