ಪಡಿತರದಾರರಿಗೆ ಸಂತಸದ ಸುದ್ದಿ. ಈಗಾಗಲೇ ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಏಪ್ರೀಲ್ ನಿಂದ ಪಡಿತರದಲ್ಲಿ ಅಕ್ಕಿ ಜೊತೆ ರಾಗಿ ಹಾಗೂ ಜೋಳ ವಿತರಣೆ ಮಾಡಲಾಗುವುದು ಎಂದು ಹೇಳಿದ್ದರು. ಅದರಂತೆ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಪಡಿತರದಲ್ಲಿ ಅಕ್ಕಿಯ ಜೊತೆ ರಾಗಿ ಹಾಗೂ ಜೋಳ ವಿತರಣೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದೆ" ಎಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಡಿತರದಲ್ಲಿ ಅಕ್ಕಿ ಮತ್ತು ಗೋಧಿ ವಿತರಣೆಯ ಪ್ರಮಾಣ ಕಡಿತಗೊಳಿಸಿ ಅದೇ ಪ್ರಮಾಣದಲ್ಲಿ ರಾಗಿ, ಜೋಳ ಅಥವಾ ಸ್ಥಳೀಯವಾಗಿ ಬಳಕೆಯಲ್ಲಿರುವ ಧಾನ್ಯಗಳ ವಿತರಣೆಗೆ ಅವಕಾಶ ಕಲ್ಪಿಸುವಂತೆ ಇತ್ತೀಚೆಗೆ ಕೇಂದ್ರ ಆಹಾರ ಹಾಗೂ ನಾಗರಿಕ ಪೂರೈಕೆ ರಾಜ್ಯ ಸಚಿವ ರಾವ್‌ಸಾಹೇಬ್ ದಾನ್ವೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ" ಎಂದರು.
"ದ.ಕ ಜಿಲ್ಲೆಗಳಲ್ಲಿ 3 ಕೆ.ಜಿ. ರಾಗಿ ಹಾಗೂ 2 ಕೆ.ಜಿ. ಅಕ್ಕಿ ಹಾಗೂ ಉತ್ತರದ ಜಿಲ್ಲೆಗಳಲ್ಲಿ 3 ಕೆ.ಜಿ. ಜೋಳ ಮತ್ತು 2 ಕೆ.ಜಿ. ಅಕ್ಕಿ ನೀಡಲಾಗುವುದು. ಸದ್ಯ ರಾಜ್ಯದಲ್ಲಿ ಅಕ್ಕಿ ಹಾಗೂ ಗೋಧಿ ಮಾತ್ರವೇ ನೀಡಲಾಗುತ್ತಿದೆ. "ಫಲಾನುಭವಿಗಳಿಗೆ ನೀಡುತ್ತಿರುವ ಒಟ್ಟು ಪ್ರಮಾಣದಲ್ಲಿ ಕಡಿತ ಮಾಡಿಲ್ಲ. ಬದಲಾಗುನ ಬದಲಾವಣೆ ಮಾಡಲಾಗುತ್ತದೆ. ಜನರು ಏನನ್ನು ತಿನ್ನಲು ಇಚ್ಛಿಸುತ್ತಾರೋ ಅದನ್ನೇ ನೀಡುತ್ತಿದ್ದೇವೆ. ಸಂಪೂರ್ಣವಾಗಿ ಅಕ್ಕಿಯನ್ನೇ ನೀಟಿ ಎಂದು ಜನರು ಒತ್ತಾಯಿಸಿದ್ದಲ್ಲಿ ಅದನ್ನೇ ನೀಡುತ್ತೇವೆ" ಎಂದರು.
ಭತ್ತ, ರಾಗಿ ಮತ್ತು ಜೋಳವನ್ನು ಬೆಂಬಲಬೆಲೆಯಲ್ಲಿ ಖರೀದಿ ಮಾಡಲಾಗುವುದು ನಂತರ ಅದನ್ನೇ ಪಡಿತರದಾರರಿಗೆ ಏಪ್ರೀಲ್ ಒಂದರಿಂದ ವಿತರಣೆ ಮಾಡಲಾಗುವುದು.
Share your comments