1. ಸುದ್ದಿಗಳು

ಕಾಂಗ್ರೆಸ್‌ನಿಂದ ಉತ್ತಮ ಸ್ಥಾನ; ಜಗದೀಶ ಶೆಟ್ಟರ್‌ ವಿಶ್ವಾಸ!

Hitesh
Hitesh
Better position by Congress; Jagadish Shettar confidence!

ಇಂದಿನ ಸಣ್ಣ ಪ್ರಮುಖ ಹಾಗೂ ಸಂಕ್ಷಿಪ್ತ ಸುದ್ದಿಗಳು ಇಲ್ಲಿವೆ... 

1. ರಾಜ್ಯದ 9 ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. 9 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಲ್ಲಿ

ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ. ರಾಜ್ಯದಲ್ಲಿ ಮೇ 31ರ ನಂತರ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ. 

ಇನ್ನು ಚಿಕ್ಕಬಳ್ಳಾಪುರ, ಬೆಂಗಳೂರು, ತುಮಕೂರು, ಮಂಡ್ಯ, ರಾಮನಗರ, ಚಾಮರಾಜನಗರ,ಕೋಲಾರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಅಲ್ಲದೇ ಮುಂದಿನ ಮುಂದಿನ 24 ಗಂಟೆಯ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು,

ಮಳೆಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಮುಂದಿನ 24 ಘಂಟೆಗಳು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ.

ಗರಿಷ್ಠ ಉಷ್ಣಾಂಶದ ಮುನ್ಸೂಚನೆ ಮುಂದಿನ 48 ಘಂಟೆಗಳು ಗರಿಷ್ಠ ಉಷ್ಣಾಂಶವು ರಾಜ್ಯದ ಕೆಲವು ಕಡೆಗಳಲ್ಲಿ

ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
 

2. ಕಾಂಗ್ರೆಸ್ ನಾಯಕರು ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಮಾನ ನೀಡಲಿದ್ದಾರೆ. ಈ ಕುರಿತು ವಿಶ್ವಾಸವಿದೆ ಎಂದು

ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಜಗದೀಶ ಶೆಟ್ಟರ್ ತಿಳಿಸಿದ್ದಾರೆ. ನಾನು ಯಾವುದೇ ಷರತ್ತು ವಿಧಿಸಿ ಕಾಂಗ್ರೆಸ್ ಸೇರಿರಲಿಲ್ಲ.

ಈಗ ಒತ್ತಡದ ವಾತಾವರಣವಿದ್ದು, ಹೀಗಾಗಿ, ಸಚಿವ ಸ್ಥಾನ ನೀಡಿಲ್ಲ ಇನ್ನೂ ಸಾಕಷ್ಟು ಅವಕಾಶವಿದೆ ಎಂದರು.

ಇನ್ನು ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಯಾವುದೇ ಚರ್ಚೆ ನಡೆದಿಲ್ಲ. ಅಲ್ಲದೇ ಚುನಾವಣೆಗೆ ಇನ್ನೂ ಒಂದು ವರ್ಷವಿದೆ.

ಕಾದು ನೋಡೋಣ ಮುಂದೆ ಏನಾಗುತ್ತದೆ ಎಂದರು. ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಕೆಲವು ಪ್ರಮುಖ ಸ್ಥಾನ ಸಿಕ್ಕಿದ್ದು, ಸಾಕಷ್ಟು ಅವಕಾಶಗಳು ಸಿಕ್ಕಿವೆ ಎಂದರು.
---------------------------

3. ಚೈಪಟ್ಟಣ ಫೌಂಡೇಶನ್ ಮತ್ತು ಆಫೀಸ್ ಆಫ್ ರಾಯಲ್ ಡೆವಲಪ್‌ಮೆಂಟ್ ಪ್ರಾಜೆಕ್ಟ್ಸ್ ಬೋರ್ಡ್ ಆಯೋಜಿಸಿದ ಏಳನೇ ಅಂತರರಾಷ್ಟ್ರೀಯ

ವೆಟಿವರ್ (ICV7) ಸಮ್ಮೇಳನವು ಇದೇ ಮೇ 29ರಿಂದ ಜೂನ್1 ರವರೆಗೆ ಥೈಲ್ಯಾಂಡ್‌ನ ಚಿಯಾಂಗ್ ಮಾಯ್‌ನಲ್ಲಿ ನಡೆಯಲಿದೆ.

ಮಣ್ಣು ಮತ್ತು ಜಲ ಸಂರಕ್ಷಣೆ ಈ ಬಾರಿಯ ವಿಷಯವಾಗಿದೆ. ಸಮಾವೇಶದಲ್ಲಿ ಕೃಷಿ ಜಾಗರಣ ಮಾಧ್ಯಮವು ಪ್ರತಿನಿಧಿತ್ವವನ್ನು ವಹಿಸಿದೆ.

ಕೃಷಿ ಜಾಗರಣ ಮತ್ತು ಅಗ್ರಿಕಲ್ಚರ್ ವರ್ಲ್ಡ್ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ ಎಂ.ಸಿ.ಡೊಮಿನಿಕ್, ನಿರ್ದೇಶಕಿ ಶೈನಿ ಡೊಮಿನಿಕ್ ಸಮ್ಮೇಳನದಲ್ಲಿ ಭಾಗವಹಿದ್ದಾರೆ.

