News

Karnataka state budget 2023-2024 ಸಿ.ಎಂ ಬೊಮ್ಮಾಯಿಯಿಂದ ಶುಕ್ರವಾರ ಬಜೆಟ್‌ ಮಂಡನೆ, ಗೃಹಿಣಿಯರಿಗೆ ಮಾಸಿಕ ಎರಡು ಸಾವಿರ ?

16 February, 2023 2:40 PM IST By: Hitesh
Budget presentation by CM Bommai, two thousand monthly for housewives?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ (ಫೆಬ್ರವರಿ 17ರಂದು) ರಾಜ್ಯದ 2023-24ನೇ ಸಾಲಿನ ಬಜೆಟ್‌ ಮಂಡನೆ ಮಾಡಲಿದ್ದಾರೆ.

ಇ-ಹರಾಜಿನಲ್ಲಿ 3.85 ಲಕ್ಷ ಮೆಟ್ರಿಕ್ ಟನ್ ಗೋಧಿ ಮಾರಾಟ: 901 ಕೋಟಿ ರೂ. ಆದಾಯ!

ರಾಜ್ಯದಲ್ಲಿ ಚುನಾವಣೆಯ ಹೊಸ್ತಿನಲ್ಲಿದೆ. ಹೀಗಾಗಿ, ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚು ಜನಪ್ರಿಯ ಹಾಗೂ ಜನರನ್ನು ಮೆಚ್ಚಿಸುವ ಕಸರತ್ತುಗಳನ್ನು ಒಳಗೊಂಡ ಬಜೆಟ್‌ ಮಂಡನೆ ಆಗುವ ಸಾಧ್ಯತೆಯೇ ಇದೆ. 

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡನೇ ಬಾರಿ ಕರ್ನಾಟಕ ಬಜೆಟ್ ಮಂಡಿಸಲಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವುದರಿಂದಾಗಿ ಬಜೆಟ್‌ನಲ್ಲಿ ಹಲವಾರು ಕೊಡುಗೆಯನ್ನು ಸರ್ಕಾರ ನೀಡುವ ನಿರೀಕ್ಷೆಯ ಇದೆ.  

Gold-Silver Price Today ಚಿನ್ನದ ದರದಲ್ಲಿ ಯಥಾಸ್ಥಿತಿ, ಬೆಳ್ಳಿ ಬೆಲೆಯಲ್ಲಿ ಇಳಿಕೆ! 

ಸರ್ಕಾರದ ಈ ಆಡಳಿತಾವಧಿಯ ಕೊನೆಯ ಬಜೆಟ್ ಇದಾಗಿದೆ. ಆದ್ದರಿಂದ ಜನರಿಗೆ ಬಜೆಟ್ ನಿರೀಕ್ಷೆ ಅಧಿಕವಾಗಿಯೇ ಇದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 17ರ ಶುಕ್ರವಾರ ಬೆಳಗ್ಗೆ ಬಜೆಟ್ ಮಂಡನೆ ಮಾಡಲಿದ್ದಾರೆ.  

ಬೆಳಿಗ್ಗೆ 9.45ಕ್ಕೆ ವಿಧಾನಸೌಧದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಇನ್ನು ಬಜೆಟ್ ಮಂಡನೆಗೂ ಮುನ್ನ ಸಾಮಾನ್ಯವಾಗಿ ನಡೆಯುವ ಸಭೆಗಳು ನಡೆಯಲಿದೆ. 

Market Price ತರಕಾರಿ, ಧಾನ್ಯಗಳ ಮಾರುಕಟ್ಟೆ ದರ ಗುರುವಾರ ಎಷ್ಟಿದೆ ಗೊತ್ತೆ ?

ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪ್ರದಾಯದಂತೆ ಸಚಿವ ಸಂಪುಟದ ಒಪ್ಪಿಗೆಯನ್ನು ಪಡೆಯಲಿದ್ದಾರೆ.

ನಂತರ ವಿಧಾನಸಭೆ ಕಲಾಪ ಆರಂಭವಾಗಲಿದ್ದು, 10.15ಕ್ಕೆ ಬಜೆಟ್ ಮಂಡನೆ ಆರಂಭ ಮಾಡಲಿದ್ದಾರೆ.

