1. ಸುದ್ದಿಗಳು

Breaking : ಕಾಂಗ್ರೆಸ್‌ನ 5 ಗ್ಯಾರಂಟಿಗಳಿಗೆ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ..ಜಾರಿ ಯಾವಾಗ..?

Maltesh
Maltesh
Cabinet approves 5 guarantees of congress

ವಿಧಾನಸೌಧದಲ್ಲಿ ಇಂದು ನಡೆದ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ನೂತನ ಸಿಎಂ ಸಿದ್ದರಾಮಯ್ಯ ಅವರು, ಸಭೆಯ ನಂತರ ಸುದ್ದಿಗೋಷ್ಠಿ ಆಯೋಜಿಸಿ ಕಾಂಗ್ರೆಸ್‌ ನೀಡಿದ ಭರವಸೆಗಳಾದ 5 ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದು, ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ಸಿಕ್ಕಿದೆ ಎಂದಿದ್ದಾರೆ.

ಈ ಮೊದಲು ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಅವರು ಇಂದೇ ಕಾಂಗ್ರೆಸ್‌ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಘೋಷಣೆ ಮಾಡಿದ್ದರು. ಅದರ ಪ್ರಕಾರವೇ ಪ್ರಮಾಣ ವಚನದ ಬಳಿಕ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ ಸಿಎಂ, ಉಪ ಮುಖ್ಯಮಂತ್ರಿ, ಹಾಗೂ 8 ಜನ ನೂತನ ಸಚಿವರು ಸಂಪುಟ ಸಭೆ ನಡೆದಿಸಿದ್ದಾರೆ.

ಸುಮಾರು ಹೊತ್ತಿನ ಸಂಪುಟ ಸಭೆಯ ಬಳಿಕ ಅವರು ಸುದಿಗೋಷ್ಠಿ ಆಯೋಜಿಸಿ ಮಾತನಾಡಿದರು. ಈ ವೇಳೆ ತಮ್ಮ ಪ್ರಮಾಣ ವಚನಕ್ಕೆ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಅತಿಥಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇನ್ನು ಈ ವೇಳೆ ಬರೋಬ್ಬರಿ 8 ಸಚಿವರು ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ಇನ್ನು 5 ಗ್ಯಾರಂಟಿಗಳಿಗೆ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ದೊರೆತಿದ್ದು ಮುಂದಿನ ಕ್ಯಾಬಿನೆಟ್‌ ಸಭೆ ಬಳಿಕ ಅವನ್ನು ಜಾರಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇತ್ತ ಮಹಿಳೆಯರಿಗೆ ಫ್ರೀ ಬಸ್‌ ಕುರಿತು ಮಾಹಿತಿ ನೀಡಿದ ಅವರು ಈ ಸೌಲಭ್ಯ ಹೊರ ರಾಜ್ಯದ ಮಹಿಳೆಯರಿಗೆ ಅನ್ವಯವಾಗಲ್ಲ. ಮತ್ತು ಐಶಾರಾಮಿ ಬಸ್‌ಗಳಿಗೆ ಇದು ಅನ್ವಯವಾಗಲ್ಲ. ಇವುಗಳನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಬಹುದು ಎಂದಿದ್ದಾರೆ..

ಯವನಿಧಿ ಗ್ಯಾರಂಟಿ ಕುರಿತು ಮಾತನಾಡಿದ ಅವರು ಈ ವರ್ಷದಲ್ಲಿ ಪಾಸ್‌ ಆದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ 2 ವರ್ಷದವರೆಗೆ ಮಾತ್ರ ತಿಂಗಳಿಗೆ 3ಸಾವಿರ ರೂಪಾಯಿಯನ್ನು ನೀಡುವುದಾಗಿ ಹೇಳಿದ್ದಾರೆ. ಬಳಿಕ ತಿಂಗಳಿಗೆ 200 ಯುನಿಟ್‌ ವಿದ್ಯೂತ್‌ ಕುರಿತು ಪ್ರತಿಕ್ರಿಯಿಸಿದ ಅವರು ಅದನ್ನು ಕೂಡ ಸದ್ಯದಲ್ಲೇ ಜಾರಿಗೆ ತರಲಿದ್ದೇವೆ ಎಂದಿದ್ದಾರೆ.

Published On: 20 May 2023, 04:46 PM English Summary: Cabinet approves 5 guarantees of congress

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.