1. ಸುದ್ದಿಗಳು

ರಾಸುಗಳಂತೆ ಕೋಳಿಗಳಿಗೂ ಗರ್ಭಧಾರಣೆ

chicken

ಆತ್ಮೀಯ ಸ್ನೇಹಿತರೆ, ಕೃತಕ ಗರ್ಭಧಾರಣೆಯು ಈಗಿನ ದಿನಗಳಲ್ಲಿ ಒಂದು ಸರಳವಾದ ಮತ್ತು ಅತೀ ಕಡಿಮೆ ಸಮಯದಲ್ಲಿ ಹೆಚ್ಚು ರಾಸುಗಳಲ್ಲಿ ಗರ್ಭಧಾರಣೆಯನ್ನು ಮಾಡುವ ತಂತ್ರಜ್ಞಾನವಾಗಿದೆ.

ಈಗ ಈ ಒಂದು ತಂತ್ರಜ್ಞಾನವು ಕುಕ್ಕೊಟೋದ್ಯಮದಲ್ಲಿ ಬಳಕೆಯಲ್ಲಿದ್ದು ಇದನ್ನು ಈಗಾಗಲೇ ಸಂಶೋಧನಾ ಮತ್ತು ತಳಿ ಅಭಿವೃದ್ಧಿ ಕೇಂದ್ರಗಳಲ್ಲಿ ಬಳಸುತ್ತಿದ್ದಾರೆ. ಇದರ ಮೂಲಕ ರೈತರು ತಮಗೆ ಬೇಕಾದ ತಳಿಯ ಮರಿಗಳನ್ನು ಪಡೆಯಬಹುದಾಗಿದೆ.

ಕೃತಕಗರ್ಭಧಾರಣೆಯ ಉಪಯೋಗಗಳು :

ಬ್ರಾಯ್ಲರ್ಗಳಲ್ಲಿ ಹುಂಜವು ಹೆಚ್ಚಿನ ತೂಕ ಹಾಗೂ ಸಣ್ಣ ಕಾಲುಗಳಿರುವುದರಿಂದ ನೈಸರ್ಗಿಕವಾದ ಸಂಭೋಗಕ್ಕೆ ತೊಂದರೆಯಾಗುತ್ತದೆ.

ವಯಸ್ಸಾದಂತೆ ಹುಂಜಗಳ ಆರೋಗ್ಯ ಮತ್ತು ಸಂತಾನೋತ್ಪತ್ತಿಯ ಸಾಮರ್ಥ್ಯ ಕ್ಷಿಣಿಸುವುದರಿಂದ ಕೃತಕ ಗರ್ಭಧಾರಣೆಯ ಮೂಲಕ ಅದರ ವೀರ್ಯವನ್ನು ಸಂಗ್ರಹಿಸಿ ಅದರ ಮರಿಗಳನ್ನು ಪಡೆಯಬಹುದಾಗಿದೆ.

ಕೆಲವೊಮ್ಮೆ ನೈಸರ್ಗಿಕ ಸಂಭೋಗದಿಂದ ಆಗುವ ಹಾನಿಗಳಿಂದ ಕೋಳಿಗಳನ್ನು ರಕ್ಷಿಸಬಹುದು.

ವೀರ್ಯವನ್ನುಸಂಗ್ರಹಿಸುವ ವಿಧಾನ:

ವೀರ್ಯವನ್ನುಸಂಗ್ರಹಿಸುವ ಮೊದಲು , ಹುಂಜವನ್ನು ಅದರ ಉದರ ಮತ್ತು ಬಾಲದ ಜಾಗದಲ್ಲಿ ಉಜ್ಜಬೇಕು.

ಇದರ ನಂತರ ಹುಂಜದ ಬಾಲವನ್ನು ಮುಂದಕ್ಕೆ ತಳ್ಳಿ , ಅದೇ ಕೈಯ ಹೆಬ್ಬೆರಳು ಹಾಗೂ ತೋರು ಬೆರಳಿನ ಸಹಾಯದಿಂದ ಒತ್ತಡವನ್ನು ಹೇರಿದಾಗ , ಹೊರಬಂದ ವೀರ್ಯವನ್ನು ಟೆಸ್ಟ್ ಟ್ಯೂಬ್ ನಲ್ಲಿ ಸಂಗ್ರಹಿಸಬೇಕು.

ಪ್ರತಿ ಹುಂಜದಿಂದ 0.7-1ml ನಷ್ಟುವೀರ್ಯವನ್ನುಪಡೆಯಬಹುದು ಹಾಗೂ ಸಂಗ್ರಹಿಸಿದ ಒಂದು ಗಂಟೆಯ ಒಳಗೆ ಅದನ್ನು ಉಪಯೋಗಿಸಬೇಕು ಇಲ್ಲದಿದ್ದಲ್ಲಿ ಅದರ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.

ಗರ್ಭಧಾರಣೆಯ ವಿಧಾನ :

ಗರ್ಭಧಾರಣೆ ಮಾಡುವ ಸಮಯದಲ್ಲಿ ಕೋಳಿಯ ಉದರದ ಹಿಂಭಾಗದಏಡಗಡೆ ಒತ್ತಡವನ್ನು ಹಾಕಿದ ನಂತರ ಸಿರಿಂಜ್/ಪ್ಲಾಸ್ಟಿಕ್ಟ್ಯೂಬ್ಮುಖಾಂತರಪ್ರತಿ ಕೋಳಿಗೆ 0.1ml ನಂತೆವೀರ್ಯವನ್ನು ಬಳಸಬೇಕು.

ಮುಂಜಾನೆಯ ಸಮಯದಲ್ಲಿ ಕೋಳಿಯುಮೊಟ್ಟೆ ಇಡುವ ಸಂಭವವಿರುವುದರಿಂದ ಗರ್ಭಧಾರಣೆಯನ್ನು ಮಧ್ಯಾಹ್ನಅಥವಾಸಂಜೆಯ ಸಮಯದಲ್ಲಿ ಇದನ್ನುಮಾಡುವುದುಸೂಕ್ತ. 

Published On: 27 April 2021, 09:45 AM English Summary: Chickens have also artificial insemination

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.