1. ಸುದ್ದಿಗಳು

ಬೆಂಗಳೂರು-ಮೈಸೂರು ಹೆದ್ದಾರಿ : ರಸ್ತೆ ಸುರಕ್ಷತಾ ತಜ್ಞರ ಸಮಿತಿ ನೇಮಕ

Maltesh
Maltesh
Bangalore-Mysore Highway: Road Safety Expert Committee appointed

ಸುರಕ್ಷಿತ ಪ್ರಯಾಣವನ್ನು ಉತ್ತೇಜಿಸುವ ಮೂಲಕ ಕರ್ನಾಟಕದ ಜನರಿಗೆ ಎಕ್ಸ್‌ಪ್ರೆಸ್‌ ಕಾರಿಡಾರ್‌ ಸೇವೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ʻಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿʼಯ ಸುರಕ್ಷತಾ ತಪಾಸಣೆ ನಡೆಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ಎಚ್ಎಐ) ʻರಸ್ತೆ ಸುರಕ್ಷತಾ ತಜ್ಞರ ಸಮಿತಿʼಯನ್ನು ರಚಿಸಿದೆ.

ಸಮಿತಿಯು ಪ್ರಸ್ತುತ ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಜುಲೈ 20ರ ಒಳಗಾಗಿ ಅಧ್ಯಯನವನ್ನು ಮುಕ್ತಾಯಗೊಳಿಸಲಿದೆ. ಭೇಟಿಯ ಮುಕ್ತಾಯದ ನಂತರ 10 ದಿನಗಳಲ್ಲಿ ಅದು ವರದಿಯನ್ನು ಸಲ್ಲಿಸಲಿದೆ.

2023ರಲ್ಲಿ ಮಾರ್ಚ್ ಸಂಚಾರಕ್ಕೆ ಮುಕ್ತಗೊಳಿಸಲಾದ 118 ಕಿ.ಮೀ ಉದ್ದದ ʻಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿ ಕಾರಿಡಾರ್ʼ, ʻಎನ್ಎಚ್ -275ʼರ ಒಂದು ಭಾಗವನ್ನು ಒಳಗೊಂಡಿದೆ.

ಹೆದ್ದಾರಿಯನ್ನು ನಿರ್ಮಿಸುವಲ್ಲಿ ʻಎನ್ಎಚ್ಎಐʼ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡಿದೆ. ಇದು ವಾಣಿಜ್ಯ-ವಹಿವಾಟು ಹೆಚ್ಚಿಸಲು ಕೊಡುಗೆ ನೀಡುತ್ತಿದೆ ಮತ್ತು ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತಿದೆ.

ಹೆದ್ದಾರಿಯು ಕರ್ನಾಟಕ ರಾಜ್ಯದ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಅರ್ಧದಷ್ಟು ಕಡಿಮೆ ಮಾಡಿದ್ದು, ಕೇವಲ 75 ನಿಮಿಷಗಳಿಗೆ ಇಳಿಸಿದೆ. ಈ ಹೆದ್ದಾರಿಯು ಭಾರತದ ವೇಗವಾಗಿ ಬದಲಾಗುತ್ತಿರುವ ರಸ್ತೆ ಮೂಲಸೌಕರ್ಯ ಮತ್ತು ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿ ಜಾಲವನ್ನು ರಚಿಸುವ ʻಎನ್ಎಚ್ಎಐʼ ಬದ್ಧತೆಗೆ ಸಾಕ್ಷಿಯಾಗಿದೆ.

ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ ಪಟ್ಟಣಗಳಿಗೆ 4 ರೈಲ್ವೆ ಮೇಲ್ಸೇತುವೆಗಳು, 9 ಪ್ರಮುಖ ಸೇತುವೆಗಳು, 40 ಸಣ್ಣ ಸೇತುವೆಗಳು, 89 ಅಂಡರ್ ಪಾಸ್‌ಗಳು ಮತ್ತು ಓವರ್ ಪಾಸ್‌ಗಳು ಮತ್ತು 6 ಬೈಪಾಸ್‌ಗಳನ್ನು ನಿರ್ಮಿಸಲಾಗಿದೆ. ಪ್ರವೇಶ ನಿಯಂತ್ರಿತ ಹೆದ್ದಾರಿಯು ಕರ್ನಾಟಕಕ್ಕೆ ತಮಿಳುನಾಡು ಮತ್ತು ಕೇರಳದೊಂದಿಗೆ ಅಂತರರಾಜ್ಯ ಸಂಪರ್ಕವನ್ನು ಒದಗಿಸುತ್ತದೆ. ಕೊಡಗು, ಶ್ರೀರಂಗಪಟ್ಟಣ, ವಯನಾಡ್ ಮತ್ತು ಊಟಿ ನಗರಗಳ ವಾಹನ ದಟ್ಟಣೆಯನ್ನು ನಿವಾರಿಸುತ್ತದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷತೆಯನ್ನು ಸುಧಾರಿಸುವುದು ʻಎನ್ಎಚ್ಎಐʼನ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತ, ಸುಗಮ ಮತ್ತು ತಡೆರಹಿತ ಪ್ರಯಾಣದ ಅನುಭವವನ್ನು ಖಾತರಿಪಡಿಸಲು ಪ್ರಾಧಿಕಾರವು ಬದ್ಧವಾಗಿದೆ.

Published On: 21 July 2023, 04:41 PM English Summary: Bangalore-Mysore Highway: Road Safety Expert Committee appointed

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.