1. ಸುದ್ದಿಗಳು

ವಲಸೆ ಕಾರ್ಮಿಕರಿಗೆ ಸರ್ಕಾರದಿಂದ ಅಗ್ಗದ ಬಾಡಿಗೆ ಮನೆ

ನಗರ ಮತ್ತು ಪಟ್ಟಣಗಳಿಗೆ ವಲಸೆ ಬರುವ ಕಾರ್ಮಿಕರಿಗೆ ಮತ್ತು ಬಡವರಿಗೆ ಕೈಗೆಟಕುವ ದರದಲ್ಲಿ ಬಾಡಿಗೆ ವಸತಿ ಸೌಲಭ್ಯ ಒದಗಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ.

ಕೊರೋನಾ ಸಂಕಷ್ಟದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುವತ್ತಿರುವ ವಲಸಿಗರಿಗಾಗಿ ಈ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಅವಾಸ್ ಯೋಜನೆ ಅಡಿಯಲ್ಲಿ ಈ ಬಾಡಿಗೆ ವಸತಿ ಸಂಕೀರ್ಣಗಳನ್ನು (ಎ.ಆರ್.ಎಚ್.ಸಿ) ಒಟ್ಟು 600 ಕೋಟಿ ರೂಪಾಯಿ ವೆಚಚ್ದಲ್ಲಿ ನಿರ್ಮಸಲಾಗುತ್ತದೆ. ಕೊರೋನಾ ಲಾಕ್ಡೌನ್ ದಿಂದಾಗಿ ಹಳ್ಳಿಗಳಿಗೆ ಹೋಗಿದ್ದ ವಲಸೆ ಕಾರ್ಮಿಕರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ಮರಳಿ ಬರುವವವರಿಗೆ ಇದು ಅನುಕೂಲವಾಗುತ್ತದೆ. ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಆವಾಸ್‌ ಯೋಜನೆಯಡಿ, ನಗರ ಪ್ರದೇಶಗಳಲ್ಲಿನ ಬಡವರಿಗೆ ಅಫೋರ್ಡಬಲ್‌ ರೆಂಟಲ್‌ ಹೌಸಿಂಗ್‌ ಕಾಂಪ್ಲೆಕ್ಸಸ್‌ (ಎಎಚ್‌ಆರ್‌ಸಿ)  ಈ ಸೌಲಭ್ಯವನ್ನು ಜಾರಿಗೆ ತರಲು ಸರಕಾರದ ವತಿಯಿಂದ ನಿರ್ಮಾಣವಾಗಿರುವ ಮನೆಗಳನ್ನು ಎಎಚ್‌ಆರ್‌ಸಿ ಯೋಜನೆಗೆ ತಕ್ಕಂತೆ ಬದಲಾಯಿಸಲು ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಈ ಸೌಲಭ್ಯದ ಮೊದಲ ಹಂತದಲ್ಲಿ 3.5 ಲಕ್ಷ ಫ‌ಲಾನುಭವಿಗಳಿಗೆ ಮನೆಗಳು ಸಿಗಲಿವೆ.

ಕಾರ್ಮಿಕರು ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶಗಳಿಂದ ನಗರಪ್ರದೇಶಗಳಿಗೆ ಬರುವ ವಿದ್ಯಾರ್ಥಿಗಳಿಗೂ ಇದರ ಪ್ರಯೋಜನ ಸಿಗಲಿದೆ.

Published On: 09 July 2020, 04:21 PM English Summary: Cabinet approves rental housing scheme for migrants

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.