1. ಸುದ್ದಿಗಳು

ರೇಷನ್‌ ಕಾರ್ಡ್‌ ಹೊಂದಿರುವವರಿಗೆ ಕಹಿ ಸುದ್ದಿ; ರದ್ದಾಗಲಿದೆ ನಿಮ್ಮ ಪಡಿತರ ಚೀಟಿ! ಯಾಕೆ ಗೊತ್ತೆ?

Kalmesh T
Kalmesh T
Bitter news for ration card holders

ಉಚಿತ ಪಡಿತರ ಯೋಜನೆಯಲ್ಲಿ ಅನೇಕ ಅನರ್ಹರು ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ದೊಡ್ಡ ಹೆಜ್ಜೆ ಇಟ್ಟಿದೆ. ಈ ಕುರಿತು ಇಲ್ಲಿದೆ ಮಾಹಿತಿ

ಇದನ್ನೂ ಓದಿರಿ: 7ನೇ ವೇತನ ಆಯೋಗ: 48 ಲಕ್ಷ ನೌಕರರಿಗೆ ದೀಪಾವಳಿ ನಿಮಿತ್ತ ಇಲ್ಲಿದೆ ಸಿಹಿಸುದ್ದಿ!

ದೇಶದಾದ್ಯಂತ ಉಚಿತ ಪಡಿತರ ಸೌಲಭ್ಯವನ್ನು ನೀಡಲಾಗುತ್ತಿದ್ದು, ಈ ಯೋಜನೆಯನ್ನು ಮುಂದಿನ 6 ತಿಂಗಳವರೆಗೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ.

ಈ ಉಚಿತ ಪಡಿತರ ಯೋಜನೆಯಲ್ಲಿ ಅನೇಕ ಅನರ್ಹರು ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಈಗ ಮಹತ್ತರ ಕೆಲಸಕ್ಕೆ ಮುಂದಾಗಿದೆ.

ರದ್ದಾಗಲಿವೆ ಹಲವು ಪಡಿತರ ಚೀಟಿಗಳು

ಪಡಿತರ ಚೀಟಿ ರದ್ದುಗೊಳಿಸಲು ಕೇಂದ್ರ ಸರ್ಕಾರ ಕೆಲವು ನಿಯಮಗಳನ್ನು ಮಾಡಿದೆ. ಈ ನಿಯಮಗಳ ಪ್ರಕಾರ ನಿಮ್ಮ ಪಡಿತರ ಚೀಟಿ ಇರದೆ ಇದ್ದರೆ, ನಿಮ್ಮ ಪಡಿತರ ಚೀಟಿಯನ್ನು ಸಹ ರದ್ದುಗೊಳಿಸಲಾಗುತ್ತದೆ.

11 ಕೋಟಿಗೂ ಹೆಚ್ಚು ರೈತರ ಖಾತೆಗೆ ಈ ದಿನ ಬರಲಿದೆ ಪಿಎಂ ಕಿಸಾನ್‌ 12ನೇ ಕಂತಿನ ಹಣ!

ಈ ಕಾರಣಕ್ಕಾಗಿ ಸರ್ಕಾರವು ಅಂತಹವರಿಗೆ ಮನವಿಯನ್ನು ಮಾಡಿಕೊಳ್ಳುತ್ತಿದೆ. ಯಾರಾದರೂ ಉಚಿತ ಪಡಿತರ ಪಡೆಯಲು ಅನರ್ಹರಾಗಿದ್ದೂ ಕಾರ್ಡ್‌ ಪಡೆದುಕೊಂಡಿದ್ದರೆ ಅವರು ತಮ್ಮ ಪಡಿತರ ಚೀಟಿಯನ್ನು ತಾವಾಗಿಯೇ ರದ್ದುಗೊಳಿಸಬೇಕು.

ಒಂದು ವೇಳೆ ನೀವಾಗಿಯೇ ನಿಮ್ಮ ಪಡಿತರ ಚೀಟಿಯನ್ನು ರದ್ದುಗೊಳಿಸದಿದ್ದರೆ, ಪರಿಶೀಲನೆಯ ನಂತರ ಆಹಾರ ಇಲಾಖೆಯ ತಂಡವು ಅದನ್ನು ರದ್ದುಗೊಳಿಸುತ್ತದೆ. ಅಂತಹವರ ವಿರುದ್ಧವೂ ಕಾನೂನಿನ ಪ್ರಕಾರ ಕ್ರಮವನ್ನು ಕೈಗೊಳ್ಳಲಾಗುತ್ತದೆ.

Recruitment: ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ನೇಮಕಾತಿ, 42,000 ಸಂಬಳ!

ಅನರ್ಹರು ಎಂದು ಯಾವ ಆಧಾರದ ಮೇಲೆ ಗುರುತಿಸಲಾಗುತ್ತದೆ

ನಿಮ್ಮ ಸ್ವಂತ ಆದಾಯದಿಂದ ಗಳಿಸಿದ 100 ಚದರ ಮೀಟರ್ ವಿಸ್ತೀರ್ಣದ ಪ್ಲಾಟ್, ಫ್ಲಾಟ್ ಅಥವಾ ಮನೆ, ನಾಲ್ಕು ಚಕ್ರ ವಾಹನ, ಟ್ರ್ಯಾಕ್ಟರ್, ಶಸ್ತ್ರಾಸ್ತ್ರ ಪರವಾನಗಿ, ಗ್ರಾಮದಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಕುಟುಂಬದ ಆದಾಯ ಮತ್ತು ನಗರದಲ್ಲಿ ವಾರ್ಷಿಕ ಮೂರು ಲಕ್ಷ ಇದ್ದರೆ, ಇಂತಹ ಜನರು ತಹಶೀಲ್ದಾರ್ ಕಚೇರಿಯಲ್ಲಿ ತಮ್ಮ ಪಡಿತರ ಚೀಟಿಯನ್ನು ಒಪ್ಪಿಸಬೇಕು. ಇಲ್ಲವಾದರೆ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಉಚಿತ ಪಡಿತರ ಸೌಲಭ್ಯದಲ್ಲಿ ಹೆಚ್ಚಳ ಸಾಧ್ಯತೆ!

ವರದಿಗಳ ಪ್ರಕಾರ ಸರ್ಕಾರವು ಬಡವರಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡುತ್ತಿದೆ ಮತ್ತು ಸರ್ಕಾರವು ಮುಂದಿನ 3 ರಿಂದ 6 ತಿಂಗಳವರೆಗೆ ಅದನ್ನು ವಿಸ್ತರಿಸಬಹುದು ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.

Published On: 27 September 2022, 11:00 AM English Summary: Bitter news for ration card holders

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.