1. ಸುದ್ದಿಗಳು

ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಮುಂದುವರಿದ ವರ್ಷಧಾರೆ!

Hitesh
Hitesh
ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಮುಂದುವರಿದ ವರ್ಷಧಾರೆ

ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿನ್ಯೂಸ್‌ ಪರಿಚಯಿಸಿದೆ. ಈ ವಾರದ ಪ್ರಮುಖ ಸುದ್ದಿಗಳು ಈ ರೀತಿ ಇವೆ.

ರಾಜ್ಯದಲ್ಲಿ ಈ ಬಾರಿ ದಾಖಲೆಯ ಮತದಾನ!

ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವುದೇ ಚರ್ಚೆ!

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದುವರಿದ ವರ್ಷಧಾರೆ

ದೇಶದಲ್ಲಿ ರಸಗೊಬ್ಬರ ದುರ್ಬಳಕೆ ತಡೆಗೆ ಕೇಂದ್ರದಿಂದ ಕ್ರಮ

ಮೇ 13ಕ್ಕೆ ಕರ್ನಾಟಕ ಚುನಾವಣಾ ಫಲಿತಾಂಶ

ಕೃಷಿ ಜಾಗರಣದಿಂದ ವಿಂಗ್ಸ್ ಟು ಕೆರಿಯರ್‌ ಪರಿಚಯ!

ಸುದ್ದಿಗಳ ವಿವರ ಈ ರೀತಿ ಇದೆ.  

ಕರ್ನಾಟಕದ 16ನೇ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದೆ.

ಬುಧವಾರ ಶೇ 73 ಪ್ರತಿಶತ ದಾಖಲೆಯ ಮತದಾನವಾಗಿದೆ.

2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಶೇ.72 ಪ್ರತಿಶತ ಮತದಾನವಾಗಿತ್ತು.

ಬುಧವಾರ ನಡೆದ ಮತದಾನದ ಪ್ರಮಾಣದ ಇನ್ನಷ್ಟು ಸ್ಪಷ್ಟವಾದ ಚಿತ್ರಣ ಗುರುವಾರ ಸಿಗಲಿದೆ.

ಇನ್ನು ನೆನ್ನೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಹಿರಿಯರು ಹಾಗೂ ಯುವಕರು ಸೇರಿದಂತೆ ಹಲವರುವ ಉತ್ಸಾಹದಿಂದ ಚುನಾವಣೆಯಲ್ಲಿ ಭಾಗವಹಿಸಿದ್ದು, ಕಂಡುಬಂತು.

--------------------  

ಕರ್ನಾಟಕ ವಿಧಾನಸಭೆಯ ಮತದಾನ ಪ್ರಕ್ರಿಯೆಯು ಬುಧವಾರ ಸುಸೂತ್ರವಾಗಿ ಮುಗಿದಿದ್ದು, ಇದೀಗ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ

ಹಾಗೂ ಯಾರು ಸಿ.ಎಂ ಆಗಲಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ.

ಹಲವು ಪ್ರಮುಖ ಮಾಧ್ಯಮ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿದ್ದು,

11 ಸಮೀಕ್ಷೆಗಳಲ್ಲಿ 8 ಸಮೀಕ್ಷೆಗಳು ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಸಿಗಲಿದೆ ಅಥವಾ ಬಹುಮತ ಸಿಗಲಿದೆ ಎಂದಿದ್ದರೆ,

3 ಸಮೀಕ್ಷೆಗಳು ಬಿಜೆಪಿಗೆ ಬಹುಮತ ಸಿಗಲಿದೆ ಎಂದಿದೆ.

ಇನ್ನು ಕೆಲವು ಸಂಸ್ಥೆಗಳು ಈ ಬಾರಿ ಅತಂತ್ರ ವಿಧಾನಸಭೆ ಎದುರಾಗುವ ಸಾಧ್ಯತೆ ಇದೆ ಎಂದೂ ಹೇಳಿದೆ.

--------------------

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವರ್ಷಧಾರೆ ಮುಂದುವರಿದಿದೆ.

ಕರಾವಳಿ ಮತ್ತು ದಕ್ಷಿಣ ಕನ್ನಡ ಒಳನಾಡಿನ ಎಲ್ಲ ಜಿಲ್ಲೆಗಳ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಬೆಳಗಾವಿ,

ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಮಿಂಚುಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.

ಇನ್ನು ಗುರುವಾರ ಹಾಗೂ ಶುಕ್ರವಾರ ದಕ್ಷಿಣ ಒಳನಾಡಿನ ಚಿಕ್ಕಮಗಳೂರು

ಮತ್ತು ಕೊಡಗು ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಮಳೆಯಾಗಿದೆ.

ಅಲ್ಲದೇ ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚು ಸಾಧ್ಯತೆ ಇದ್ದು,

ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30ರಿಂದ 40 ಕಿ.ಮೀ ಇರುವ ಸಾಧ್ಯತೆ ಇದೆ.

-------------------- 

ವಿಧಾನಸೌಧ

ದೇಶದಲ್ಲಿ ರಸಗೊಬ್ಬರ ದುರ್ಬಳಕೆ ತಡೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.  ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ

ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರು ಈ ಕುರಿತು ನಿರ್ದೇಶನ ನೀಡಿದ್ದಾರೆ. ರಸಗೊಬ್ಬರ ಇಲಾಖೆಯು ಯಾವುದೇ ರಸಗೊಬ್ಬರ

ದುಷ್ಕೃತ್ಯ ತಡೆಯಲು ಹಾಗೂ ರೈತರಿಗೆ ಗುಣಮಟ್ಟದ ರಸಗೊಬ್ಬರ ನೀಡಲು ಕ್ರಮಕೈಗೊಳ್ಳುತ್ತಿದೆ.

