1. ಸುದ್ದಿಗಳು

ಪಿಎಂ ಕಿಸಾನ್‌ ಫಲಾನುಭವಿಗಳಿಗೆ ಬಿಗ್‌ ನ್ಯೂಸ್‌: ನವೆಂಬರ್‌ 30ರಂದು ಖಾತೆಗೆ ಬರಲಿದೆ ಹಣ

Maltesh
Maltesh

ಸರ್ಕಾರವು ಇತ್ತೀಚೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 12 ನೇ ಕಂತನ್ನು ಬಿಡುಗಡೆ ಮಾಡಿದೆ ಮತ್ತು ಈಗ ರೈತರು ಯೋಜನೆಯ 13 ನೇ ಕಂತಿಗಾಗಿ ಕಾಯುತ್ತಿದ್ದಾರೆ.

ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ, ಎಲ್ಲಾ ಭೂಹಿಡುವಳಿ ರೈತರ ಕುಟುಂಬಗಳಿಗೆ ವಾರ್ಷಿಕ 6,000 ರೂಪಾಯಿಗಳ ಆರ್ಥಿಕ ಪ್ರಯೋಜನವನ್ನು ನೀಡಲಾಗುತ್ತದೆ, ಇದನ್ನು ಮೂರು ಸಮಾನ ಕಂತುಗಳಲ್ಲಿ 2,000 ರೂಗಳಲ್ಲಿ ಪಾವತಿಸಲಾಗುತ್ತದೆ. ಕೃಷಿ ಭೂಮಿ ಹೊಂದಿರುವ ಎಲ್ಲಾ ಭೂಹಿಡುವಳಿ ರೈತರ ಕುಟುಂಬಗಳು ಯೋಜನೆಯಡಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ.

Big News for PM Kisan Beneficiaries: Money to be credited on November 30

ಈ ಯೋಜನೆಯ ಲಾಭ ಪಡೆಯುತ್ತಿರುವ ದೇಶದ ಕೋಟ್ಯಾಂತರ ರೈತರಿಗೆ  ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ಸರ್ಕಾರ ರೈತರ ಖಾತೆಗೆ ಇತ್ತೀಚಿಗೆ 12 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ತಾಂತ್ರಿಕ ಕಾರಣಗಳಿಂದ ನಿಮ್ಮ ಖಾತೆಗೆ 12 ನೇ ಕಂತು ವರ್ಗಾವಣೆಯಾಗಿಲ್ಲ ಎಂದಾದರೆ ಇದೀಗ ಅಲೆದಾಡಬೇಕಿಲ್ಲ. ನವೆಂಬರ್ 30ರೊಳಗೆ ಎಲ್ಲಾ ಅರ್ಹ ರೈತರ ಖಾತೆಗೂ 12 ನೇ ಕಂತಿನ ಹಣವನ್ನು ವರ್ಗಾಯಿಸುವುದಾಗಿ ಸರ್ಕಾರ ತಿಳಿಸಿದೆ. 

12ನೇ ಕಂತಿನ ಹಣ ಬಿಡುಗಡೆಯಾಗಿ ಸಾಕಷ್ಟು ದಿನಗಳೆ ಕಳೆದಿದ್ದರು ಇನ್ನು ಕೂಡಾ ಇದುವರೆಗೂ ಲಕ್ಷಗಟ್ಟಲೆ ರೈತರ ಖಾತೆಗೆ 12ನೇ ಕಂತಿನ ಹಣ ಬಂದು ಸೇರಿಲ್ಲ. ಇದೀಗ ಯಾವ ರೈತರ ಖಾತೆಗೆ 12 ನೇ ಕಂತಿನ ಹಣ ಬಂದಿಲ್ಲವೋ ಆ ಎಲ್ಲಾ ರೈತರ ಖಾತೆಗೆ ನವೆಂಬರ್ 30 ರಂದು  ಯೋಜನೆಯ ಹಣವನ್ನು ವರ್ಗಾಯಿಸುವುದಾಗಿ ಸರ್ಕಾರ ಹೇಳಿದೆ.

ಬಿಗ್‌ನ್ಯೂಸ್‌: ರಾಜ್ಯದ 34 ಲಕ್ಷ ರೈತರಿಗೆ 24 ಸಾವಿರ ಕೋಟಿ ಸಾಲ ನೀಡಲು ತಿರ್ಮಾನ..ಸಿಎಂ ಘೋಷಣೆ

13ನೇ ಕಂತು ಯಾವಾಗ ಬರುತ್ತದೆ..?

PM Kisan 13th Instalment: ಪಿಎಂ ಕಿಸಾನ್‌ 13ನೇ ಕಂತಿನ ಮೊದಲ ಕಂತಿನ ಹಣ ರೂ.2000 ರೈತರಿಗೆ ಏಪ್ರಿಲ್ 1 ಮತ್ತು ಜುಲೈ 31 ರ ನಡುವೆ ನೀಡಲಾಗುತ್ತದೆ.

ಎರಡನೇ ಕಂತನ್ನು ಆಗಸ್ಟ್ 1 ಮತ್ತು ನವೆಂಬರ್ 30 ರ ನಡುವೆ ಬಿಡುಗಡೆ ಮಾಡಲಾಗುತ್ತದೆ.

ಹಾಗೆಯೇ ವರ್ಷದ ಮೂರನೇ ಕಂತನ್ನು ಡಿಸೆಂಬರ್ 1 ಮತ್ತು ಮಾರ್ಚ್ 31 ರ ನಡುವೆ ವರ್ಗಾಯಿಸಲಾಗುತ್ತದೆ.ಕಳೆದ ವರ್ಷ ಮೂರನೇ ಕಂತನ್ನು ಜನವರಿ 1 ರಂದು ಬಿಡುಗಡೆ ಮಾಡಲಾಗಿದ್ದು, ಈ ಬಾರಿಯೂ ಸರ್ಕಾರವು ಜನವರಿಯಲ್ಲಿ ಹಣವನ್ನು ವರ್ಗಾಯಿಸುವ ಸಾಧ್ಯತೆಗಳಿವೆ ಎಂದು ಸುದ್ದಿ ಇದೆ.

ಆದರೆ, ಈ ವಿಷಯದ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆಯಾಗಲಿ ಅಥವಾ ಹೇಳಿಕೆಯಾಗಲಿ ಹೊರಬಿದ್ದಿಲ್ಲ.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೋಂದಣಿ ಮಾಡದ ರೈತರು ಇದೀಗ ನೋಂದಣಿ ಮಾಡಬಹುದು ಇದರಿಂದ ಅವರು ಮುಂದಿನ ಕಂತನ್ನು ಪಡೆಯಬಹುದು.

ಪಿಎಂ ಕಿಸಾನ್‌ ಫಲಾನುಭವಿಗಳಿಗೆ ಬಿಗ್‌ ನ್ಯೂಸ್‌: ನವೆಂಬರ್‌ 30ರಂದು ಖಾತೆಗೆ ಬರಲಿದೆ ಹಣ

Published On: 20 November 2022, 04:30 PM English Summary: Big News for PM Kisan Beneficiaries: Money to be credited on November 30

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.