ಅಂತಾರಾಷ್ಟ್ರೀಯ ಕರಕುಶಲ ತರಬೇತಿ ಕೋರ್ಸ್: ICV-7 ಸಹಯೋಗದೊಂದಿಗೆ, ಥೈಲ್ಯಾಂಡ್‌ನ ಚಿಯಾಂಗ್ ಮಾಯ್‌ನಲ್ಲಿರುವ ಶಾಂಗ್ರಿ-ಲಾ ಹೋಟೆಲ್‌ನಲ್ಲಿ

29 ರಿಂದ 31 ಮೇ 2023 ರವರೆಗೆ ಉಚಿತವಾಗಿ ಅಂತರರಾಷ್ಟ್ರೀಯ ವೆಟಿವರ್ ಕ್ರಾಫ್ಟ್ ತರಬೇತಿ ಕೋರ್ಸ್ ನಡೆಯಲಿದೆ.

ಕರಕುಶಲ ಉದ್ಯಮದಲ್ಲಿ ಕೆಲಸ ಮಾಡುವ ಅಥವಾ ವೆಟಿವರ್ ಕರಕುಶಲ ವಸ್ತುಗಳನ್ನು

ಬಳಸಲು ಆಸಕ್ತಿ ಹೊಂದಿರುವ ಎಲ್ಲರಿಗೂ ತರಬೇತಿ ಕೋರ್ಸ್ ಅನ್ನು ಪ್ರಾರಂಭಿಸಲಾಗಿದೆ.
---------------------------

4. ಮೇ 31ಕ್ಕೆ ರಾಜ್ಯದಲ್ಲಿ ಶಾಲಾ ಪ್ರಾರಂಭೋತ್ಸವ ನಡೆಯಲಿದೆ. 2023-24ನೇ ಸಾಲಿನ ಶೈಕ್ಷಣಿಕ ಅವಧಿಯು ಸೋಮವಾರದಿಂದ ಪ್ರಾರಂಭವಾಗಿದ್ದು,

31ಕ್ಕೆ ಏಕಕಾಲಕ್ಕೆ ರಾಜ್ಯದಾದ್ಯಂತ ಶಾಲಾ ಪ್ರಾರಂಭೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಶಾಲೆಗಳಲ್ಲಿ ಮೇ 31ಕ್ಕೆ ಹಬ್ಬದ ವಾತಾವರಣ ನಿರ್ಮಿಸಬೇಕು.

ಶಾಲಾ ಪ್ರಾರಂಭೋತ್ಸವ ಆಚರಿಸಿದ ದಿನದಿಂದಲೇ ಅಂದರೆ ಮೇ 31ರಿಂದಲೇ ತರಗತಿಗಳನ್ನು ಪ್ರಾರಂಭಿಸಬೇಕು.

ಜೂನ್‌ 30ರ ಒಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಶಿಕ್ಷಣ ಇಲಾಖೆ ನಿರ್ದೇಶನ ನೀಡಲಾಗಿದೆ.
---------------------------

5. ಐಪಿಎಲ್‌ನಲ್ಲಿ ಮಿಂಚುತ್ತಿರುವ ಶುಭಮನ್‌ ಗಿಲ್‌ನ ಬಗ್ಗೆ ಹಲವು ಹಿರಿಯ ಕ್ರಿಕೆಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಇದೀಗ ಕ್ರಿಕೆಟಿಗ ಶುಭಮನ್‌ ಗಿಲ್‌ ಹಾಗೂ ಬಾಲಿವುಡ್‌ ನಟಿ ಸಾರಾ ಅಲಿಖಾನ್‌ ಇಬ್ಬರೂ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಿಂದ

ಈಚೆಗೆ ಅಲ್‌ಫಾಲೋ ಮಾಡಿಕೊಂಡಿರುವುದು ಸಾಕಷ್ಟು ಸುದ್ದಿಯಾಗಿದೆ. ಈ ಮೂಲಕ ಇವರಿಬ್ಬರೂ ಬೇರೆಯಾಗಿದ್ದಾರೆ

ಎನ್ನುವ ವಿಷಯ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದೆ. ಶುಭಮನ್‌ ಗಿಲ್‌ ಅವರು ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದು,

ಸಖತ್‌ ಫಾರ್ಮ್‌ನಲ್ಲಿದ್ದಾರೆ. ಎರಡು ಬಾರಿ ಶತಕವನ್ನು ಸಿಡಿಸುವ ಮೂಲಕ ಆರೆಂಜ್‌ ಕ್ಯಾಪ್‌ ಸಹ ಧರಿಸಿದ್ದರು.

ಇನ್ನು ಈ ಹಿಂದೆ ಸಚಿನ್‌ ತೆಂಡೂಲ್ಕರ್‌ ಅವರ ಮಗಳು ಸಾರಾ ತೊಂಡೂಲ್ಕರ್‌ ಜೊತೆ ಸಹ ಗಿಲ್‌ ಹೆಸರು ಕೇಳಿಬಂದಿತ್ತು.

ನಂತರ ಈ ವಿಷಯ ಹೆಚ್ಚು ಚರ್ಚೆ ಆಗಿರಲಿಲ್ಲ. ಅವರಿಬ್ಬರೂ ದೂರ ಸರಿದಿದ್ದಾರೆ ಎನ್ನಲಾಗಿತ್ತು. 

Published On: 29 May 2023, 02:41 PM English Summary: Better position by Congress; Jagadish Shettar confidence!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.