1. ಸುದ್ದಿಗಳು

ಉದ್ಯೋಗಿನಿ ಯೋಜನೆಯಡಿ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

2020-21ನೇ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯ ನೀಡಲು ಜಿಲ್ಲೆಯ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹತೆಗಳು: 18 ರಿಂದ 55 ವರ್ಷದ ಮಹಿಳೆಯರಿಗೆ ಅವಕಾಶವಿರುತ್ತದೆ. ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷ ಮೀರಿರಬಾರದು.

ದಾಖಲಾತಿಗಳು: ನಿಗದಿತ ಅರ್ಜಿ ನಮೂನೆ (ತ್ರಿಪ್ರತಿ), ಜಾತಿ ಪ್ರಮಾಣ ಪತ್ರ ಮತ್ತು ಕುಟುಂಬದ ಇತ್ತೀಚಿನ ವಾರ್ಷಿಕ ಆದಾಯ ಪ್ರಮಾಣ ಪತ್ರ, ಫಲಾನುಭವಿಯ ಆಧಾರ್ ಕಾರ್ಡ್ ಪ್ರತಿ, ಕೈಗೊಳ್ಳುವ ಚಟುವಟಿಕೆಯ ಯೋಜನಾ ವರದಿ, ತರಬೇತಿ ಅಥವಾ ಅನುಭವದ ಪತ್ರ ಹಾಗೂ ಮತದಾನದ ಗುರುತಿನ ಚೀಟಿ ಲಗತ್ತಿಸಬೇಕು. ವಿಧವೆಯರು ಪತಿಯ ಮರಣ ದೃಡೀಕರಣ ಪ್ರತಿ, ವಿಕಲಚೇತನರಾದಲ್ಲಿ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಲಗತ್ತಿಸಬೇಕು. 1 ಲಕ್ಷದಿಂದ 3 ಲಕ್ಷಗಳ ವರೆಗೆ ನಿಗಧಿಪಡಿಸಲಾಗಿದ್ದು, ಸಾಲದ ಮೊತ್ತಕ್ಕೆ ಶೇ.50 ರಷ್ಟು ಸಹಾಯಧನ ನೀಡಲಾಗುತ್ತದೆ.

ಅರ್ಜಿಗಳನ್ನು ಬಾಗಲಕೋಟೆ ಜಿಲ್ಲೆಯ ಆಯಾ ತಾಲೂಕಿನ ಶಿಶು ಅಭಿವೈದ್ದಿ ಯೋಜನಾಧಿಕಾರಿಗಳ ಕಚೇಯಿಂದ ಪಡೆದು ನವೆಂಬರ 17 ರೊಳಗಾಗಿ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೈದ್ದಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಗದಿತ ದಾಖಲಾತಿಗಳೊಂದಿಗೆ ಪಡೆದ ಅರ್ಜಿಯನ್ನು ಪ್ರಾಥಮಿಕ ಪರಿಶೀಲನೆ ಮಾಡಲಾಗುವುದು. ಅರ್ಹ ಅರ್ಜಿಗಳನ್ನು ಆಯ್ಕೆ ಸಮಿತಿಯಲ್ಲಿ ಪರಿಶೀಲಿಸಿ, ಆಯ್ಕೆಯಾದ ಅರ್ಜಿಗಳನ್ನು ಅರ್ಜಿದಾರರ ಸೇವಾ ವಲಯದಲ್ಲಿ ಬರುವ ಬ್ಯಾಂಕಿನ ಶಾಖೆಗಳಿಗೆ ಸಾಲ ಮಂಜೂರಾತಿಗಾಗಿ ಶಿಫಾರಸ್ಸು ಮಾಡಲಾಗುವುದು. ಬ್ಯಾಂಕಿನಿಂದ ಸಾಲ ನೀಡಲು ಒಪ್ಪಿದಲ್ಲಿ ಇಡಿಪಿ ತರಬೇತಿ ಏರ್ಪಡಿಸಿ ಸಹಾಯಧನ ಬಿಡುಗಡೆ ಮಾಡಲಾಗುವುದು.

Published On: 27 October 2020, 08:01 PM English Summary: application invited for self employment for women

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.