ಅಕ್ಟೋಬರ್ ಒಂದೇ ತಿಂಗಳಲ್ಲಿ ಸಾಲು ಸಾಲು ರಜೆಗಳು ಬಂದಿದ್ದರಿಂದ ಬ್ಯಾಂಕ್ ನೌಕರಿಗೆ ಖುಷಿಯೋ ಖುಷಿ. ಒಂದೇ ತಿಂಗಳಲ್ಲಿ ಬರೋಬ್ಬರಿ 14 ದಿನಗಳ ಕಾಲ ಬ್ಯಾಂಕಿಂಗ್ ಸೇವೆ ಬಂದ್ ಆಗಲಿದೆ. ಕೇವಲ 17 ದಿನಗಳು ಮಾತ್ರ ಕಾರ್ಯನಿರ್ವಹಿಸಲಿವೆ. ಹಾಗಾಗಿ ಗ್ರಾಹಕರು ತಮ್ಮ ಯಾವುದೇ ಹಣಕಾಸಿನ ವ್ಯವಹಾರಗಳಿದ್ದರೆ ಮೊದಲೇ ಪ್ಲಾನ್ ಮಾಡಿ ನಿರ್ವಹಿಸಿದರೆ ಉತ್ತಮ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕುಗಳಿಗೆ ಒಟ್ಟು 11 ದಿನಗಳ ರಜೆ ಬಂದಿತ್ತು. ಆದರೆ ಈ ವರ್ಷ 14 ದಿನಗಳ ರಜೆ ಬಂದಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕುಗಳ ರಜೆಯ ದಿನಾಂಕವನ್ನು ಪ್ರಕಟಿಸಿದೆ. ಅಕ್ಟೋಬರ್ ತಿಂಗಳೊಂದರಲ್ಲೇ 14 ದಿನಗಳ ಕಾಲ ರಜೆ ಘೋಷಿಸಲಾಗಿದೆ. ಅಧಿಕ ವರ್ಷವಾಗಿದ್ದರಿಂದ ಬಹುತೇಕ ಎಲ್ಲಾ ಹಬ್ಬಗಳು ಒಂದಿ ತಿಂಗಳಲ್ಲಿ ಬಂದಿವೆ.
ಗಾಂಧಿಜಯಂತಿಯಿಂದ ಆರಂಭವಾದ ಅಕ್ಟೋಬರ್ ತಿಂಗಳ ರಜೆ ಅಂತ್ಯದವರೆಗೂ ಮುಂದುವರೆಯಲಿದೆ. ಅಕ್ಟೋಬರ್ ತಿಂಗಳೊಂದರಲ್ಲಿಯೇ ನಾಲ್ಕು ಭಾನುವಾರ, ಎರಡು 2 ಶನಿವಾರದ ರಜೆ ಜೊತೆಗೆ 8 ಸಾರ್ವತ್ರಕ ಹಾಗೂ ಸ್ಥಳೀಯ ರಜೆಗಳನ್ನು ಘೋಷಿಸಲಾಗಿದೆ.
ರಜೆಗಳು:
ಅಕ್ಟೋಬರ್ 2 ರಂದು ಗಾಂಧಿ ಜಯಂತಿ, ಅಕ್ಪೋಬರ್ 4 ರಂದು ಭಾನುವಾರ, ಅಕ್ಟೋಬರ್ 8 ರಂದು ಚೆಹಲುಮ್-ಸ್ಥಳೀಯ ರಜೆ, ಅಕ್ಟೋಬರ್ 10 ರಂದು ಎರಡನೇ ಶನಿವಾರ, ಅಕ್ಟೋಬರ್ 11 ರಂದು ಭಾನುವಾರ, ಅಕ್ಟೋಬರ್ 17 ರಂದು ಸ್ಥಳೀಯ ರಜೆ, ಅಕ್ಟೋಬರ್ 18 ರಂದು ಭಾನುವಾರ, ಅಕ್ಟೋಬರ್ 23 ರಂದು ದುರ್ಗಾ ಪೂಜೆ, ಅಕ್ಟೋಬರ್ 24 ರಂದು ಮಹಾನವಮಿ, ಅಕ್ಟೋಬರ್ 25 ರಂದು ಭಾನುವಾರ, ಅಕ್ಟೋಬರ್ 26 ರಂದು ವಿಜಯದಶಮಿ, ಅಕ್ಟೋಬರ್ 29 ರಂದು ಪ್ರವಾದಿ ಮಹ್ಮದ್ ಜಯಂತಿ, ಅಕ್ಟೋಬರ್ 30 ರಂದು ಈದ್-ಇ-ಮಿಲಾದ್ ಹಾಗೂ ಅಕ್ಟೋಬರ್ 31 ರಂದು ಮಹರ್ಷಿ ವಾಲ್ಮೀಕಿ ಜಯಂತಿ. ಇದೆ.
ಹೀಗೆ ಒಂದೇ ತಿಂಗಳಲ್ಲಿ 14 ದಿನಗಳು ರಜೆ ಬಂದಿದ್ದರಿಂದ ಗ್ರಾಹಕರು ತಮ್ಮ ಬ್ಯಾಂಕಿನ ವ್ಯವಹಾರವನ್ನು ಮಾಡಲು ಯೋಜನೆ ಹಾಕಿಕೊಳ್ಳಬಹುದು.
Share your comments