1. ಸುದ್ದಿಗಳು

ಬ್ಯಾಂಕ್‌ಗೆ ಹೋಗೋ ಪ್ಲಾನ್‌ನಲ್ಲಿದ್ರೆ ಇಲ್ಲೊಮ್ಮೆ ನೋಡ್ಬಿಡಿ..! Aprilನಲ್ಲಿ 15 ದಿನ ಬಂದ್‌ ಇರಲಿವೆ ಬ್ಯಾಂಕ್‌-Details

KJ Staff
KJ Staff
Bank Holidays in April 2022

ಈ ವರ್ಷದ ಏಪ್ರಿಲ್‌ನಲ್ಲಿ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಬ್ಯಾಂಕ್ಗಳನ್ನು ಸೇರಿಸಿ ಬರೋಬ್ಬರಿ 15 ರಜೆಗಳು ಬಂದಿವೆ. ಮಾರ್ಚ ತಿಂಗಳು ಹಣಕಾಸಿನ ವರ್ಷದ ಕೊನೆಯ ತಿಂಗಳು. ಈ ತಿಂಗಳು ಮುಗಿದು ಏಪ್ರಿಲ್ 1ನೇ ತಾರೀಖಿನಿಂದ ಹೊಸ ಹಣಕಾಸಿನ ವರ್ಷ ಆರಂಭವಾಗುತ್ತದೆ.

ಹೊಸ ಆರ್ಥಿಕ ವರ್ಷವು ಏಪ್ರಿಲ್ 1 ರಂದು ಪ್ರಾರಂಭವಾಗುತ್ತದೆ, ಅದರೊಂದಿಗೆ ಹೆಚ್ಚುವರಿ ಕರ್ತವ್ಯಗಳ ಜೊತೆಗೆ ಹಲವಾರು ರಜೆಗಳ ನಿರೀಕ್ಷೆಯನ್ನು ಕೂಡ ತರುತ್ತದೆ. ಇನ್ನೂ ಬ್ಯಾಂಕ್‌ಗಳಿಗೆ ಭೇಟಿ ನೀಡುವ ಪ್ಲಾನ್ನಲ್ಲಿದ್ದವರು ಈ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಪ್ಲಾನ್ ಮಾಡುವುದು ಉತ್ತಮ. ಹೀಗಾಗಿ ನಾವು ಮುಂದಿನ ತಿಂಗಳು ಅಂದರೆ ಏಪ್ರಿಲ್ನಲ್ಲಿ ಬ್ಯಾಂಕ್, ಯಾವ್ಯಾವ ದಿನದಂದು ಬಂದ್ ಆಗಿರುತ್ತದೆ ಎಂಬುದರ ಕುರಿತು ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ..

ಇದನ್ನೂ ಓದಿ:LPG Price hike: 5 ತಿಂಗಳ ಬಳಿಕ ಮತ್ತೇ ಗ್ರಾಹಕರಿಗೆ ಶಾಕ್‌..ಸಿಲಿಂಡರ್‌ ಬೆಲೆಯಲ್ಲಿ ಭಾರೀ ಏರಿಕೆ..!

ಏಪ್ರಿಲ್ 1 - ಬ್ಯಾಂಕ್ ಖಾತೆಗಳ ವಾರ್ಷಿಕ ದಿನ
ಏಪ್ರಿಲ್ 2 - ಗುಡಿ ಪಾಡ್ವಾ / ಯುಗಾದಿ ಹಬ್ಬ / ತೆಲುಗು ಹೊಸ ವರ್ಷ / ( ಬೇಲಾಪುರ್, ಬೆಂಗಳೂರು, ಚೆನ್ನೈ, ಹೈದರಾಬಾದ್, , ಮುಂಬೈ, ನಾಗ್ಪುರ, ಪಣಜಿ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ ರಜೆ)
ಏಪ್ರಿಲ್ 3 - ಭಾನುವಾರ ( ವಾರದ ರಜೆ)
ಏಪ್ರಿಲ್ 4 - ಸರಿಹುಲ್‌ ( ರಾಂಚಿಯಲ್ಲಿ ಬ್ಯಾಂಕ್ ರಜೆ )
ಏಪ್ರಿಲ್ 5 - ಬಾಬು ಜಗಜೀವನ್ ರಾಮ್ ಜನ್ಮದಿನ ( ಹೈದರಾಬಾದ್‌ನಲ್ಲಿ ಬ್ಯಾಂಕ್ ರಜೆ )
ಏಪ್ರಿಲ್ 9 - ಶನಿವಾರ (2 ನೇ ಶನಿವಾರ )
ಏಪ್ರಿಲ್ 10 - ಭಾನುವಾರ (ವಾರದ ರಜೆ)
ಏಪ್ರಿಲ್ 14 - ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ/ ಮಹಾವೀರ ಜಯಂತಿ/ ಬೈಸಾಖಿ/ ತಮಿಳು ಹೊಸ ವರ್ಷ/ ಚೈರೋಬಾ, ಬಿಜು ಹಬ್ಬ/ ಬೋಹರ್ ಬಿಹು -( ಶಿಲ್ಲಾಂಗ್ ಮತ್ತು ಶಿಮ್ಲಾ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಬ್ಯಾಂಕ್ ರಜೆ )

