1. ಸುದ್ದಿಗಳು

ಡಿಸೆಂಬರ್ 15 ರಂದು ಕ್ಯಾಂಪಸ್ ಸಂದರ್ಶನ

ಪದವಿ ಮುಗಿದ ತಕ್ಷಣ ಉದ್ಯೋಗ ಹುಡುಕುವುದು ತುಂಬಾ ಕಷ್ಟಕರ, ಅದಕ್ಕಾಗಿಯೇ ಇದನ್ನು ಸರಳವಾಗಿಸಲು ಹಲವಾರು ಕಂಪನಿಗಳು ಕಾಲೇಜಿಗೆ ಬಂದು ಕ್ಯಾಂಪಸ್ ಸಂದರ್ಶನದ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಕಂಪನಿಗಳಿಗೆ ಸೇರಿಕೊಳ್ಳುತ್ತವೆ. ಇದರ ಮೂಲಕ ವಿದ್ಯಾರ್ಥಿಗಳಿಗೆ ಓದು ಮುಗಿದ ತಕ್ಷಣವೇ ಒಂದು ಉದ್ಯೋಗವಕಾಶ ದೊರೆತಂತಾಗುತ್ತದೆ, ಅವಕಾಶ ಎಲ್ಲಾ ವಿದ್ಯಾರ್ಥಿಗಳಿಗೂ ಲಭ್ಯವಾಗುವುದಿಲ್ಲ ಯಾಕೆಂದರೆ ಎಲ್ಲಾ ಕಾಲೇಜುಗಳಲ್ಲಿ ಕ್ಯಾಂಪಸ್ ಸಂದರ್ಶನ ನಡೆಯುವುದಿಲ್ಲ ಹಾಗಾಗಿ ಯಾವ ಕಾಲೇಜಿನಲ್ಲಿ ನಡೆಯುತ್ತದೆಯೋ ಅಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು.

 ಕರ್ನಾಟಕ ರಾಜ್ಯದ ಹುಬ್ಬಳ್ಳಿ ಜಿಲ್ಲೆಯಲ್ಲಿ ಇಂಥದ್ದೊಂದು ಅವಕಾಶ ದೊರಕಿದ್ದು ಪದವಿ ಮುಗಿಸಿದ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗಿಯಾಗಿ ಉದ್ಯೋಗವಕಾಶವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಹುಬ್ಬಳ್ಳಿ ನಗರದ ವೇಮನ  ವಿದ್ಯಾವರ್ಧಕ ಸಂಘದ ಕೆ ಎಚ್ ಪಾಟೀಲ್ ಸ್ನಾತಕ್ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಡಿಸೆಂಬರ್ 15ರಂದು ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಗಿದೆ. ಈ ಸಂದರ್ಶನದಲ್ಲಿ ಅಂತಿಮ ವರ್ಷದ ಅಥವಾ ಪದವಿಯನ್ನು ಮುಗಿಸಿದ ವಿದ್ಯಾರ್ಥಿಗಳು ಭಾಗವಹಿಸಬಹುದು, ಈ ಕಾಲೇಜಿನಲ್ಲಿ ಸಂದರ್ಶನ ಮಾಡಲು ಆಸ್ಟ್ರೇಲಿಯಾ ಮೂಲದ ಸಿ3 ಸೊಲ್ಯೂಷನ್ ಬಿಪಿಓ ಇಂಡಿಯಾ ಪ್ರೈವೇಟ್  ಲಿಮಿಟೆಡ್ ಕಂಪನಿ ಬರುತ್ತದೆ.

;

ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಿ ಹಾಗೂ ತಮ್ಮ ಸ್ನೇಹಿತರಿಗೂ ಈ ವಿಷಯವನ್ನು ತಿಳಿಸಿ ಕೊಡಬೇಕಾಗಿ ವಿನಂತಿ.

ಲೇಖಕರು: ಚಿನ್ನಪ್ಪ ಎಸ್. ಅಂಗಡಿ

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.