1. ಸುದ್ದಿಗಳು

ಕೇಂದ್ರ ರೈಲ್ವೆಯಲ್ಲಿ 2532 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಸಂತಸದ ಸುದ್ದಿ. ಕೇಂದ್ರ ರೇಲ್ವೆ ಇಲಾಖೆಯಲ್ಲಿ ಒಟ್ಟು 2532 ಹುದ್ದೆಗಳ  ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಕೇಂದ್ರ ರೈಲ್ವೆಯ ನೇಮಕಾತಿ ವಿಭಾಗವು ಐದು ಕ್ಲಸ್ಟರ್‌ಗಳಿಗೆ ಅಪ್ರೆಂಟಿಸ್ ಹುದ್ದೆಗಳನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಿದರೆ. ಮುಂಬೈಲು ಕ್ಲಸ್ಟರ್ ಅಪ್ರೆಂಟ್ ಹುದ್ದೆಗಳು 1767, ಭುಸವಲ್ ಕ್ಲಸ್ಟರ್ 420, ಪುಣೆ ಕ್ಲಸ್ಟರ್ 152, ನಾಗ್ಪುರ ಕ್ಲಸ್ಟರ್ 114, ಸೋಲಾಪುರ ಕ್ಲಸ್ಟರ್ 79,  ಹೀಗೆ ಒಟ್ಟು 2532 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಈ ಹುದ್ದೆಗಳನ್ನು ವಿವಿಧ ಟ್ರೇಡ್‌ಗಳ ಅಡಿಯಲ್ಲಿ ನೇಮಕ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5-3-2021 ಸಾಯಂಕಾಲ 5 ರೊಳಗೆ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ: 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಶೇಕಡ.50 ಅಂಕಗಳಿಗೆ ಕಡಿಮೆ ಇಲ್ಲದಂತೆ ಪಾಸ್‌ ಮಾಡಿರಬೇಕು, ಜತೆಗೆ ಸಂಬಂಧಿತ ಟ್ರೇಡ್‌ಗಳಲ್ಲಿ ಐಟಿಐ ಪಾಸ್‌ ಮಾಡಿರಬೇಕು.

ವಯೋಮಿತಿ ಅರ್ಹತೆಗಳು: ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ ವಯಸ್ಸಾಗಿರಬೇಕು. ಗರಿಷ್ಠ 24 ವರ್ಷ ವಯೋಮಿತಿ ಮೀರಿರಬಾರದು

ಅರ್ಜಿ ಶುಲ್ಕ ಎಷ್ಟು?

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಶುಲ್ಕ ರೂ.100 ಪಾವತಿಸಬೇಕು. ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬಹುದು. ನೋಟಿಫಿಕೇಷನ್ ವಿವರಕ್ಕಾಗಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಬಹುದು.

https://img.freejobalert.com/uploads/2021/02/Notificaiton-Central-Railway-Apprentice-2021.pdf

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಬಹುದು. https://www.rrccr.com/TradeApp/Registration/Index

Published On: 09 February 2021, 02:27 PM English Summary: Central Railway apprentice recruitment

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2025 Krishi Jagran Media Group. All Rights Reserved.