1. ಸುದ್ದಿಗಳು

ಕೊಬ್ಬರಿ ಬೆಳೆಗಾರರಿಗೆ ಬಂಪರ್‌: ಬೆಂಬಲ ಬೆಲೆ ಹೆಚ್ಚಳ

KJ Staff
KJ Staff

ಕೊಬ್ಬರಿ ಬೆಳೆಗಾರರಿಗೆ ಬಂಪರ್‌ ಗುಡ್ ನ್ಯೂಸ್. ತೆಂಗಿನ ಎಣ್ಣೆ ಉತ್ಪಾದನೆಗೆ ಬಳಸುವ ಕೊಬ್ಬರಿಯ (ಮಿಲ್ಲಿಂಗ್ ಕೊಪ್ರಾ) ಮತ್ತು ತಿನ್ನುವ ಕೊಬ್ಬರಿಯ (ಬಾಲ್ ಕೊಪ್ರಾ) ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕೇಂದ್ರ ಸರ್ಕಾರವು ಕ್ರಮವಾಗಿ ಕ್ವಿಂಟಲ್‌ಗೆ 375ರೂಪಾಯಿ ಮತ್ತು  300ರೂಪಾಯಿಯಷ್ಟು ಹೆಚ್ಚಿಸಿದೆ.

ಹೌದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಸತ್ ಸಮಿತಿಯು 2021ರ ಅವಧಿಗೆ ಈ ಎಂಎಸ್‌ಪಿಗೆ ಒಪ್ಪಿಗೆ ನೀಡಿದೆ. ಸಾಮಾನ್ಯ ಗುಣಮಟ್ಟದ (ಎಫ್‌ಎಕ್ಯು) ಮಿಲ್ಲಿಂಗ್‌ ಕೊಪ್ರಾದ ಎಂಎಸ್‌ಪಿಯನ್ನು ಕ್ವಿಂಟಾಲ್‌ಗೆ ರೂ.9,960ರಿಂದ 10,335 ರೂ.ಗೆ ಹೆಚ್ಚಿಸಲಾಗಿದೆ. ಬಾಲ್‌ ಕೊಪ್ರಾ ಬೆಲೆ ಕ್ವಿಂಟಾಲ್‌ಗೆ ರೂ. 10,300ರಿಂದ ರೂ. 10,600ಕ್ಕೆ ಏರಿಕೆಯಾಗಿದೆ.

ಮಿಲ್ಲಿಂಗ್‌ ಕೊಪ್ರಾದ ಉತ್ಪಾದನಾ ವೆಚ್ಚಕ್ಕಿಂತಲೂ ಶೇ.52ರಷ್ಟು ಹಾಗೂ ಬಾಲ್‌ ಕೊಪ್ರಾ ಎಂಎಸ್‌ಪಿ ಶೇ.55ರಷ್ಟು ಎಂಎಸ್‌ಪಿ ಹೆಚ್ಚಳ ಮಾಡಲಾಗಿದೆ ಎಂದು ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ

Published On: 28 January 2021, 04:15 PM English Summary: Cabinet clears hike in msp for copra

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.