1. ಸುದ್ದಿಗಳು

2,000 ಸಾವಿರ ನೋಟು ಬದಲಾವಣೆಗೆ ಜನರಿಂದ ಸರ್ಕಸ್‌!

Hitesh
Hitesh
Circus by people to change 2,000 thousand notes! (Pic Credits: https://twitter.com/zomato)

ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿನ್ಯೂಸ್‌ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.

1. ರಾಜ್ಯದಲ್ಲಿ ಮುಂದುವರಿಯಲಿದೆ ಭಾರೀ ಮಳೆ: ಎಚ್ಚರ!
2. ನೈರುತ್ಯ ಮುಂಗಾರು ಪ್ರವೇಶ; ವಾಡಿಕೆಗಿಂತ ವಿಳಂಬ ಸಾಧ್ಯತೆ
3. ಇಂದಿರಾಕ್ಯಾಂಟೀನ್‌ ಶುಭಾರಂಭವಾಗಲಿದೆ: ಸಿದ್ದರಾಮಯ್ಯ
4. ಕೃಷಿ ಮತ್ತು ಮಣ್ಣಿನ ಸಂಬಂಧ ದೈವಿಕವಾದದ್ದು: C.V. ಆನಂದ್‌ ಬೋಸ್‌
5. ಆಧಾರ್ ದೃಢೀಕರಣ 1.96 ಶತಕೋಟಿ ವಹಿವಾಟು!
6. ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿಗಾಗಿ ಅರ್ಜಿ ಆಹ್ವಾನ
7. 2,000 ಸಾವಿರ ನೋಟು ಬದಲಾವಣೆಗೆ ಜನರಿಂದ ಸರ್ಕಸ್‌!

ಸುದ್ದಿಗಳ ವಿವರ ಈ ರೀತಿ ಇದೆ.

1. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ;

ಕರಾವಳಿಯ ಹಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ.

ಇನ್ನು ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ಝಳದ ತೀವ್ರತೆ ಮುಂದುವರಿದಿದೆ.

ರಾಜ್ಯದಲ್ಲಿ ಅತೀ ಗರಿಷ್ಠ ಉಷ್ಣಾಂಶವು 42.2 ಡಿಗ್ರಿ ಸೆಲ್ಸಿಯಸ್‌ ಕಲಬುರಗಿಯಲ್ಲಿ ದಾಖಲಾಗಿದೆ.

ಮುಂದಿನ 24 ಗಂಟೆಯ ಅವಧಿಯಲ್ಲಿ ದಕ್ಷಿಣ ಒಳನಾಡಿನಲ್ಲಿ ಎಲ್ಲ ಜಿಲ್ಲೆಗಳ ಹಲವು ಕಡೆಗಳಲ್ಲಿ;

ಕರಾವಳಿ ಮತ್ತು ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಮಿಂಚು ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ

ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ವಿವಿಧೆಡೆ ಬಿರುಗಾಳಿ ಹಾಗೂ ಮಿಂಚು ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ.

ಕೆಲವೆಡೆ ಗಾಳಿಯ ವೇಗವು 30ರಿಂದ 40 ಕಿ.ಮೀ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.   
--------------------
2. ಈ ಬಾರಿ ನೈರುತ್ಯ ಮುಂಗಾರು ಪ್ರವೇಶ ಈ ವರ್ಷ ವಾಡಿಕೆಗಿಂತ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ

ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನೈರುತ್ಯ ಮುಂಗಾರು ಜೂನ್ 4ರ ಒಳಗೆ ಕೇರಳ ಪ್ರವೇಶಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.

ಸಾಮಾನ್ಯವಾಗಿ ಜೂನ್ 1ರಂದು ಮುಂಗಾರು ಕೇರಳವನ್ನು ಪ್ರವೇಶ ಮಾಡುವುದು ಹಿಂದಿನ ವಾಡಿಕೆಯಾಗಿದೆ.

