1. ಸುದ್ದಿಗಳು

'ಎಂ ಎಸ್ ಧೋನಿ' ಚಿತ್ರದ ಹೀರೋ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ!

ಚಿಚೋರಾ ಮೂವಿ ಮೂಲಕ ಮಾನಸಿಕ ಒತ್ತಡದಿಂದ ಹೇಗೆ ಬರಬೇಕೆಂದು ತಿಳಿಸಿದ, ಎಂ.ಎಸ್. ಧೋನಿ ದಿ ಅನ್‌ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ನಾಯಕನಾಗಿ ಮಿಂಚಿದ್ದ ಬಾಲಿವುಡ್ ನ ಪ್ರತಿಭಾನ್ವಿತ ಯುವ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಮುಂಬೈ ನಿವಾಸದಲ್ಲಿ ತಾನೇ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

34 ವರ್ಷದ ಸುಶಾಂತ್ ಸಿಂಗ್ ಅವರು ತನ್ನ ಮುಂಬೈ ನಿವಾಸದಲ್ಲಿ ವಾಸವಾಗಿದ್ದರು. ಲಾಕ್ ಡೌನ್ ಸಮಯದಲ್ಲಿ ಇಲ್ಲಿ ಒಬ್ಬಂಟಿಯಾಗಿದ್ದರು ಎನ್ನಲಾಗಿದೆ. ನಾಲ್ಕು ದಿನಗಳ ಹಿಂದಷ್ಟೇ ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಸುಶಾಂತ್ ಬಹಳ ಬೇಸರಗೊಂಡಿದ್ದರು ಎನ್ನಲಾಗಿದೆ.

 ಪವಿತ್ರ ರಿಷ್ತಾದಿಂದ ಆರಂಭವಾದ ಪಯಣ

1986 ಜನವರಿ 21ರಂದು ಬಿಹಾರ್ ರಾಜ್ಯದ ಪಾಟ್ನಾದಲ್ಲಿ ಸುಶಾಂತ್ ಜನಿಸಿದ್ದರು. ಸ್ಟಾರ್ ಪ್ಲಸ್ ನಲ್ಲಿ ಕಿಸ್ ದೇಶ್ ಮೇ ಹೈ ಮೇರಾ ದಿಲ್ (2008 ರಲ್ಲಿ ಕಿರುತೆರೆಗೆ ಕಾಲಿಟ್ಟಿದ್ದರೂ ಜೀ ಟಿವಿಯಲ್ಲಿ ಪ್ರಸಾರವಾಗಿದ್ದಾ ಪವಿತ್ರ ರಿಷ್ತಾ ಎಂಬ ಧಾರವಾಹಿಯಲ್ಲಿ ಮಾನಮ್ ದೇಶಮುಖ್ ಎಂಬ ಪಾತ್ರ ಗಮನ ಸೆಳೆದಿತ್ತು .

 2014ರ ದೊಡ್ಡ ಹಿಟ್ ಚಿತ್ರ ಪಿಕೆ’’ ಯಲ್ಲಿ ಸರ್ಫರಾಜ್ ಆಗಿ ಕಾಣಿಸಿಕೊಂಡಿದ್ದ ಸುಶಾಂತ್ ಗೆ ನಂತರ ದೊಡ್ಡ ಗೆಲುವು ತಂದು ಕೊಟ್ಟಿದ್ದು ಕ್ರಿಕೆಟಿಗ ಮಹೇಂದ್ರ ಸಿಂಗ್ ಜೀವನಾಧಾರಿತ ಚಿತ್ರ ‘ಎಂ ಎಸ್ ಧೋನಿ, ದಿ ಅನ್ ಟೋಲ್ಡ್ ಸ್ಟೋರಿ’ಚಿತ್ರ.

ಡಿಪ್ರೆಶನ್‌ನಲ್ಲಿದ್ದ ಸುಶಾಂತ್ ಸಿಂಗ್ ರಜಪೂತ್

ಸುಶಾಂತ್ ಸಿಂಗ್ ಕೂಡ ಡಿಪ್ರೆಶನ್‌ನಲ್ಲಿದ್ದರು. ಅದರ ಜೊತೆಗೆ 2012ರಲ್ಲಿ ತೀರಿಕೊಂಡ ತಾಯಿ ಬಗ್ಗೆ ಸುಶಾಂತ್ ಬೇಸರದಲ್ಲಿ, ಭಾವನಾತ್ಮಕವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಕೊನೆಯದಾಗಿ ಅವರು ಬರೆದುಕೊಂಡಿದ್ದರು. ಸುಶಾಂತ್ ಅವರು ಸೂಸೈಡ್ ನೋಟ್ ಬರೆದಿಲ್ಲ. ಸುಶಾಂತ್ ಸಿಂಗ್ ಸಾವಿಗೆ ನಿಜವಾದ ಕಾರಣ ಏನು ಎಂಬುದು ತಿಳಿಯುತ್ತಿಲ್ಲ. ಸುಶಾಂತ್ ಮನೆಯವರಾರೂ ಸಿನಿಮಾ ರಂಗದ ನಂಟು ಹೊಂದಿರಲಿಲ್ಲ.

ನಟಿಸಿದ್ದ ಸಿನೇಮಾಗಳು

ಕೈ ಪೋ ಚೇ, ಶುದ್ ದೇಸಿ ರೋಮ್ಯಾನ್ಸ್, ಡಿಟೆಕ್ಟಿವ್ ಬ್ಯೋಮಕೇಶ್, ಭಕ್ಷಿ, ಪಿಕೆ, ಎಂ.ಎಸ್. ಧೋನಿ ದಿ ಅನ್‌ಟೋಲ್ಡ್ ಸ್ಟೋರಿ, ರಾಬ್ರಾ, ವೆಲ್ಕಂ ಟ ನ್ಯೂಯಾರ್ಕ್, ಕೇದಾರ್‌ನಾಥ್', ಸೋನ್ಟಿರಿಯಾ, ಚಿಚೋರೆ, ಡ್ರೈವ್,

Published On: 15 June 2020, 01:17 PM English Summary: Bollywood Actor Sushant singh rajput commits suicide

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.