1. ಸುದ್ದಿಗಳು

ಸಗಣಿನೂ ಎತ್ತುತ್ತೀನಿ; ಶೋಕಿಯನ್ನೂ ಮಾಡ್ತೀನಿ ಎಂದ ರೈತ ಬಿಗ್‌ಬಾಸ್‌ನಲ್ಲಿ!

Hitesh
Hitesh
ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ (Bigg Boss Kannada) ಬಿಗ್‌ಬಾಸ್‌ ಕನ್ನಡದಲ್ಲಿ ಒಬ್ಬರು ರೈತರೂ ಇದ್ದಾರೆ.

ಹೌದು ಸಗಣಿಯನ್ನೂ ಎತ್ತುತ್ತೀನಿ; ಶೋಕಿಯನ್ನೂ ಮಾಡ್ತೀನಿ ಎಂದು ಹೇಳಿ ಜನರಿಂದ ಮೆಚ್ಚುಗೆ ಗಳಿಸಿದ್ದ (ಹಳ್ಳಿಕಾರ್‌ (Hallikar breed)

ತಳಿಯ ಜಾನುವಾರು ಸಾಕಾಣಿಕೆ ಮೂಲಕ ಜನಪ್ರಿಯತೆ ಪಡೆದಿರುವ ವರ್ತೂರು ಸಂತೋಷ್‌)

(Varthur Santhosh has gained popularity through the rearing of Hallikar breed of cattle)

ವರ್ತೂರು (Varthur Santhosh) ಸಂತೋಷ್ ಸಹ ಈ ಬಾರಿ ಬಿಗ್‌ಬಾಸ್‌ನಲ್ಲಿ ಇದ್ದಾರೆ. 

ವರ್ತೂರಿನಲ್ಲಿ ವ್ಯವಸಾಯ ಮಾಡಿಕೊಂಡಿರುವ ಸಂತೋಷ್‌, ‘ರೈತ ಅಂದರೆ ಸಗಣಿಯನ್ನೇ ಎತ್ತಬೇಕು

ಎಂದೇನಿಲ್ಲ; ಶೋಕಿನೂ ಮಾಡಬಹುದು’ ಎಂದು ಹೇಳಿದ್ದು ಸೋಷಿಯಲ್‌ ಮೀಡಿಯಾಗಳಲ್ಲಿ ಸಖತ್‌ ವೈರಲ್‌ ಆಗಿತ್ತು.  

ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ (Varthur Santhosh)  ಸಂತೋಷ್, ‘ತಂದೆಯ ದುಡ್ಡಿನಲ್ಲಿ ಬದುಕುತ್ತಾನೆ’

ಎಂಬ ಮಾತುಗಳನ್ನೂ ಕೇಳಬೇಕಾಯ್ತು. ಅದನ್ನೇ ಸವಾಲಾಗಿ ಸ್ವೀಕರಿಸಿ ತಂದೆ ಕೊಟ್ಟಿದ್ದನ್ನು ಒಂದಕ್ಕೆ ಹತ್ತು ಪಟ್ಟಾಗಿ ಬೆಳೆಸಿದ್ದಾರೆ 

ಎಂದು ಸಾಮಾಜಿಕ ಜಾಲತಾಣದಲ್ಲಿ Chigo Ramesh ಎಂಬವರು ಬರೆದುಕೊಂಡಿದ್ದಾರೆ.   

Pradeep Eshwar ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಪ್ರದೀಪ್‌ ಈಶ್ವರ್‌: ಹೇಳಿದ್ದೇನು ಇಲ್ಲಿದೆ!

ಹಳ್ಳಿಕಾರ್ Hallikar breed ತಳಿಯ ಎತ್ತುಗಳನ್ನು ಪ್ರೀತಿಯಿಂದ ಸಾಕಿ ಬೆಳೆಸುತ್ತಿದ್ದರೆ.

ಅವುಗಳಿಗೂ ಬೆಳ್ಳಿ ಚೈನು, ಕಾಲ ಕಡಗ ಮಾಡಿಸಿರುವ ಸಂತೋಷ್‌, ಎತ್ತುಗಳ ಓಟದ ಸ್ಪರ್ಧೆಯಲ್ಲಿಯೂ ಖ್ಯಾತರಾಗಿದ್ದಾರೆ.  

ಇರುವವರೆಗೂ ಬದುಕನ್ನು ಆನಂದಿಸಿ. ಯಾರಿಗೂ ಮೋಸ ಮಾಡಬೇಡಿ’ ಎನ್ನುವುದನ್ನು ತಮ್ಮ

ಬದುಕಿನ ಸಿದ್ಧಾಂತವಾಗಿಸಿಕೊಂಡಿರುವ ಅವರಿಗೆ ಜನರು 78% ವೋಟ್ ಹಾಕಿ ಹೋಲ್ಡ್‌ನಲ್ಲಿಟ್ಟಿದ್ದರು.

ಇದೀಗ ಬಿಗ್‌ಬಾಸ್‌ನಲ್ಲಿ ಅವರು ಇದ್ದಾರೆ.

ದೇಸಿ ತಳಿಯ ಹಸುಗಳ ಬಗ್ಗೆ ಜನರಲ್ಲಿ ಬಿಗ್‌ಬಾಸ್ ಮನೆಯ ಮೂಲಕ ಅರಿವು ಮೂಡಿಸುವ

ಸಂತೋಷ್ ಕನಸು ನನಸಾಗುತ್ತದೆಯೇ? ನೋಡಬೇಕು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.  

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಬಿಗ್‌ಬಾಸ್‌ಗೆ: ಮೂರು ತಿಂಗಳು ಇರ್ತಾರಾ ? 

Published On: 17 October 2023, 10:21 AM English Summary: Bigg Boss Contestant Says I Pick Up Dung And Do Shoki!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.