1. ಸುದ್ದಿಗಳು

ಮೂರು ದಶಕಗಳಲ್ಲಿ ಇದೆ ಮೊದಲ ಬಾರಿಗೆ ಭಾರತದಿಂದ ಅಕ್ಕಿ ಖರೀದಿಸಿದ ಚೀನಾ

China Import Rice from India

ಭಾರತ -ಚೀನಾ ಗಡಿ ಯುದ್ಧದ ಕಾರಣದಿಂದಾಗಿ ಭಾರತ -ಚೀನಾ ನಡುವೆ ಸಂಬಂಧದಲ್ಲಿ ಕಾರ್ಮೋಡ ಆವರಿಸಿದೆ, ಈ ನಡುವೆ ಚೀನಾ ಭಾರತದಿಂದ ಅಕ್ಕಿಯನ್ನು ಖರೀದಿಸಲು ನಿರ್ಧರಿಸಿದೆ. 

ಮೂರು ದಶಕಗಳಲ್ಲಿ ಇದೆ ಮೊದಲ ಬಾರಿಗೆ ಭಾರತದಿಂದ ಅಕ್ಕಿಯನ್ನು ರಫ್ತ್ತು ಮಾಡಿಕೊಳ್ಳಲು ಚೀನಾ ನಿರ್ಧರಿಸಿದೆ. ಭಾರತ ಚೀನಾ ನಡುವೆ ಸಂಘರ್ಷದ ನಡುವೆಯೂ ಚೀನಾ ಭಾರತದ ಅಕ್ಕಿ ಖರೀದಿಸಲು ಮುಂದಾಗಿರುವುದು ಇಡೀ ಜಗತ್ತನ್ನು ಹುಬ್ಬೇರಿಸುವಂತೆ ಮಾಡಿದೆ. ಪ್ರತಿ ವರ್ಷ ಚೀನಾ ಥೈಲ್ಯಾಂಡ್, ಮಯನ್ಮಾರ್, ವಿಯೆಟ್ನಾಂ ಹಾಗೂ ಪಾಕಿಸ್ತಾನಗಳಿಂದ ಖರೀದಿಸುತಿತ್ತು, ಆದರೆ  ಸರಬರಾಜಿನಲ್ಲಿ ಕೊರತೆ ಉಂಟಾಗಿರುವುದರಿಂದ ಹಾಗೂ ಭಾರತ ರಿಯಾಯಿತಿ ನೀಡಿರುವ ಕಾರಣದಿಂದಾಗಿ ಚೀನಾ ಭಾರತದಿಂದ ಅಕ್ಕಿಯನ್ನು ಖರೀದಿಸಲು ನಿರ್ಧರಿಸಿದೆ. 

ಚೀನಾ ಒಟ್ಟು 4 ಮಿಲಿಯನ್ ಟನ್ ಅಕ್ಕಿಯನ್ನು ರಫ್ತ್ತು ಮಾಡಿಕೊಳ್ಳುತಿತ್ತು, ಚೀನಾ ಹಿಂದೆಯೂ ಕೂಡ ಭಾರತದಿಂದ ಅಕ್ಕಿಯನ್ನು ರಫ್ತ್ತು ಮಾಡಿಕೊಳ್ಳುತಿತ್ತು ಆದರೆ ಗುಣಮಟ್ಟದ ಕಾರಣವೊಡ್ಡಿ ಭಾರತದಿಂದ ರಫ್ತ್ತು ಮಾಡುವುದನ್ನು ನಿಲ್ಲಿಸಿತ್ತು. ಆದರೆ ಭಾರತದ ಅಕ್ಕಿಯ ಗುಣಮಟ್ಟವನ್ನು ನೋಡಿ ಮುಂದಿನ ವರ್ಷ ಇನ್ನು ಹೆಚ್ಚಿನ ಅಕ್ಕಿಯನ್ನು ಅಮುದು ಮಾಡಿಕೊಳ್ಳಲಾಗುವುದು ಎಂದು ಭಾರತ ಅಕ್ಕಿ ರಾಫ್ತುದಾರರ ಸಂಘದ ಅಧ್ಯಕ್ಷ ಬಿ. ವಿ. ಕೃಷ್ಣರಾವ್ ಹೇಳಿದ್ದಾರೆ. 

ಒಂದು ಟನ್ ಅಕ್ಕಿಗೆ 300 ಡಾಲರ್ ಹಣವನ್ನು ನಿಗದಿಪಡಿಸಲಾಗಿದೆ ಹಾಗೂ ಭಾರತ ಜಗತ್ತಿನ ಅತೀ ದೊಡ್ಡ ಅಕ್ಕಿ ರಫ್ತ್ತು ಮಾಡುವ ದೇಶವಾಗಿದೆ ಹಾಗೂ ಚೀನಾ ಜಗತ್ತಿನ ಅತೀ ದೊಡ್ಡ ಅಕ್ಕಿ ಅಮುದು ಮಾಡಿಕೊಳ್ಳುವ ದೇಶವಾಗಿದೆ. 

Published On: 04 December 2020, 10:36 AM English Summary: china import rice from india

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.