1. ಸುದ್ದಿಗಳು

ಬ್ರೇಕಿಂಗ್‌: ರಾಜ್ಯದ ಜನತೆಗೆ ಕರೆಂಟ್‌ ಶಾಕ್‌: ಜುಲೈ 1ರಿಂದ ವಿದ್ಯುತ್‌ ದರ ಏರಿಕೆ!

Kalmesh T
Kalmesh T
ಜುಲೈ 1ರಿಂದ ವಿದ್ಯುತ್‌ ದರದಲ್ಲಿ ಏರಿಕೆ

ದಿನಬಳಕೆ ವಸ್ತುಗಳು, ಪೆಟ್ರೊಲ್‌-ಡಿಸೆಲ್‌, ಗ್ಯಾಸ್‌ ಸಿಲಿಂಡರ್‌ ಹೀಗೆ ಒಂದರ ಹಿಂದೆ ಒಂದರ ಬೆಲೆ ಏರುತ್ತಲೆ ಇದೆ. ಈಗ ವಿದ್ಯುತ್‌ನ ಸರದಿ. ಹೌದು ಜುಲೈ 1ರಿಂದ ವಿದ್ಯುತ್‌ ದರದಲ್ಲೂ ಏರಿಕೆಯಾಗಲಿದೆ.

ಇದನ್ನೂ ಓದಿರಿ: ಗುಡುಗು-ಬಿರುಗಾಳಿ ಸಮೇತ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಸೂಚನೆ!

ಬೆಲೆ ಏರಿಕೆ ಬಿಸಿ ನಡುವೆ ರಾಜ್ಯ ಸರ್ಕಾರ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್ ನೀಡಿದೆ. ಜುಲೈ 1 ರಿಂದ ವಿದ್ಯುತ್ ದರ 19 ರೂಪಾಯಿಯಿಂದ 31 ರವರೆಗೆ ಹೆಚ್ಚಾಗಲಿದೆ.

ಪ್ರತಿ ತಿಂಗಳು 100 ಯೂನಿಟ್ ಬಳಸುವ ಗ್ರಾಹಕರು, ಇನ್ಮುಂದೆ ಹೆಚ್ಚುವರಿಯಾಗಿ 19 ರೂಪಾಯಿಂದ 31 ರೂಪಾಯಿ ಪಾವತಿಸಬೇಕು.

ಕಳೆದ 2 ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವ ಹಿನ್ನೆಲೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (KERC) ಎಸ್ಕಾಂಗಳು (ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಗೆಸ್ಕಾಂ, ಸೆಸ್ಕ್ ನಿಂದ ಪ್ರಸ್ತಾವ ಸಲ್ಲಿಸಲು ಅನುಮೋದಿಸಲಾಗಿತ್ತು.

ಗುಡ್‌ನ್ಯೂಸ್‌: 5 ಲಕ್ಷ ರೈತರಿಗೆ ₹749 ಕೋಟಿ ಬೆಳೆ ವಿಮೆ ಇತ್ಯರ್ಥ..!

ಎಸ್ಕಾಂಗಳು ಎಷ್ಟು ದರ ಹೆಚ್ಚಳಕ್ಕೆ ಪ್ರಸಾವ ಸಲ್ಲಿಸಿತ್ತು?

* ಪ್ರತಿ ಯೂನಿಟ್‍ಗೆ 38 ರಿಂದ 55 ರೂ. ವಸೂಲಿ ಮಾಡಲು ಎಸ್ಕಾಂಗಳು ಕೋರಿದ್ದವು

* ಬೆಸ್ಕಾಂ – 55.28

* ಮೆಸ್ಕಾಂ – 38.98

* ಸೆಸ್ಕ್ – 40.47

* ಹೆಸ್ಕಾಂ – 49.54

* ಗೆಸ್ಕಾಂ – 39.36 ಹೆಚ್ಚಿಸಲು ನಿರ್ಧರಿಸಿದ್ದವು

ರೈತರ ಜೀವನಾಡಿ ಎತ್ತುಗಳನ್ನು ಪೂಜಿಸುವ ಹಬ್ಬ “ಮಣ್ಣೆತ್ತಿನ ಅಮವಾಸೆ”; ಏನಿದರ ವಿಶೇಷತೆ ಗೊತ್ತೆ?

ವಿದ್ಯುತ್ ದರ ಹೆಚ್ಚಳಕ್ಕೆ ಕಾರಣ ಏನು?

* ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯ ವೆಚ್ಚ ಹೆಚ್ಚಾಗಿದೆ

* ಕಲ್ಲಿದ್ದಲು, ಅಭಾವ ಹಾಗೂ ದರ ಹೆಚ್ಚಳವಾಗಿದೆ

* ಆರ್ಥಿಕವಾಗಿ ನಷ್ಟದಲ್ಲಿರುವ ಎಸ್ಕಾಂಗಳು. ತಾತ್ಕಲಿಕ ಮಟ್ಟಕ್ಕೆ ದರ ಹೆಚ್ಚು ಮಾಡಲಾಗಿದೆ

Published On: 29 June 2022, 10:02 AM English Summary: Breaking: Current shock for the people of the state

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.