1. ಸುದ್ದಿಗಳು

ಪಿಎಂ ಕಿಸಾನ್ ಕ್ರೇಡಿಟ್ ಕಾರ್ಡ್ ಪಡೆದ ರೈತರಿಗೆ ಸಿಗಲಿದೆ ಕಡಿಮೆ ಬಡ್ಡಿದರದಲ್ಲಿ 3 ಲಕ್ಷ ರೂಪಾಯಿಯವರೆಗೆ ಸಾಲ

ಪಿಎಂ ಕಿಸಾನ್ ಫಲಾನುಭವಿಗಳಿಗೆ 3 ಲಕ್ಷ ರೂಪಾಯಿಯವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದು ಬಹುತೇಕ ರೈತರಿಗೆ ಗೊತ್ತಿರಲಿಕ್ಕಿಲ್ಲ. ಹೌದು, ಪಿಎಂ ಕಿಸಾನ್ ಫಲಾನುಭವಿಗಳಿಗೆ 3 ಲಕ್ಷ ರೂಪಾಯಿಯವರೆಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯವಿದೆ.ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲೆಂದೇ ಆರಂಭಿಸಲಾದ 'ಕಿಸಾನ್ ಕ್ರೆಡಿಟ್ ಕಾರ್ಡ್‌' (ಕೆಸಿಸಿ) ಯೋಜನೆಡಿ ಅತಿ ಕಡಿಮೆ ಬಡ್ಡಿದರದಲ್ಲಿ ಬೆಳೆ ಸಾಲ ನೀಡಲಾಗುತ್ತದೆ. ಈ ಸಾಲಗಳಿಗೆ ವಿಧಿಸುವ ಬಡ್ಡಿ ಎಷ್ಟು, ಸರಕಾರದಿಂದ ಎಷ್ಟು ಸಹಾಯಧನ ದೊರೆಯಲಿದೆ ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೇಂದ್ರ ಸರ್ಕಾರವು ಈಗ ಪಿಎಂ ಕಿಸಾನ್ ಯೋಜನೆ ಮತ್ತು ಪಿಎಂ ಕಿಸಾನ್ ಕ್ರೇಡಿಟ್ ಕಾರ್ಡ್ ಅನ್ನು ಲಿಂಕ್ ಮಾಡಿದೆ. ಈ ಕಾರ್ಡ್ ಮೂಲಕ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಲಿದೆ.  ಕಿಸಾನ್ ಕ್ರೇಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ರೈತರು ಒಂದು ವರ್ಷದವರೆಗೆ ಅಥವಾ ನಿಗದಿತ ಅವಧಿಯವರೆಗೆ ವಾರ್ಷಿಕ 7 ರ ದರದಲ್ಲಿ ಬಡ್ಡಿ ಸಿಗುತ್ತದೆ. ಒಂದು ವೇಳೆ ರೈತ ನಿಗದಿತ ಅವಧಿಗೂ ಮೊದಲೇ ರೈತ ಸಾಲ ಮರುಪಾವತಿ ಮಾಡಿದರೆ ಬಡ್ಡಿದರದಲ್ಲಿ ಶೇ. 3 ರಷ್ಟು ರಿಯಾಯಿತಿ ಪಡೆಯಬಹುದು. ಅಂದರೆ ರೈತರು ಕೇವಲ ಶೇ. 4 ರಷ್ಟು ಬಡ್ಡಿ ಪಾವತಿಸಿದಂತಾಗುತ್ತದೆ. ಬೆಳೆ ಸಾಲಗಳಿಗೆ ಮರುಪಾವತಿ ಅವಧಿಯನ್ನು ನಿರೀಕ್ಷಿತ ಕೊಯ್ಲು ಮತ್ತು ಮಾರುಕಟ್ಟೆ ಅವಧಿಗೆ ಅನುಗುಣವಾಗಿ ನೀಗದಿಪಡಿಸಲಾಗುವುದು.

