1. ಸುದ್ದಿಗಳು

ಭಾರತ ಸೇನೆಗೆ ದೊಡ್ಡ ಆಘಾತ! ಚೀಫ್ ಓಫ್ ಡಿಫೆನ್ಸ್ ಸ್ಟಾಫ್, ಇನ್ನಿಲ್ಲ!

Ashok Jotawar
Ashok Jotawar
Plain crashed in Nilgiri hills

08 /12 /2021 ರಂದು ಸುಮಾರು ಮಧ್ಯಾಹ್ನದ ವೇಳೆಗೆ M.I - 175  V 5  (ರಶಿಯಾ ತಯಾರಿತ) ಯುದ್ಧ ಹೆಲಿಕ್ಯಾಪ್ಟರ್. ಸುಲೂರ್ ವಾಯು ಪಡೆಯ ನಿಲುವಿನಿಂದ, ಕೋಯಿಂಬತ್ತೂರ್ ನ' ವೆಲ್ಲಿಂಗ್ಟನ್ ನೀಲ್ಗಿರಿ ಬೆಟ್ಟಕ್ಕೆ ಹೋಗುವಾಗ  ಈ ಒಂದು ಯುದ್ಧ ದ ಹೆಲಿಕ್ಯಾಪ್ಟರ್ ರಸ್ತೆಯಲ್ಲಿಯೇ ಅಪಘಾತಕ್ಕೊಳಗಾಯಿತು.

ಹೆಲಿಕ್ಯಾಪ್ಟರ್ ನಲ್ಲಿದ್ದ 13 ಜನರು ಸಾವನ್ನೊಪಿದ್ದಾರೆ. ಇದರಲ್ಲಿ ಮುಖ್ಯ ವಾಗಿ ಸೇನೆಯ ಮುಖ್ಯ ವ್ಯಕ್ತಿ ಯಾದ ಚೀಫ್ ಓಫ್ ಡಿಫೆನ್ಸ್ ಸ್ಟಾಫ್. ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ರವರು ಕೂಡ ಇದ್ದರು. ಜನರಲ್ ಬಿಪಿನ್ ರಾವತ್ (63) ಇವರು ಭಾರತದ ಪ್ರಥಮ ಚೀಫ್ ಓಫ್  ಡಿಫೆನ್ಸ್ ಸ್ಟಾಫ್ ಆಗಿ 2019 ರಲ್ಲಿ ನಿಯುಕ್ತರಾದರು ಈ ಒಂದು ಹುದ್ದೆ ಮುಂದಿನ ದಿನಗಳಲ್ಲಿ ಭಾರತದ 3 ಸೇನೆಪಡೆಯನ್ನು  ಒಟ್ಟುಗೂಡಿಸುವ ಉದ್ದೇಶದಿಂದ ಜಾರಿಗೆ ತರಲಾಗಿತ್ತು.

ಹೆಲಿಕ್ಯಾಪ್ಟರ್ ಇನ್ನೇನು 10 ನಿಮಿಷ ಗಳಲ್ಲಿ ತನ್ನ ಗುರಿ  ತಲುಪುವದಿತ್ತು. ಆದರೆ ವಿಧಿಯ ನಿಯಮ ಯಾರು ಬಲ್ಲರು? ಮನುಷ್ಯನ ಸಾವು ಕೇವಲ 1 ಕ್ಷಣದಲ್ಲೇಆಗಬಾಹುದು.ಈ ಒಂದು ಯುದ್ಧ ಹೆಲಿಕ್ಯಾಪ್ಟರ್ ನಲ್ಲಿ ವಿಂಗ್ ಕಮ್ಯಾಂಡರ್ P .S ಚೌಹಾಣ್ ಕೂಡ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇವರು ಭಾರತದ ವಾಯು ಪಡೆಗೆ 2000ನೇ ಸಾಲಿನಲ್ಲಿ ಸೇರಿದ್ದರು. ಮೂಲತಃ ಇವರು ಉತ್ತರ ಪ್ರದೇಶದವರು, ಕೊನೆಯಲ್ಲಿ ವಿಂಗ್ ಕಮಾಂಡರ್ ಆದ ಚೌಹಾಣ್ ರವರು ತಮ್ಮ ತಾಯಿಯ ಜೊತೆಗೆ ಮಾತನಾಡಿದ್ದರು. ವಿಂಗ್ ಕಮಾಂಡರ್ ರವರ ತಾಯಿ ಈ ಒಂದು ಮಾತನ್ನು ಪತ್ರಕಾರರ ಮುಂದೆ ಹೇಳಿದರು. ಮತ್ತು ವಿಂಗ್ ಕಮಾಂಡರ್ P .S ಚೌಹಾಣ್ ರವರು ತಮ್ಮ ಮನೆಯಲ್ಲೇ ಎಲ್ಲರಿಗಿಂತ ಚಿಕ್ಕವರೆಂದು ಅವರ ತಾಯಿ ಹೇಳಿದರು.

ಮತ್ತು ಗ್ರೂಪ್ ಕ್ಯಾಪ್ಟನ್ ಆದ ವರುಣ್ ಸಿಂಗ್ ರವರು ಮಾತ್ರ ಅಪಘಾತದಲ್ಲಿ ಉಳಿದ ವ್ಯಕ್ತಿ. ಇವರು ಒಬ್ಬ ಶೌರ್ಯ ಚಕ್ರ ಪ್ರಶಸ್ತಿಯಿಂದ ಪುರಸ್ಕೃತರು. ಇವರ ಚಿಕಿತ್ಸೆ ಈಗ ಸೇನಾ ಆಸ್ಪತ್ರೆ, ವೆಲ್ಲಿಂಗ್ಟನ್ ‘ನಲ್ಲಿ’ ನಡೆಯುತ್ತಿದೆ. ಮತ್ತು ಈ ಒಂದು ಅಪಘಾತಕ್ಕೆ ಏನು ಕಾರಣವೆಂದು ತಿಳಿದು ಕೊಳ್ಳಲು ಒಂದು ವಿಶೇಷ ತಂತ್ರಜ್ಞರ ಪಡೆ ಅಪಘಾತವಾದ ಸ್ಥಾನಕ್ಕೆ ಇವತ್ತು ಹೊರಟಿದೆ. ಈ ವರ್ಷ ಜವರಾಯ ನಮ್ಮ ದೇಶದ ಮೇಲೆ ತುಂಬಾ ಕೋಪ ಗೊಂಡಿದ್ದಾನೆ. ಕಾರಣ ಈ ವರ್ಷ ನಮ್ಮ ದೇಶದ ದೊಡ್ಡ ದೊಡ್ಡ ವ್ಯಕ್ತಿ ಗಳು ಸ್ವರ್ಗ ವಾಸಿಯಾಗಿದ್ದರೆ.

ಇನ್ನಷ್ಟು ಓದಿರಿ:

ರೈತರಿಗೆ ದೊಡ್ಡ ಆಘಾತ! ಮತ್ತೆ ದುಬಾರಿ ಆಯಿತು ಗೊಬ್ಬರ?

40,000 ರೂ.ನಲ್ಲಿ 66ಕಿಮೀ ಮೈಲೇಜ್ ನೀಡುವ ಯಮಹಾ ಸ್ಕೂಟರ್! 

Published On: 09 December 2021, 11:20 AM English Summary: Big Shock For Indian Army! Gen Bipin Rawat is no more

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.