ಆದರೆ, ಈ ಬಾರಿ ಮುಂಗಾರು ಪ್ರವೇಶ ನಾಲ್ಕು ದಿನ ಮೊದಲು ಇಲ್ಲವೇ ನಾಲ್ಕು ದಿನ

ತಡವಾಗಿ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
--------------------   

3. ಬಡವರ ಹಸಿವು ತಣಿಸುವ ಉದ್ದೇಶದಿಂದ ಪ್ರಾರಂಭಿಸಿದ್ದ ಇಂದಿರಾಕ್ಯಾಂಟೀನ್‌ ಪುನರಾರಂಭವಾಗಲಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಗರ-ಪಟ್ಟಣಗಳಲ್ಲಿರುವ ಮತ್ತು ಕಾರ್ಯನಿಮಿತ್ತ ನಗರಗಳಿಗೆ

ಬರುವ ಬಡವರ ಹಸಿವು ತಣಿಸುವ ಸದುದ್ದೇಶದಿಂದ ನಮ್ಮ ಸರ್ಕಾರ ಪ್ರಾರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು

ಬಿಜೆಪಿ ಸರ್ಕಾರ ನಿರ್ಲಕ್ಷಿಸಿದ ಕಾರಣದಿಂದಾಗಿ ಕೆಲವು ಮುಚ್ಚಿವೆ, ಹಲವು ಮುಚ್ಚುವ ಸ್ಥಿತಿಯಲ್ಲಿವೆ.

ಇಂದಿರಾ ಕ್ಯಾಂಟಿನ್‌ಗಳನ್ನು ಮುಚ್ಚಲು ನಾವು ಅವಕಾಶ ನೀಡುವುದಿಲ್ಲ.

ಅಗತ್ಯ ಸಂಪನ್ಮೂಲ ಒದಗಿಸಿ ಅವುಗಳನ್ನು ಪುನಶ್ಚೇತನಗೊಳಿಸುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ.

ಅಲ್ಲದೇ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸ್ವಸ್ಥ ಮತ್ತು ರುಚಿಕರವಾದ ಊಟ-ತಿಂಡಿ

ನೀಡುವುದು ಪ್ರಾರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------------------
4. ಕೃಷಿ ಮತ್ತು ಮಣ್ಣಿನ ನಡುವಿನ ಸಂಬಂಧವು ದೈವಿಕವಾಗಿದೆ.

ಭಗವಂತ ಶಿವ, ಬ್ರಹ್ಮ, ವಿಷ್ಣುವಿನ ಆಶೀರ್ವಾದ ಇಂದು ನಮ್ಮ ಕೃಷಿ ಭೂಮಿಯ ಮೇಲಿದೆ.

ಬೇಸಾಯವು ದೈವಿಕ ಮೂಲವಾಗಿದ್ದು ಸಾಂಕ್ರಾಮಿಕ ರೋಗದ ಸಮಯದಲ್ಲಿ ಈಡೀ ದೇಶಕ್ಕೆ ಭಾರತ ಆಹಾರ ಪೂರೈಕೆದಾರನಾಗಿತ್ತು

ಇದು ನಮ್ಮ ಹೆಮ್ಮೆ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಡಾ.C.V. ಆನಂದ್‌ ಬೋಸ್‌ ಅವರು ಅಭಿಪ್ರಾಯಪಟ್ಟರು.

ಕೃಷಿ ಜಾಗರಣ ಪ್ರಸ್ತುತಿ ಕೆಜೆ ಚೌಪಾಲ್‌ನಲ್ಲಿ ಸೋಮವಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ

ಅವರು ಕೃಷಿ ಜಾಗರಣದಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ನಾನು ಕೂಡ ಕೇರಳದಿಂದ ಬಂದಿದ್ದೇನೆ,

ನನ್ನೂರು ದೇವರ ನಾಡು ಎಂದು ಖ್ಯಾತಿ ಗಳಿಸಿದೆ. ಸ್ವಾಮಿ ಪರಶುರಾಮನ ಕೃಪಾಶಿರ್ವಾದದಿಂದ ಈ ನಾಡು ಉದಯಿಸಿದೆ.

ಪರುಶುರಾಮನು ಕೃಷಿ ಕುರಿತು ಪುಸ್ತಕ ರಚಿಸಿದ್ದು ಇದರಲ್ಲಿ ಕೃಷಿ ಹಾಗೂ ಬಿತ್ತನೆ ಕುರಿತು ಆಗಿನ ಕಾಲದಲ್ಲಿಯೇ ಉಲ್ಲೇಖಿಸಿದ್ದಾನೆ ಎಂದು ತಿಳಿಸಿದರು.

Pic Credits: AadhaarOfficial

5. ಆಧಾರ್ ಹೊಂದಿರುವವರು ಈ ವರ್ಷ ಏಪ್ರಿಲ್ನಲ್ಲಿ 1.96 ಶತಕೋಟಿ ದೃಢೀಕರಣ ವಹಿವಾಟುಗಳನ್ನು ಮಾಡಿದ್ದಾರೆ.