ಪಿಎಂ ಕಿಸಾನ್ ಕ್ರೇಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ಕೇವಲ ಕೃಷಿಕರಿಗೆ ಮಾತ್ರವಲ್ಲ, ಪಶುಸಂಗೋಪನೆ ಮತ್ತು ಮೀನುಗಾರಿಕೆಗೂ ಸಾಲ ನೀಡಲಾಗುವುದು.ಕೇಂದ್ರ ಸರ್ಕಾರವು 1998 ರಲ್ಲಿ ಕಿಸಾನ್ ಕ್ರೇಡಿಟ್ ಕಾರ್ಡ್ ನ್ನು ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಕಿಸಾನ್ ಕ್ರೇಡಿಟ್ ಕಾರ್ಡ್ ಯೋಜನೆಯನ್ನು ಸೇರಿಸಿದ್ದಾರೆ. ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದಲ್ಲಿ ಪಿಎಂ ಕಿಸಾನ್ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ವಿತರಿಸುವ ಅಭಿಯಾನವನ್ನು ಚಾಲನೆ ನೀಡಿದ್ದಾರೆ.

ಕಿಸಾನ್ ಕ್ರೇಡಿಟ್ ಕಾರ್ಡ್ ಗೆ ಯಾವ ರೈತರು ಅರ್ಹರು: 

ಪಿಎಂ ಕಿಸಾನ್ ಯೋಜನೆಯ ಎಲ್ಲಾ ಫಲಾನುಭವಿಗಳು ಕಿಸಾನ್ ಕ್ರೇಡಿಟ್ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ. ಕಿಸಾನ್ ಕ್ರೇಡಿಟ್ ಕಾರ್ಡ್ ಮೂಲಕ ಸಾಲ ಪಡೆದ ರೈತರ ಬೆಳೆಗಳಿಗೆ ಬೆಳೆ ವಿಮೆ ಕೂಡ ಲಭ್ಯವಿದೆ.

ಅಗತ್ಯ ದಾಖಲೆಗಳು:

ಪಿಎಂ ಕಿಸಾನ್ ಕ್ರೇಡಿಟ್ ಕಾರ್ಡ್  ಪಡೆಯಲು ರೈತರು ವಿಳಾಸದ ಪುರಾವೆಗಾಗಿ ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್  ಹೊಂದಿರಬೇಕು. ಪ್ಯಾನ್ ಕಾರ್ಡ್, ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಹೊಂದಿರಬೇಕು.  ಬ್ಯಾಂಕ್ ಪಾಸ್ಬುಕ್, ಜಮೀನಿನ ದಾಖಲೆಗಳು ಹೊಂದಿರಬೇಕು. ಬ್ಯಾಂಕಿನಿಂದ ಯಾವುದೇ ಸಾಲವನ್ನು ತೆಗೆದುಕೊಂಡಿಲ್ಲ ಎಂದು ಅಫಿಡಿವೆಟ್ ಮೂಲಕ ಬ್ಯಾಂಕಿಗೆ ತಿಳಿಸಬೇಕಾಗುತ್ತದೆ.

ಪಿಎಂ ಕಿಸಾನ್ ಕ್ರೇಡಿಟ್ ಕಾರ್ಡ್ ಒದಗಿಸುವ ಬ್ಯಾಂಕುಗಳು: ಕಿಸಾನ್ ಕ್ರೇಡಿಟ್ ಕಾರ್ಡನ್ನು ಸಾರ್ವಜನಿಕ ವಲಯದ ಬ್ಯಾಂಕುಗಳು, ,ಸಹಕಾರಿ ಬ್ಯಾಂಕುಗಳು ಮತ್ತು ಗ್ರಾಮೀಣ ಬ್ಯಾಂಕುಗಳು ನೀಡುತ್ತವೆ.

ಪಿಎಂ ಕಿಸಾನ್ ಕ್ರೇಡಿಟ್ ಕಾರ್ಡ್ ಅರ್ಜಿಯನ್ನು ಪಿಎಂ ಕಿಸಾನ್ ಯೋಜನೆಯ ವೆಬ್ ಸೈಟ್ https://pmkisan.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ವೆಬ್ ಸೈಟ್ ಓಪನ್ ಆಗುತ್ತದೆ. ಅಲ್ಲಿ  ಬಲಗಡೆ ಡೌನ್ಲೋಡ್ ಕೆಸಿಸಿ ಫಾರ್ಮ್ (Download KCC Form)  ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಅರ್ಜಿ ಭರ್ತಿ ಮಾಡಿ ಬ್ಯಾಂಕಿಗೆ ಸಲ್ಲಿಸಿ 3 ಲಕ್ಷ ರೂಪಾಯಿಯವರೆಗೆ ಸಾಲ ಪಡೆಯಬಹುದು.

Published On: 09 August 2021, 10:14 PM English Summary: Apply for Kisan credit card and get loan facility

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.