1. ಸುದ್ದಿಗಳು

ಲಾಲ್‌ಬಾಗ್‌ ಫ್ಲವರ್‌ ಶೋ..400ಕ್ಕೂ ಹೆಚ್ಚು ಹೂಗಳಲ್ಲಿ ಅರಳಿದ ʼದೊಡ್ಮನೆʼ ಹುಡುಗ ಅಪ್ಪು

Maltesh
Maltesh
Bengaluru Lalbagh flower show start..all you need to know

ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಬೆಂಗಳೂರಿನ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ಮತ್ತೆ ಆರಂಭಗೊಂಡಿದೆ. ಕೋವಿಡ್‌ ಸಾಂಕ್ರಾಮಿಕದಿಂದ ಸ್ಥಗಿತಗೊಂಡಿದ್ದ ಈ ಫ್ಲವರ್ ಶೋ ಇದೇ ಆಗಸ್ಟ್‌ 5 ರಿಂದ ಆರಂಭಗೊಂಡಿದೆ. ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು. 

Bengaluru Lalbagh flower show start..all you need to know

ನಗರದ ಲಾಲ್‌ಬಾಗ್‌ ಉದ್ಯಾನದಲ್ಲಿ ಈ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ  ಆಯೋಜಿಸುವ ಫ್ಲವರ್‌ ಶೋ ಅನ್ನು ಸ್ಯಾಂಡಲ್‌ವುಡ್‌ನ ದಿವಗಂತ ನಟ ಪುನೀತ್ ರಾಜಕುಮಾರ್ ಹೆಸರಿನಲ್ಲಿ ಆಯೋಜಿಸಲಾಗಿದೆ. ಆಗಸ್ಟ್‌ 15ರವರೆಗೆ ಲಾಲ್‌ಬಾಗ್‌ ಉದ್ಯಾನದಲ್ಲಿ ಈ ಶೋ ನಡೆಯಲಿದೆ. ಸದ್ಯ  ಕೋವಿಡ್ ನಿಯಮಾವಳಿಗಳು ಸಡಿಲವಾಗಿರುವ ಕಾರಣದಿಂದ ಪ್ರತಿ ವರ್ಷಕ್ಕಿಂತಲೂ ಈ ಸಲ ಅದ್ದೂರಿಯಾಗಿ ಫ್ಲವರ್‌ ಶೋ ನಡೆಸಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ.

ಲಾಲ್ಬಾಗ್ನಲ್ಲಿ ಈಗಾಗಲೇ ಚಿನ್ನ ಲೇಪಿತ ಅಪ್ಪು ಪ್ರತಿಮೆಯನ್ನು ನಿರ್ಮಿಸಲಾಗಿದೆ. ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ಜ್ಯೋತಿಯನ್ನ ಬೆಳ್ಳಿ ರಥದ ಮೂಲಕ ಲಾಲ್ ಬಾಗ್ ವರೆಗೂ ಮೆರವಣಿಗೆ.

ಲಾಲ್‍ಬಾಗ್‍ನಲ್ಲಿ 1912 ರಿಂದ ನಡೆಸಲಾಗುತ್ತಿದೆ.ದೇಶವಷ್ಟೇ ಅಲ್ಲ, ಜಗತಿನಲ್ಲೆ ದಾಖಲೆ ನಿರ್ಮಿಸಿದೆ. ತೋಟಗಾರಿಕಾ ಇಲಾಖೆ ಮೈಸೂರು ತೋಟಗಾರಿಕಾ ಸೊಸೈಟಿಯ ಸಹಯೋಗದಲ್ಲಿ ವರ್ಷಕ್ಕೆ 2 ಬಾರಿ ಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗುತ್ತಿದೆ ಎಂದು ತೋತಗಾರಿಕಾ ಸಚಿವ ಮುನಿರತ್ನ ತಿಳಿಸಿದರು. 

ಇದನ್ನೂ ಮಿಸ್‌ ಮಾಡ್ದೇ ಓದಿ:

ಕೋಟ್ಯಾಂತರ ಕಬ್ಬು ಬೆಳೆಗಾರರಿಗೆ ಭರ್ಜರಿ ಗಿಫ್ಟ್‌ ನೀಡಿದ ಕೇಂದ್ರ ಸರ್ಕಾರ!

