1. ಸುದ್ದಿಗಳು

BREAKING ಖ್ಯಾತ ಹಾಸ್ಯ ನಟ ರಾಜು ಶ್ರೀವಾತ್ಸವ ನಿಧನ

Maltesh
Maltesh
Comedian Raju Dies at AIIMS

ಹಾಸ್ಯನಟ ರಾಜು ಶ್ರೀವಾಸ್ತವ್ ನಿಧನರಾಗಿದ್ದಾರೆ. ದೆಹಲಿ ಏಮ್ಸ್‌ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.

58 ವರ್ಷದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಇತ್ತೀಚಿಗೆ  ವರ್ಕೌಟ್‌ ಮಾಡುತ್ತಿರುವಾಗ ಎದೆ ನೋವಿನಿಂದ  ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ನಿರಂತರ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.

ರಾಜು ಶ್ರೀವಾಸ್ತವ್ ಅವರು ತಮ್ಮ ವಿಶಿಷ್ಟ ಅಭಿನಯದಿಂದ ನೋಡುಗರ ಮನಸೆಳೆದಿದ್ದರು. ನವೀರಾದ ಹಾಸ್ಯದಿಂದಲೇ ಅವರು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದರು.  2005 ರಲ್ಲಿ ಗ್ರೇಟ್ ಇಂಡಿಯನ್ ಲಾಫ್ಟರ್ ಮೊದಲ ಸೀಸನ್‌ನಲ್ಲಿ ಬಾಗವಹಿಸಿದ ಅವರು ಅಂದಿನಿಂದ ತಮ್ಮದೆಯಾದ ಸ್ಥಾನವನ್ನು ಗಳಿಸಿದರು.

ಅವರು "ಮೈನೆ ಪ್ಯಾರ್ ಕಿಯಾ", "ಬಾಜಿಗರ್", "ಬಾಂಬೆ ಟು ಗೋವಾ" (ರೀಮೇಕ್) ಮತ್ತು "ಆಮ್ದಾನಿ ಅಥಾನಿ ಖರ್ಚಾ ರುಪೈಯಾ" ಮುಂತಾದ ಹಿಂದಿ ಚಲನಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾRE. ಅವರು "ಬಿಗ್ ಬಾಸ್" ಸೀಸನ್ ಮೂರರಲ್ಲಿ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಅಷ್ಟೇ ಅಲ್ಲದೆ ಅವರು ಉತ್ತರ ಪ್ರದೇಶ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

Published On: 21 September 2022, 10:58 AM English Summary: Comedian Raju Srivastav Passes away

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.