ಇದನ್ನೂ ಓದಿ:IPL ಜೊತೆ ICL ಒಪ್ಪಂದಕ್ಕೆ ಸಹಿ! ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವಿಯಾರಿಂದ ಅಭಿನಂದನೆ

15 ಏಪ್ರಿಲ್ – ಗುಡ್ ಫ್ರೈಡೇ / ಬಂಗಾಳಿ ಹೊಸ ವರ್ಷ / ಹಿಮಾಚಲ ದಿನ / ವಿಷು / ಬೋಹಾಗ್ ಬಿಹು ( ಜೈಪುರ, ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಬ್ಯಾಂಕ್ ರಜೆ )
16 ಏಪ್ರಿಲ್ - ಬೊಹಾಗ್ ಬಿಹು ( ಗುವಾಹಟಿಯಲ್ಲಿ ಬ್ಯಾಂಕ್ ರಜೆ)
17 ಏಪ್ರಿಲ್ - ಭಾನುವಾರ (ವಾರದ ರಜೆ)
21 ಏಪ್ರಿಲ್ - ಗಡಿಯಾ ಪೂಜೆ ( ಅಗರ್ತಲಾದಲ್ಲಿ ಬ್ಯಾಂಕ್ ರಜೆ)
23 ಏಪ್ರಿಲ್ - ಶನಿವಾರ (ತಿಂಗಳ ನಾಲ್ಕನೇ ಶನಿವಾರ)
24 ಏಪ್ರಿಲ್ - ಭಾನುವಾರ (ವಾರದ ರಜೆ)
29 ಏಪ್ರಿಲ್ - ಶಾಬ್-ಎ-ಖಾದ್ರ್/ಜುಮಾತ್-ಉಲ್-ವಿದಾ ( ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ರಜೆ)

RBI ರಜಾದಿನಗಳನ್ನು ಮೂರು ವಿಭಾಗಗಳಾಗಿ ವರ್ಗೀಕರಿಸುತ್ತದೆ: ರಾಜ್ಯ-ನಿರ್ದಿಷ್ಟ ಆಚರಣೆಗಳು, ಧಾರ್ಮಿಕ ರಜಾದಿನಗಳು ಮತ್ತು ಹಬ್ಬದ ಆಚರಣೆಗಳು. ಆರ್‌ಬಿಐ ಈ ಕೆಳಗಿನ ವರ್ಗಗಳಲ್ಲಿ ಬ್ಯಾಂಕ್ ರಜಾದಿನಗಳನ್ನು ಘೋಷಿಸಿದೆ: ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, ಹಾಲಿಡೇ, ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ ಮತ್ತು ಬ್ಯಾಂಕ್‌ಗಳ ಖಾತೆಗಳನ್ನು ಮುಚ್ಚುವುದು.

ಇದನ್ನೂ ಓದಿ:kisan samman: ರೈತರ ಖಾತೆಗೆ ಈ ದಿನಾಂಕದಂದು 11ನೇ ಕಂತಿನ ಹಣ ಬರೋದು ಫಿಕ್ಸ್

ವಿಶೇಷ ಎಂಬಂತೆ ಕೆಲವು ದಿನಗಳನ್ನು ಹೊರತುಪಡಿಸಿ, ಈ ರಜಾದಿನಗಳಲ್ಲಿ ಹೆಚ್ಚಿನವು ಕೆಲವು ನಗರಗಳು ಮತ್ತು ರಾಜ್ಯಗಳಿಗೆ ಮಾತ್ರ ಅನ್ವಯಿಸುತ್ತವೆ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಮತ್ತು ದೇಶಾದ್ಯಂತ ಪ್ರಾದೇಶಿಕ ಬ್ಯಾಂಕ್‌ಗಳು ಸೂಚಿಸಿದ ದಿನಾಂಕಗಳಲ್ಲಿ ಮುಚ್ಚಲ್ಪಡುತ್ತವೆ ಎಂದು ವರದಿಗಳಾಗಿವೆ.

Published On: 22 March 2022, 03:42 PM English Summary: Bank Holidays in April 2022

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.