1. ಸುದ್ದಿಗಳು

ಕೃಷಿ ಹೊಂಡ ನಿರ್ಮಾಣ 2022: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Maltesh
Maltesh
Applications invited by horticulture department for pond subsidy

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ  ತೋಟಗಾರಿಕೆ ಮಾವು, ಅಂಜೂರು, ಪೇರಲ, ಹುಣಸೆ ಸೇರಿದಂತೆ ಇತರೆ ಹಣ್ಣಿನ ಬೆಲೆಗಳು ಹಾಗೂ ಕೃಷಿ ಹೊಂಡ ನಿರ್ಮಾಣ, ಶೇಡ್‌ ಶೆಡ್‌ ನಿರ್ಮಾಣಕ್ಕೆ ಸಬ್ಸಿಡಿ ನೀಡಲು   ಗದಗ ಜಿಲ್ಲಾ  ಶಿರಹಟ್ಟಿ ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳ ತೋಟಗಾರಿಕೆ ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಯಾವವು

ರೈತರ ಸ್ವಂತ ಜಮೀನು ಹೊಂದಿರಬೇಕು.

ಪಡಿತರ ಚೀಟಿ ಹೊಂದಿರಬೇಕು.

ಆಧಾರ್ ಕಾರ್ಡ್ ಇರಬೇಕು.

ಇತ್ತೀಚಿನ ಭಾವಚಿತ್ರ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಪ್ರಮಾಣ ಪತ್ರ ಇರಬೇಕು.

ಬ್ಯಾಂಕ್ ಪಾಸ್ ಝರಾಕ್ಸ್ ಪ್ರತಿ ಇರಬೇಕು.

ರೈತರ ಜಮೀನಿನ ಪಹಣಿ ಝರಾಕ್ಸ್ ಪ್ರತಿ ಇರಬೇಕು. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.ಬೆಳೆ ವೈವಿಧ್ಯೀಕರಣ: ಹೆಚ್ಚಿನ ಇಳುವರಿ ಕಂಡ ಸಾಸಿವೆ!

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಿ:

ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಮತ್ತು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಲು ತಿಳಿಸಲಾಗಿದೆ.

ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿರುವ ಮಳೆಯ ಪ್ರಮಾಣದಿಂದ ಮಳೆಯಾಧಾರಿತ ಕೃಷಿಯನ್ನು ನಂಬಿಕೊಂಡಿರುವ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೃಷಿ ಹೊಂಡಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಕೃಷಿಕರು ಮಳೆ ನೀರನ್ನು ವ್ಯರ್ಥವಾಗಲು ಬಿಡದೆ ಸೂಕ್ತ ಸ್ಥಳದಲ್ಲಿ ಹೊಂಡ ತೆಗೆದು ನೀರನ್ನು ಸಂಗ್ರಹಿಸಿ, ಅದನ್ನು ತಮ್ಮ ಬೆಳೆಗಳಿಗೆ ನೀರಾವರಿ ಒದಗಿಸಲು ಈ ಯೋಜನೆಯ ಉದ್ದೇಶವಾಗಿದೆ.#ರೈತರೊಬ್ಬರಿಂದ ಬೀಜರಹಿತ ಕಲ್ಲಂಗಡಿ ಕೃಷಿ ಪ್ರಯೋಗ! ವಿದೇಶದಿಂದ ನೋಡಲು ಬಂದ ಸಂಶೋಧಕರು!

ಕೃಷಿ ಹೊಂಡ ರಚನೆ ನಂತರ ನೀರು ಇಂಗದಂತೆ ತಡೆಯಲು ಪಾಲಿಥೀನ್‌ ಹೊದಿಕೆ ಅಳವಡಿಕೆ, ಹೊಂಡದಿಂದ ನೀರು ಎತ್ತಲು ಡೀಸೆಲ್‌ ಪಂಪ್‌ಸೆಟ್‌, ತುಂತುರು ನೀರಾವರಿ ಅಳವಡಿಕೆಗೆ ಈ ಯೋಜನೆಯಡಿ ಅವಕಾಶವಿದೆ. ಕೃಷಿ ಹೊಂಡ ನಿರ್ಮಾಣ ಮಾಡಿದ ರೈತರಿಗೆ ಅಳತೆಗೆ ಅನುಗುಣವಾಗಿ ಸಾಮಾನ್ಯ ವರ್ಗದವರಿಗೆ ಸಹಾಯಧನ (ಸಬ್ಸಿಡಿ) ನೀಡಲಾಗುವುದು.

Published On: 09 July 2022, 05:22 PM English Summary: Applications invited by horticulture department for pond subsidy

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2023 Krishi Jagran Media Group. All Rights Reserved.