ವಿಧಾನಸಭೆ ಚುನಾವಣೆಗೂ ಮುನ್ನ ಬರುವ ಬಜೆಟ್ ಇದಾಗಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಚುನಾವಣೆ  ನಡೆಯಲಿದೆ.  

ಏಪ್ರಿಲ್ ಅಂತ್ಯ ಅಥವಾ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಬರುವ ಬಜೆಟ್ ಇದಾಗಿದೆ.

ಕರ್ನಾಟಕದಲ್ಲಿ 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಜೆಟ್‌ ಅಧಿವೇಶನವು ಫೆಬ್ರವರಿ 23ರ ತನಕ ನಡೆಯಲಿದೆ.

Petrol Price Today ದೇಶದಲ್ಲಿ ಪೆಟ್ರೋಲ್‌, ಡಿಸೇಲ್‌ ದರದಲ್ಲಿ ಇಳಿಕೆ! 

ಬಜೆಟ್ ಮೇಲೆ ನಡೆಯುವ ಎಲ್ಲ ಚರ್ಚೆಗೆ ಮುಖ್ಯಮಂತ್ರಿಗಳು ಅಧಿವೇಶನದ ಕೊನೆಯಲ್ಲಿ ಉತ್ತರ ನೀಡಲಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಮಾರು 1 ಗಂಟೆಗಳ ಕಾಲ ಬಜೆಟ್ ಮಂಡಿಸಲಿದ್ದಾರೆ.

ಫೆಬ್ರವರಿ 20 ರಿಂದ 22ರ ತನಕ ಬಜೆಟ್ ಮೇಲೆ ಚರ್ಚೆ ನಡೆಯಲಿದೆ.  

2022-23ನೇ ಸಾಲಿನ ರಾಜ್ಯ ಬಜೆಟ್ ಗಾತ್ರ 2 ಲಕ್ಷದ 66 ಸಾವಿರ ಕೋಟಿ ರೂಪಾಯಿ ಆಗಿದ್ದು,

ಈ ಬಾರಿಯ ಅಂದರೆ 2023-24ನೇ ಸಾಲಿನ ಕರ್ನಾಟಕ ಬಜೆಟ್‌ 3 ಲಕ್ಷ ಕೋಟಿ ರೂಪಾಯಿಗಳ ಗಡಿ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.   

ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳ ಆದಾಯ ಸಂಗ್ರಹವು ಆರೋಗ್ಯಕರವಾಗಿದೆ.

ಅಲ್ಲದೇ ಕಳೆದ ಹಾಗೂ ಪ್ರಸಕ್ತ ತ್ರೈ ಮಾಸಿಕದಲ್ಲಿ ತೆರಿಗೆ ಹಾಗೂ ಆದಾಯ ಸಂಗ್ರಹವು ರಾಜ್ಯಕ್ಕೆ ಉತ್ತಮ ಮಟ್ಟದಲ್ಲಿ ಲಭ್ಯವಾಗಿದೆ.

ಹೀಗಾಗಿ, ಈ ಬಾರಿಯ ಬಜೆಟ್‌ಸ ಸುಗಮವಾಗಿ ಮಂಡನೆಯಾಗುವ ಬಹಳಷ್ಟು ಸಾಧ್ಯತೆಗಳಿವೆ.

ರಾಜ್ಯ ಸರ್ಕಾರಕ್ಕೆ ಬೊಕ್ಕಸದಲ್ಲಿ ಅಂದಾಜಿಗಿಂತಲೂ ಹೆಚ್ಚಿನ ಹಣದೊಂದಿಗೆ ಆರ್ಥಿಕ ವರ್ಷವನ್ನು

ಅಂತ್ಯಗೊಳಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ (ಫೆ 17)

ಮಂಡಿಸಲಿರುವ 2023-24ನೇ ಸಾಲಿನ ರಾಜ್ಯ ಬಜೆಟ್‌ ಗಾತ್ರವು 3 ಲಕ್ಷ ಕೋಟಿ ರೂ.ಗಳ ಗಡಿ ಮುಟ್ಟುವ ಸಾಧ್ಯತೆ ಇದೆ.

