ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್‌ನ ಬಳಕೆಗೆ ಸಂಬಂಧಿಸಿದಂತೆ ಬೇಡಿಕೆ ಹೆಚ್ಚಾಗುತ್ತಿದ್ದು, ಶೀಘ್ರ ವಿಲೇವಾರಿಗೆ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಬಾಕಿ ಉಳಿದಿರುವ ರೇಷನ್ ಕಾರ್ಡ್ ಅರ್ಜಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಈ ಸಂಬಂಧ ಸೆಪ್ಟೆಂಬರ್ 29ರಂದು ಸರ್ಕಾರಿ ಆದೇಶ ಹೊರಡಿಸಿದೆ.
2.96 ಲಕ್ಷ ಅರ್ಜಿ ಸಲ್ಲಿಕೆ ಬಾಕಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಹಾಗೂ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಜಾರಿ
ಮಾಡಿದ ನಂತರದಲ್ಲಿ ರೇಷನ್ ಕಾರ್ಡ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ.
Ration Card Updates ಬಿಪಿಎಲ್, ಎಪಿಎಲ್ ಕಾರ್ಡ್ ವಿಭಜನೆಗೆ ಬ್ರೇಕ್; ಸರ್ಕಾರದಿಂದ ಜನರಿಗೆ ಶಾಕ್!
ಮುಖ್ಯವಾಗಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ರೇಷನ್ ಕಾರ್ಡ್‌ಅನ್ನು ಪ್ರಧಾನವಾಗಿ ಇರಿಸಿಕೊಳ್ಳಲಾಗಿದೆ.
ಹೀಗಾಗಿ, ರಾಜ್ಯದಲ್ಲಿ ಪಡಿತರ ಚೀಟಿಗಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ ಹೊಸ ಪಡಿತರ ಚೀಟಿಗಾಗಿ 2.96 ಲಕ್ಷ ಅರ್ಜಿಗಳು ಬಾಕಿ
ಉಳಿದಿದ್ದು, ಈ ಪ್ರಮಾಣದ ಅರ್ಜಿಗಳನ್ನು ಶೀಘ್ರವಾಗಿ ಅಂದರೆ ಕಾಲಮಿತಿಯಲ್ಲಿ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸರ್ಕಾರವು ನಿರ್ದೇಶನ ನೀಡಿದೆ.
ರೇಷನ್ ಕಾರ್ಡ್‌ಗೆ ನೂತನವಾಗಿ ಅರ್ಜಿಗಳು ಮಾರ್ಚ್ 2023 ರಿಂದ ಬಾಕಿ ಉಳಿದಿವೆ. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು
ಪೂರ್ಣಗೊಳಿಸಿದ ನಂತರದಲ್ಲಿ ಖಾತರಿ ಯೋಜನೆಗಳಿಗೆ ಹೆಚ್ಚಿನ ಫಲಾನುಭವಿಗಳನ್ನು ಸೇರಿಸುವ ಸಾಧ್ಯತೆ ಇದೆ.
ಇನ್ನು ಈ ನಡುವೆ ಬಿಪಿಎಲ್ (Split BPL cards) ಕಾರ್ಡ್‌ಗಳನ್ನು ವಿಭಜಿಸಲು ಅವಕಾಶ ನೀಡದಂತೆ ಹಣಕಾಸು
ಇಲಾಖೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು (Finance Department Food and Civil Supplies Department) ಒತ್ತಾಯಿಸಿದೆ.
ರಾಜ್ಯ ಹಣಕಾಸು ಇಲಾಖೆಯ ಪ್ರಕಾರ, ಬಡತನ ರೇಖೆಗಿಂತ ಕೆಳಗಿನ ಕಾರ್ಡ್‌ಗಳ ದುರುಪಯೋಗವನ್ನು ನಿರ್ಬಂಧಿಸುತ್ತದೆ.
ಕರ್ನಾಟಕವು 1.2 ಕೋಟಿ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದು, 4.4 ಕೋಟಿ ಫಲಾನುಭವಿಗಳನ್ನು ಒಳಗೊಂಡಿದೆ.
1.15 ಕೋಟಿ ಕುಟುಂಬಗಳು ಖಾತರಿ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುತ್ತಿವೆ.
ಕೆಲವರು ಈಗಿರುವ ಕಾರ್ಡ್‌ನಿಂದ ವಿಭಜಿಸಿ ಒಂದೇ ಕುಟುಂಬದ ಹೊಸ ಪಡಿತರ ಚೀಟಿ ಪಡೆಯುತ್ತಿರುವ ಆರೋಪಗಳು ಕೇಳಿಬಂದಿವೆ.
ಈ ರೀತಿ ಮಾಡುವುದರಿಂದ ಒಂದೇ ಕುಟುಂಬದಿಂದ ಮೂರು ಅಥವಾ ಎರಡು ಕಾರ್ಡ್‌ಗಳು ಸೃಷ್ಟಿಯಾಗಿ ಫಲಾನುಭವಿಗಳ ಸಂಖ್ಯೆಯಲ್ಲಿ
ಭಾರೀ ಹೆಚ್ಚಳವಾಗಲಿದೆ. ಇದರಿಂದಾಗಿ ಸರ್ಕಾರಕ್ಕೆ ಆರ್ಥಿಕ ಹೊರೆಯು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ.
ಪ್ರಸ್ತುತ ಇರುವ ಕಾರ್ಡ್‌ನಲ್ಲಿ ಈಗಾಗಲೇ ಹೆಸರಿರುವ ಕುಟುಂಬದ ಸದಸ್ಯರಿಗೆ ಹೊಸ ಕಾರ್ಡ್‌ಗಳನ್ನು (ಫ್ರೀಜ್)
ತಟಸ್ಥ ಮಾಡುವಂತೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಆಗ್ರಹಿಸಲಾಗಿದೆ ಎಂದು ಹೇಳಲಾಗಿದೆ.
Share your comments