ಇದು 2022ರ ಏಪ್ರಿಲ್ಗೆ ಹೋಲಿಕೆ ಮಾಡಿದರೆ, ಶೇಕಡ 19.3ಕ್ಕಿಂತ ಹೆಚ್ಚಾಗಿದೆ.

ಇದು ಡಿಜಿಟಲ್ ಆರ್ಥಿಕತೆಯ ಬೆಳವಣಿಗೆ ಮತ್ತು ಭಾರತದಲ್ಲಿ ಆಧಾರ್ (Aadhaar in India) ಬಳಕೆಯನ್ನು ಸೂಚಿಸುತ್ತದೆ ಎನ್ನಲಾಗಿದೆ.

ಹೆಚ್ಚಿನ ದೃಢೀಕರಣ ವಹಿವಾಟು ಸಂಖ್ಯೆಗಳನ್ನು ಫಿಂಗರ್‌ಪ್ರಿಂಟ್ ಬಳಸಿ ನಡೆಸಲಾಗಿದೆ.
--------------------
6. 2023-24ನೇ ಸಾಲಿನಲ್ಲಿ ಜಿಲ್ಲೆಯ ರೈತ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಧಾರವಾಡ ಜಿಲ್ಲೆಯ ರೈತ ಮಕ್ಕಳಿಗೆ 2023-24ನೇ ಸಾಲಿಗೆ, 10 ತಿಂಗಳ ಅವಧಿಗೆ ಅಂದರೆ ಜೂನ್.1, 2023 ರಿಂದ

ಮಾರ್ಚ್ 30, 2024 ರವರೆಗೆ ಗದಗ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 5 ಮಹಿಳೆಯರಿಗೆ ಹಾಗೂ 10 ಪುರುಷರಿಗೆ

ಸೇರಿ ಒಟ್ಟು-15 ಅಭ್ಯರ್ಥಿಗಳಿಗೆ ತೋಟಗಾರಿಕಾ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಅರ್ಜಿಗಳನ್ನು ಧಾರವಾಡ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
--------------------
7. ದೇಶದಲ್ಲಿ 2000 ರೂ. ನೋಟುಗಳನ್ನು ಗ್ರಾಹಕರಿಗೆ ವಿತರಿಸದಂತೆ ರಿಸರ್ವ್ ಬ್ಯಾಂಕ್ ಘೋಷಿಸುತ್ತಿದ್ದಂತೆಯೇ 2000

ಸಾವಿರ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನ ವಿವಿಧ ರೀತಿಯ ಸರ್ಕಸ್‌ಗಳನ್ನು ಮಾಡುತ್ತಿದ್ದಾರೆ.

ಮುಖ್ಯವಾಗಿ ಜನ ಎರಡು ಸಾವಿರ ನೋಟುಗಳನ್ನು ಬದಲಾಯಿಸಿಕೊಳ್ಳಲು ಹೆಚ್ಚು ಚಿನ್ನವನ್ನು ಖರೀದಿಸಿದರೆ,

ಇನ್ನೂ ಕೆಲವರು ಬ್ಯಾಂಕ್‌ಗಳಲ್ಲಿ ಹಾಗೂ ಪುಡ್‌ ಹೋಮ್‌ ಡಿಲವರಿಯಲ್ಲಿ 2 ಸಾವಿರ ರೂಪಾಯಿ ನೋಟುಗಳನ್ನೇ ನೀಡುತ್ತಿದ್ದಾರೆ.

ಜನ ಎರಡು ಸಾವಿರ ರೂಪಾಯಿ ಬಳಸಿ ಚಿನ್ನ ಖರೀದಿಯಲ್ಲಿ ತೊಡಗಿಸಿಕೊಂಡಿರುವುದರಿಂದ ಚಿನ್ನದ ಬೆಲೆಯಲ್ಲೂ ಹೆಚ್ಚಳವಾಗಿದೆ.

ಕೇಂದ್ರ ಸರ್ಕಾರವು ನೋಟು ಅಮಾನ್ಯೀಕರಣವನ್ನು ಪೂರ್ಣಗೊಳಿಸಿದ ಸುಮಾರು 7 ವರ್ಷಗಳ ನಂತರ,

RBI 2000 ರೂ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿದೆ.  
------------------- 

Published On: 23 May 2023, 12:58 PM English Summary: Circus by people to change 2,000 thousand notes!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.