ಹೆಚ್ಚಿದ ಬಜೆಟ್‌ನ ನಿರೀಕ್ಷೆಗಳು ಸಾಮಾನ್ಯವಾಗಿ ಹಿಂದಿನ ಬಜೆಟ್ ಗಾತ್ರಗಳನ್ನು ಕನಿಷ್ಠ 10%-15% ರಷ್ಟು ಮೀರಿದ ವಾರ್ಷಿಕ ವೆಚ್ಚಗಳೊಂದಿಗೆ ಕೂಡಿರುತ್ತದೆ.  

ಈ ಬಜೆಟ್‌ನಲ್ಲಿನ ಹೆಚ್ಚಳವು ಎರಡು ಕಾರಣಗಳಿಗಾಗಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ:

ಒಂದು, ಇದು ಮಾನಸಿಕ ರೂ 3-ಲಕ್ಷಕೋಟಿ ಮಾರ್ಕ್ ಅನ್ನು ಉಲ್ಲಂಘಿಸುತ್ತದೆ ಮತ್ತು ಎರಡನೆಯದು ಒಂದು ವರ್ಷದ ಚೇತರಿಕೆಯ ನಂತರ ಬರುತ್ತದೆ.

ರೈತರಿಗೆ ಸಿಹಿಸುದ್ದಿ: ದೇಶದ ಪಂಚಾಯ್ತಿಗಳಲ್ಲಿ ಪ್ರಾಥಮಿಕ ಕೃಷಿ ಸಾಲ ಸಂಘ; ಕೇಂದ್ರ ಸರ್ಕಾರ ಸಮ್ಮತಿ

Budget presentation by CM Bommai, two thousand monthly for housewives?

ನಿರೀಕ್ಷೆಗೂ ಮೀರಿದ ಆದಾಯ

ರಾಜ್ಯ ಸರ್ಕಾರವು ಈ ಬಾರಿ ಉತ್ತಮ ಆದಾಯವನ್ನು ಗಳಿಸುತ್ತಿದೆ. ಈ ಬಾರಿಯ ರಾಜ್ಯದ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿದೆ.

ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ನಿರೀಕ್ಷೆಗೂ ಮೀರಿದ ಆದಾಯ ಬಂದಿದೆ.

ಅವುಗಳಲ್ಲಿ ಪ್ರಮುಖವಾಗಿ

* ಸಾರಿಗೆ (ಮೋಟಾರು ವಾಹನ ತೆರಿಗೆ)  

* ಅಬಕಾರಿ ಮತ್ತು ವಾಣಿಜ್ಯ ತೆರಿಗೆಗಳು  

* ಅಂಚೆಚೀಟಿಗಳು ಮತ್ತು ನೋಂದಣಿ ಇಲಾಖೆಗಳು

ಸೇರಿದಂತೆ ಎಲ್ಲಾ ಪ್ರಮುಖ ಆದಾಯದ ಮೂಲಗಳು ನಿರೀಕ್ಷೆಗೂ ಮೀರಿ ಆದಾಯವು ವಾರ್ಷಿಕ ಸಂಗ್ರಹಣೆ ಗುರಿಗಳನ್ನು ಮೀರುತ್ತದೆ.

ಯಾವುದೇ ತಕ್ಷಣದ ಅಂದಾಜು ಲಭ್ಯವಿಲ್ಲದ ತೆರಿಗೆಯೇತರ ಆದಾಯ ಸಂಗ್ರಹವು 10,441 ಕೋಟಿ ರೂ. ಗುರಿಯನ್ನು ಮೀರುವ ಸಾಧ್ಯತೆಯೂ ಇದೆ.   