ಈ ಕ್ರಮಗಳು ದೇಶದಲ್ಲಿ ರಸಗೊಬ್ಬರಗಳ ಕಲಬೆರಕೆ ಹಾಗೂ ಅಕ್ರಮ ಮಾರಾಟವನ್ನು ತಪ್ಪಿಸಿದೆ.

ಈ ಕುರಿತು ಕಟ್ಟುನಿಟ್ಟಿನ ನಿಗಾ ಇರಿಸಲು ಮತ್ತು ದೇಶಾದ್ಯಂತ ಕಳಪೆ ಗುಣಮಟ್ಟದ ರಸಗೊಬ್ಬರ

ಗಳ ತಡೆಗೆ ರಸಗೊಬ್ಬರ ಫ್ಲೈಯಿಂಗ್ ಸ್ಕ್ವಾಡ್ ಎಂಬ ವಿಶೇಷ ತಂಡಗಳನ್ನು ರಚಿಸಲಾಗಿದೆ.

--------------------

ಕರ್ನಾಟಕ ವಿಧಾನಸಭೆಯ ಚುನಾವಣೆಯು ಬುಧವಾರ ಬಹುತೇಕ ಸುಸೂತ್ರವಾಗಿ ನಡೆದಿದ್ದು, ಮೇ 13ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಮೇ 13ರ ಶನಿವಾರ ಬೆಳಿಗ್ಗೆ 8ಕ್ಕೆ ಮತ ಎಣಿಕೆ ಶುರುವಾಗಲಿದ್ದು, ಮಧ್ಯಾಹ್ನದ ವೇಳೆಗೆ ಸ್ಪಷ್ಟಚಿತ್ರಣ ಸಿಗಲಿದೆ.

ಈ ಬಾರಿಯ ಚುನಾವಣಾ ಕಣದಲ್ಲಿ 2,615 ಜನ ಅಭ್ಯರ್ಥಿಗಳು ಭಾಗವಹಿಸಿದ್ದಾರೆ.

ಈ ಬಾರಿ ಕಾಂಗ್ರೆಸ್‌ ಹಾಗೂ ಬಿಜೆಪಿಯ ನಡುವೆ ತೀವ್ರ ಪೈಪೋಟಿಯಿದ್ದು, ಚುನಾವಣಾ ಫಲಿತಾಂಶ ಕುತೂಹಲ ಮೂಡಿಸಿದೆ.

--------------------

ಕೃಷಿ ಜಾಗರಣವು ವಿದ್ಯಾರ್ಥಿಗಳು ಹಾಗೂ ಕೃಷಿ ಉದ್ಯಮದ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ

ಇದೀಗ ವಿಂಗ್ಸ್ ಟು ಕೆರಿಯರ್‌ ಎಂಬ ವಿನೂತನ ಕಾರ್ಯಕ್ರಮವನ್ನು ಪರಿಚಯಿಸಿದೆ.

ವಿಂಗ್ಸ್ ಟು ಕೆರಿಯರ್‌ನ ಮೂಲಕ ಈಗ ವಿದ್ಯಾರ್ಥಿಗಳು ಕೃಷಿ ತಜ್ಞರಿಂದ ಮಾರ್ಗದರ್ಶನ ಪಡೆಯಲಿದ್ದಾರೆ.

ಕೃಷಿ ಜಾಗರಣದ ಮಾಧ್ಯಮ ಸಂಸ್ಥೆಯಲ್ಲಿ ಗುರುವಾರ ವಿಂಗ್ಸ್ ಟು ಕೆರಿಯರ್  ಅನಾವರಣಗೊಳಿಸಲಾಯಿತು.

ಇದು ಕೃಷಿ ಕೇಂದ್ರಿತ ವೃತ್ತಿ ವೇದಿಕೆಯಾಗಿದೆ.  ವಿದ್ಯಾರ್ಥಿಗಳು ಮತ್ತು ಕೃಷಿ-ಉದ್ಯಮ ತಜ್ಞರ ನಡುವಿನ ಅನೇಕ

ಕೃಷಿ-ವೃತ್ತಿ-ಸಂಬಂಧಿತ ಪ್ರಶ್ನೆಗಳನ್ನು ಪರಿಹರಿಸಲು ವೇದಿಕೆ ಸಹಕಾರಿಯಾಗಲಿದೆ.

ಈ ಸಮಾರಂಭದಲ್ಲಿ ಕೃಷಿ ಜಾಗರಣದ ಮುಖ್ಯ ಸಂಪಾದಕ ಎಂ.ಸಿ.ಡೊಮಿನಿಕ್ ಹಾಗೂ ಕೃಷಿ ತಜ್ಞರು ಉಪಸ್ಥಿತರಿದ್ದರು.

ಅಲ್ಲದೇ ಕೃಷಿ ಜಾಗರಣದ ಪ್ರಮುಖ ಸದಸ್ಯರು ಮತ್ತು ಪತ್ರಕರ್ತರು ಉಪಸ್ಥಿತರಿದ್ದರು.

ಕೃಷಿಗೆ ಸಂಬಂಧಿತ ಪ್ರಮುಖ ವಿಷಯಗಳನ್ನು ಹಾಗೂ ಇತ್ತೀಚಿಗೆ ಕೃಷಿ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳ ಕುರಿತು ಚರ್ಚಿಸಲಾಯಿತು.  

ಇದು ಇಂದಿನ ಪ್ರಮುಖ ಸುದ್ದಿಗಳು ನಿರಂತರ ಸುದ್ದಿಗಾಗಿ ಕೃಷಿ ಜಾಗರಣ ನೋಡಿ ಧನ್ಯವಾದ.    

Published On: 11 May 2023, 03:26 PM English Summary: Continued year in most districts of the state!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.