Bengaluru Lalbagh flower show start..all you need to know

ಮೊದಲು ಈ ಪ್ರದರ್ಶನವನ್ನು ಬೇಸಿಗೆ ಮತ್ತು ಚಳಿಗಾಲದ ಪ್ರದರ್ಶನ ಎಂದು ವಿಂಗಡಿಸಲಾಗಿತ್ತು. ಅದೇ ರೀತಿಯಲ್ಲಿ ಈ ವರ್ಷ 212ನೇ ಪ್ರದರ್ಶನವಾಗಿದ್ದು, ಸ್ವಾತಂತ್ರ್ಯ ದಿನಾಚರಣೆಗೆ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಪುಷ್ಪ ಪ್ರದರ್ಶನದ ವೇಳೆ ವಾಕರ್‌ಗಳು ಸೇರಿದಂತೆ ಯಾರಿಗಾದರೂ ತೊಂದರೆಯಾಗದಂತೆ ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ. ಫಲಪುಷ್ಪ ಪ್ರದರ್ಶನದ ವೇಳೆ ನಾಲ್ಕು ಐಸಿಯು ಆಂಬ್ಯುಲೆನ್ಸ್ ವಾಹನಗಳನ್ನು ಸ್ಟ್ಯಾಂಡ್‌ಬೈ ಮಾಡಲು ವ್ಯವಸ್ಥೆ ಮಾಡಿದ್ದೇವೆ. ಸುಮಾರು 200 ರಿಂದ 250 ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.

“ಊಟಿಯಿಂದ ಸುಮಾರು 2,500 ಹೂವಿನ ಕುಂಡಗಳು ಮತ್ತು ಹಾಲೆಂಡ್, ನ್ಯೂಜಿಲೆಂಡ್, ಯುಎಸ್ಎ, ದಕ್ಷಿಣ ಆಫ್ರಿಕಾ, ಕೀನ್ಯಾ, ಆಸ್ಟ್ರೇಲಿಯಾ, ಡೆನ್ಮಾರ್ಕ್ ಮತ್ತು ಅರ್ಜೆಂಟೀನಾ ದೇಶಗಳ ಹೂವುಗಳು ಗ್ಲಾಸ್ ಹೌಸ್‌ನಲ್ಲಿ ಪ್ರದರ್ಶನಗೊಳ್ಳಲಿವೆ.

Bengaluru Lalbagh flower show start..all you need to know

ಫಲಪುಷ್ಪ ಪ್ರದರ್ಶನ ಆಯೋಜಿಸಲು 2.50 ಕೋಟಿ ವೆಚ್ಚ ಮಾಡುತ್ತಿದ್ದೇವೆ’ ಎಂದರು. ಪ್ರವೇಶ ಟಿಕೆಟ್‌ಗಳನ್ನು ಎಲ್ಲಾ ಪ್ರವೇಶ ಕೇಂದ್ರಗಳ ಗ್ಯಾಲರಿಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 6.30 ರವರೆಗೆ ಮಾರಾಟ ಮಾಡಲಾಗುತ್ತದೆ.

ಆಗಸ್ಟ್ 15 ರಗೆ ಈ ವಿಶೇಷ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು, ಪ್ರವಾಸಿಗರು, ವಿದೇಶಿ ಪ್ರೇಕ್ಷಕರು ಹಾಗೂ ಹೆಚ್ಚಾಗಿವರೆ ಶಾಲಾ ಮಕ್ಕಳ ಆಗಮಿಸುವ ನಿರೀಕ್ಷೆಯಿದೆ. ಪ್ರತಿ ದಿನ ಬೆಳಗ್ಗೆ 8 ರಿಂದ ಸಂಜೆ 6:30ರ ವರೆಗೆ ಫ್ಲವರ್ ಶೋ ಓಪನ್ ಇರಲಿದೆ. 1 ರಿಂದ 10 ನೇ ತರಗತಿ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ವಯಸ್ಕರಿಗೆ ರಜಾದಿನಗಳಲ್ಲಿ 100, ರೂ., ಸಾಮಾನ್ಯ ದಿನಗಳಲ್ಲಿ 80 ರೂ. ಪ್ರವೇಶದರ ಇರಲಿದೆ.

Bengaluru Lalbagh flower show start..all you need to know
Published On: 06 August 2022, 10:20 AM English Summary: Bengaluru Lalbagh flower show start..all you need to know

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.