1. ಸುದ್ದಿಗಳು

ಆರೋಗ್ಯ ಬಂಧು ಯೋಜನೆ: ಸರ್ಕಾರದಿಂದ ಮಹತ್ವದ ಆದೇಶ

Maltesh
Maltesh
Arogya Bandhu Yojana: Important Announcement by Government

ರಾಜ್ಯದಲ್ಲಿ ಚಾಲ್ತಿಯಿರುವ ಆರೋಗ್ಯ ಬಂಧು ಯೋಜನೆಯನ್ನು ಸರ್ಕಾರ ಪರಿಷ್ಕೃತ ಮಾರ್ಗಸೂಚಿಗಳೊಂದಿಗೆ ಮುಂದುವರೆಸುವ ಕುರಿತು ರಾಜ್ಯ ಸರ್ಕಾರ ಹೊಸ ಆದೇಶವನ್ನು ಪ್ರಕಟ ಮಾಡಿದೆ.  ಈ ಪ್ರಕಾರ ಆರೋಗ್ಯ ಬಂಧು ಯೋಜನೆಯಡಿಯಲ್ಲಿ ಎಲ್ಲ ಅರ್ಹತಾ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿರುವ 12 ಪ್ರಾಥಮಿಕ ಆರೋಗ್ಯ ಕೇಂದ್ರಗಖನ್ನು ಮುಂದುವರೆಸುವಂತೆ, ಹಾಗೂ ಇನ್ನುಳಿದ ಕೇಂದ್ರಗಳನ್ನು ಅವುಗಳ ಟೆಂಡರ್‌ ಅವಧೀ ಮುಗಿಯುತ್ತಿದ್ದಂತೆ ಇಲಾಖೆಯ ಅಧೀನಕ್ಕೆ ಪಡೆದುಕೊಳ್ಳುವಂತೆ ಆದೇಶಿಸಲಾಗಿತ್ತು.

Arogya Bandhu Yojana: Important Announcement by Government

ಸದ್ಯ ಉಲ್ಲೇಖ (3)ರನ್ವಯ, 2 ತಿಂಗಳ ಅವಧಿಗೆ (01-04-2023 ರಿಂದ 31-05-2023ರವರೆಗೆ) ಪರಿಷ್ಕೃತ ಮಾರ್ಗಸೂಚಿಗಳನ್ವಯ 19 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತಾತ್ಕಲಿಕವಾಗಿ ದಿನಾಂಕ:-21-07-2022ರ ಆದೇಶದಲ್ಲಿನ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವ. ಹಾಗೂ ಇಲಾಖೆಯಲ್ಲಿ ನೀಡುವಂತಹ ಗುತ್ತಿಗೆ ವೇತನಕ್ಕೆ ಸಮನಾದ ವೇತನ ಪಾವತಿಸುವ ಷರತ್ತಿಗೊಳಪಟ್ಟು ಮುಂದುವರೆಸಲು ನಿಯಮಾನುಸಾರ ಕ್ರಮಕೈಗೊಳ್ಳಲು ಸೂಚಿಸಲಾಗಿತ್ತು.

Arogya Bandhu Yojana: Important Announcement by Government

ಮುಂದುವರೆದು, ಸರ್ಕಾರವು ಈ ಮೊದಲು ಮುಂದುವರೆಸಿರುವ 19 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪರಿಷ್ಕೃತ ಆರೋಗ್ಯ ಬಂಧು ಯೋಜನೆಯಡಿ 1 ತಿಂಗಳು ಅಂದರೆ ದಿನಾಂಕ: 30-06- 2023ರವರೆಗೆ ಮುಂದುವರೆಸಲು ಅನುಮೋದನೆ ನೀಡಿರುತ್ತಾರೆ, ಆದ್ದರಿಂದ 19 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪರಿಷ್ಕೃತ ಆರೋಗ್ಯ ಬಂಧು ಯೋಜನೆಯಡಿ 1 ತಿಂಗಳು ಅಂದರೆ ದಿನಾಂಕ:30-06-2023ರವರೆಗೆ, ದಿನಾಂಕ:-21-07-2022ರ ಆದೇಶದಲ್ಲಿನ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವ ಹಾಗೂ ಇಲಾಖೆಯಲ್ಲಿ ನೀಡುವಂತಹ ಗುತ್ತಿಗೆ ವೇತನಕ್ಕೆ ಸಮನಾದ ವೇತನ ಪಾವತಿಸುವ ಷರತ್ತಿಗೊಳಪಟ್ಟು, ಮುಂದುವರೆಸಲು ನಿಯಮಾನುಸಾರ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.

Published On: 31 May 2023, 09:55 AM English Summary: Arogya Bandhu Yojana: Important Announcement by Government

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.