1. ಸುದ್ದಿಗಳು

ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕಿನಲ್ಲಿ ಇಂಧನ ಹಾಕಿಸಿ ನೀವು ಕಾರ್ ಗೆಲ್ಲಿ

ಅದೃಷ್ಟ ಯಾವ ಮೂಲೆಯಿಂದಲೂ ಬರಬಹುದು ಎಂಬ ಹೇಳಿಕೆ ಎಲ್ಲರೂ ಕೇಳಿರುತ್ತೀರಿ. ಇಲ್ಲಿ ನೀವು ನಿಮ್ಮ ಹಣ ಖರ್ಚು ಮಾಡಬೇಕಾಗಿಲ್ಲ. ಎಲ್ಲಿಯೂ ತುಂಬಬೇಕಾಗಿಲ್ಲ. ದಿನನಿತ್ಯ ನಿಮ್ಮ ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಂಡಂತೆ ಹಾಕಿಸಿ ಕಾರ್ ಗೆಲ್ಲಬಹುದು. ಹೌದು ಇದು ನಿಜ ಇಂಡಿಯನ್ ಆಯಿಲ್ ಒಂದು ವಿಶೇಷ ಬಂಪರ್ ಡ್ರಾ ಆಯೋಜಿಸಿದ್ದು, ಇದರಲ್ಲಿ ಅದೃಷ್ಟಶಾಲಿಗಳು ಕಾರ್ ಹಾಗೂ ಹಲವಾರು ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ನೀಡಿದೆ.

ಇಂಡಿಯನ್ ಆಯೋಜಿಸಿರುವ "ತುಂಬಿಸಿರಿ  ಇಂಧನ  ಗೆಲ್ಲಿರಿ ಕಾರ್" ಯೋಜನೆಯು ದೇಶಾದ್ಯಂತ ಜಾರಿಯಲ್ಲಿದ್ದು ಬಂಪರ್ ಡ್ರಾ ಮೂಲಕ ಆಯ್ಕೆಯಾದ ಅದೃಷ್ಟಶಾಲಿಗಳಿಗೆ ಒಂದು SUV ಕಾರು, ನಾಲ್ಕು ಸಾಮಾನ್ಯ ಕಾರು, 16 ಬೈಕ್ ಹಾಗೂ ಪ್ರತಿ ವಾರ 25 ಗ್ರಾಹಕರಿಗೆ 500 ರೂಪಾಯಿ ಹಾಗೂ ಪ್ರತಿ ದಿನ 100 ಗ್ರಾಹಕರಿಗೆ 100 ರೂಪಾಯಿ ಗೆಲ್ಲುವ ಅವಕಾಶವಿದೆ . ಇದೇ ತಿಂಗಳ ಡಿಸೆಂಬರ್ 31 ರವರೆಗೆ ಅವಕಾಶವಿದೆ.

 ಈ ಬಂಪರ್ ಡ್ರಾ ನಲ್ಲಿ ನೀವು ಭಾಗವಹಿಸಬೇಕೆಂದು ಏನು ಮಾಡಬೇಕು ಎಂದರೆ ಯಾವುದೇ ಇಂಡಿಯನ್ ಆಯಿಲ್ ಬಂಕ್ಗಳಲ್ಲಿ ನಾಲ್ಕುನೂರು ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಇಂಧನವನ್ನು ಹಾಕಿಸಿ ದಲ್ಲಿ ಪ್ರಿಂಟೆಡ್ ಬಿಲ್ಲನ್ನು ಪಡೆಯಬೇಕು ಹಾಗೂ ಅದರಲ್ಲಿ ಇರುವಂತಹ ಡೀಲರ್ ಹಾಗೂ ಬಿಲ್ ನಂಬರನ್ನು 9052155555ನಂಬರ್ಗೆ ಎಸ್ಎಂಎಸ್ ಮಾಡಬೇಕು, ಈ ಮೂಲಕ ನೀವು ಇಂಡಿಯನ್ ಆಯಿಲ್ ನಡೆಸುತ್ತಿರುವಂತೆ ಬಂಪರ್ ಡ್ರಾ ನಲ್ಲಿ ಒಬ್ಬ ಅದೃಷ್ಟಶಾಲಿಗಳ ಅವಕಾಶವನ್ನು ಪಡೆಯುತ್ತೀರಿ, ಅದೃಷ್ಟ ನಿಮ್ಮ ಪರ ಇದ್ದಾರೆ ನೀವು ಯಾವುದೇ ಬಹುಮಾನವನ್ನು ಕೂಡ ಗೆಲ್ಲಬಹುದು.

Sms ಮಾಡುವ ವಿಧಾನ dealer code (space )bill no(space)bill amount to 9052155555

 ಅದೃಷ್ಟ ನಮ್ಮ ಪರ ಇದ್ದರೂ ಇರಬಹುದು ಆದಕಾರಣ ನೀವು ಕೂಡ ಒಂದು ಪ್ರಯತ್ನ ಮಾಡಿ ನೋಡಿ.

ಲೇಖನ: ಚಿನ್ನಪ್ಪ ಎಸ್. ಅಂಗಡಿ

Published On: 08 December 2020, 02:11 PM English Summary: Bharo Fuel Jeeto Car’ scheme launched by Indian Oil

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.