15ನೇ ಹಣಕಾಸು ಆಯೋಗವು ರಾಜ್ಯದ ಪಾಲನ್ನು ಹಿಂದಿನ 4. 7% ರಿಂದ 3. 6% ಕ್ಕೆ ಇಳಿಸಲು ಶಿಫಾರಸು ಮಾಡದಿದ್ದರೆ ಕೇಂದ್ರ ಪೂಲ್‌ನಿಂದ ಕರ್ನಾಟಕದ ಪಾಲು ಹೆಚ್ಚಾಗುತ್ತಿತ್ತು ಎಂದು ಅಂದಾಜಿಸಲಾಗಿದೆ.

ಎಂದು ತಜ್ಞರು ಹೇಳುತ್ತಾರೆ. ಅದೇ ರೀತಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಂಎನ್‌ಆರ್‌ಇಜಿಎ

ಸೇರಿದಂತೆ ಹಲವಾರು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹಂಚಿಕೆಯನ್ನು ಕಡಿಮೆ ಮಾಡಿರುವುದರಿಂದ ಮುಂಬರುವ ವರ್ಷಕ್ಕೆ ಅನುದಾನ-ಸಹಾಯವು ಸಹ ಪರಿಣಾಮ ಬೀರುತ್ತದೆ ಎನ್ನಲಾಗಿದೆ.  

ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಡ್ಡಿರಹಿತ ಸಾಲದ ಅವಧಿಯನ್ನು ವಿಸ್ತರಿಸುವುದರೊಂದಿಗೆ, ಕರ್ನಾಟಕಕ್ಕೆ ಹೆಚ್ಚುವರಿ ಹಣದ ಪ್ರವೇಶವನ್ನು ಸಹ ಹೊಂದಿದೆ.

ಇದರಲ್ಲಿ ಶೇಕಡವಾರು ಬಂಡವಾಳ ವೆಚ್ಚಕ್ಕೆ ಹೋಗಬೇಕೆಂದು ಕೇಂದ್ರವು ಕಡ್ಡಾಯಗೊಳಿಸುವುದು ರಾಜ್ಯ ಬಜೆಟ್‌ನಲ್ಲಿ ಉತ್ಪಾದನಾ ವೆಚ್ಚವನ್ನು ಹೆಚ್ಚಿಸುತ್ತದೆ.

ಒಟ್ಟಾರೆ ಈ ಬಾರಿಯ ಬಜೆಟ್‌ ಹಲವು ಸವಾಲು ಹಾಗೂ ನಿರೀಕ್ಷೆಗಳನ್ನು ಮೂಡಿಸಿದೆ. ಅಷ್ಟೇ ಅಲ್ಲದೇ ಆಡಳಿತರೂಢ

ಬಿಜೆಪಿಗೆ ಈ ಬಾರಿಯ ಬಜೆಟ್‌ ಪ್ರತಿಷ್ಠೆ ಹಾಗೂ ಸವಾಲಿನದ್ದೂ ಆಗಿರಲಿದೆ.  

ಗೃಹಿಣಿರಿಗೆ ಮಾಸಿಕ 2000 ಸಾವಿರ ರೂಪಾಯಿ ಹಾಗೂ ಸ್ತ್ರೀ ಶಕ್ತಿ ಸಂಘಗಗಳಿಗೆ 2 ಲಕ್ಷ ರೂಪಾಯಿ ನೀಡುವುದು

ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿ ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೆ ಆರ್ಥಿಕ ನೆರವು ನೀಡುವುದಾಗಿ ಹೇಳಿದ ಬೆನ್ನಲ್ಲೇ ಮುಖ್ಯಮಂತ್ರಿ

ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಆರ್ಥಿಕ ನೆರವು ನೀಡುವುದಾಗಿ ಹೇಳಿದ್ದರು. 

ಭಾರತೀಯ ಕ್ರಿಕೆಟ್‌ ತಂಡದಲ್ಲಿ ಉಳಿದುಕೊಳ್ಳಲು ನಿಷೇಧಿತ ಚುಚ್ಚುಮದ್ದು ಬಳಕೆ, ಗ್ರೂಪಿಸಂ ಸ್ಟಿಂಗ್‌ ಆಪರೇಷನ್‌ನಲ್ಲಿ ಬಹಿರಂಗವಾದ ಸತ್ಯ !