1. ಸುದ್ದಿಗಳು

6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ₹10,000 ವಿದ್ಯಾರ್ಥಿ ವೇತನ : ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೆ?

Kalmesh T
Kalmesh T
Application Invited for Sports Scholarship from Secondary, High School students

Scholarship for students : ನೀವು ಸಹ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಾಗಿದ್ದರೆ ಇಲ್ಲಿದೆ ನಿಮಗಾಗಿ ಸರ್ಕಾರದಿಂದ 10,000 ರೂಪಾಯಿ ವಿದ್ಯಾರ್ಥಿ ವೇತನ. ಇದಕ್ಕೆ ಯಾರು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಈ ಎಲ್ಲ ಮಾಹಿತಿಗಾಗಿ ಇದನ್ನು ಓದಿರಿ…

Application Invited for Sports Scholarship : ಹೌದು, ನೀವು 6ನೇ ತರಗತಿಯಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾಗಿದ್ದರೆ ಇದನ್ನು ತಪ್ಪದೇ ಓದಬೇಕು. 6ರಿಂದ 10ನೇ ತರಗತಿಯ ಮಕ್ಕಳಿರುವ ಪಾಲಕರು ಕೂಡ ಇದನ್ನು ಓದಿ.

ಪ್ರಸಕ್ತ ಸಾಲಿಗಾಗಿ ಪ್ರತಿಭಾವಂತ ಮಾಧ್ಯಮಿಕ, ಪ್ರೌಢ ಶಾಲೆಗಳಲ್ಲಿನ 6 ರಿಂದ 10ನೇ ತರಗತಿಯ ವಿದ್ಯಾರ್ಥಿ ಕ್ರೀಡಾಪಟುಗಳಿಗೆ ವಾರ್ಷಿಕ 10 ಸಾವಿರ ರೂಪಾಯಿಗಳ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿವೇತನ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಕಚೇರಿಯ ಅಧಿಕೃತ ಜಾಲತಾಣ https://sevasindhuservices.Karnataka.gov.in ಗೆ ಆನ್‍ಲೈನ್ ಮೂಲಕ ಜುಲೈ 31 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ 0836-2447424 ಗೆ ಸಂರ್ಪಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಅತ್ಯುತ್ತಮ ರೈತ ಪ್ರಶಸ್ತಿ “ಹಾಗೂ “ರೈತ ಮಹಿಳೆ ಪ್ರಶಸ್ತಿ”ಗೆ ಅರ್ಜಿ ಆಹ್ವಾನ: ₹15,000 ನಗದು ಬಹುಮಾನ

Published On: 20 June 2023, 11:26 AM English Summary: Application Invited for Sports Scholarship from Secondary, High School students

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.