ಪ್ರಸಕ್ತ 2021ನೇ ಶೈಕ್ಷಣಿಕ ಸಾಲಿಗೆ ಕಲಬುರಗಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ವಿವಿಧ ಕೋರ್ಸ್ಗಳಲ್ಲಿ ಖಾಲಿಯಿರುವ ಉಪನ್ಯಾಸಕರ ಹುದ್ದೆಗಳ ಜಾಗದಲ್ಲಿ ಅರೆಕಾಲಿಕ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸರ್ಕಾರಿ ಪಾಟೆಕ್ನಿಕ್‌ನ ಪ್ರಾಚಾರ್ಯರಾದ ರಾಘವೇಂದ್ರ ಪಿ.ಆರ್. ಅವರು ತಿಳಿಸಿದ್ದಾರೆ.
ಕಮರ್ಷಿಯಲ್ ಪ್ರಾಕ್ಟೀಸ್ (ಇಂಗ್ಲೀಷ್) ಉಪನ್ಯಾಸಕರ ಹುದ್ದೆಗೆ ಎಂ.ಕಾಂ. ಪದವಿ ಅಥವಾ ಪ್ರಥಮ ದರ್ಜೆ ಕಾಮರ್ಸ್ ಪದವಿ ಜೊತೆಗೆ ಇಂಗ್ಲೀಷ್ ಸೀನಿಯರ್ ಶೀಘ್ರಲಿಪಿ ಮತ್ತು ಬೆರಳಚ್ಚು ಪಾಸಾಗಿರಬೇಕು. ಆಪೆರಲ್ ಡಿಸೈನ್ ಮತ್ತು ಫ್ಯಾಬ್ರಿಕೇಷನ್ ಟೆಕ್ನಾಲಜಿ (ಎ.ಡಿ.ಎಫ್.ಟಿ.) ಹುದ್ದೆಗೆ ಕ್ಲಾಥಿಂಗ್/ ಗಾರ್ಮೆಂಟ್/ಫ್ಯಾಷನ್ ಟೆಕ್ನಾಲಜಿಯಲ್ಲಿ ಸ್ನಾತಕ ಪದವಿ ಅಥವಾ ಸೈನ್ಸ್/ಫ್ಯಾಷನ್ ಟೆಕ್ನಾಲಜಿ/ಗಾರ್ಮೆಂಟ್ ಟೆಕ್ನಾಲಜಿಯಲ್ಲಿ ಪದವಿಯ ಜೊತೆಗೆ ಡಿಪ್ಲೋಮಾ ಎ.ಡಿ.ಎಫ್.ಟಿ./ಸಿ.ಡಿ.ಡಿ.ಎಂ. ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು.
ಉಪನ್ಯಾಸಕರು (ಇಂಗ್ಲೀಷ್) ಹುದ್ದೆಗೆ ಎಂ.ಎ ಇಂಗ್ಲೀಷ್ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು. ಉಪನ್ಯಾಸಕರು (ಕನ್ನಡ) ಹುದ್ದೆಗೆ ಎಂ.ಎ. ಕನ್ನಡ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು. ಕಂಪ್ಯೂಟರ್ ಏಡೆಡ್ ಇಂಜಿನಿಯರಿಂಗ್ ಗ್ರಾಫಿಕ್ಸ್ (ಸಿಎಇಜಿ) ಹುದ್ದೆಗೆ ಬಿ.ಇ. ಮೆಕ್ಯಾನಿಕಲ್ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
ಆಸಕ್ತಿಯುಳ್ಳ ಗರಿಷ್ಠ ವಯೋಮಿತಿ 60 ವರ್ಷದೊಳಗಿನ ಅಭ್ಯರ್ಥಿಗಳು 2021ರ ಆಗಸ್ಟ್ 31 ರೊಳಗಾಗಿ ವಿದ್ಯಾರ್ಹತೆಯ ಪ್ರಮಾಣಪತ್ರ ಹಾಗೂ ಬಯೋಡೆಟಾದೊಂದಿಗೆ ಕಲಬುರಗಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಬೇಕು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಚಾರ್ಯರಾದ ರಾಘವೇಂದ್ರ ಪಿ.ಆರ್. ಇವರ ಮೊಬೈಲ್ ಸಂಖ್ಯೆ 9945350274ಗೆ ಸಂಪರ್ಕಿಸಲು ಕೋರಿದೆ.
30 ರಂದು ಉದ್ಯೋಗ ಮೇಳ
ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಕೌಶಲ್ಯ ಮಾಸ ಆಚರಣೆಯ ಅಂಗವಾಗಿ ಆಗಸ್ಟ್ 30 ರಂದು ಬೆಳಗ್ಗೆ 9 ರಿಂದ 4ರವರೆಗೆ ಮೈಸೂರಿನ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಮಿನಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ.
ಮೈಸೂರು ಹಾಗೂ ಬೆಂಗಳೂರು ಮೂಲಕ ಖಾಸಗಿ ಕಂಪನಿಗಳಲ್ಲಿ ಮಾರುಕಟ್ಟೆ, ಹಣಕಾಸು, ಇನ್ಸುರೆನ್ಸ್, ಕೈಗಾರಿಕೆಗಳು, ಬ್ಯಾಂಕಿಂಗ್ ಮತ್ತು ಆಸ್ಪತ್ರೆ ಸೇವೆಗಳು ಹಾಗೂ ಇತರೆ ಎಲ್ಲಾ ರೀತಿಯ ಸೇವೆಗಳ ಸುಮಾರು 20-25 ಕಂಪನಿಗಳು ಭಾಗವಹಿಸಲಿವೆ. 7ನೇ ತರಗತಿಯಿಂದ ಎಸ್ಎಸ್ಎಲ್ಸಿ, ಪಿಯುಸಿ, ಎಲ್ಲಾ ಪದವಿ, ಐಟಿಐ ಹಾಗೂ ಡಿಪ್ಲೋಮಾ, ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಹತೆ ಹೊಂದಿರುವವರು ಜೊತೆಗೆ ಐಟಿ ಇನ್ಸಟೆಂಟ್ ಟೆಕ್ನಾಲಜಿಯವರಿಗೆ ಕನ್ನಡ, ಇಂಗ್ಲೀಷ್, ಹಿಂದಿ, ಭಾಷೆಯನ್ನು ಬಲ್ಲ 18 ರಿಂದ 35 ವರ್ಷದ ವಯೋಮತಿಯೊಳಗಿನ ಪುರುಷ ಹಾಗೂ ಮಹಿಳಾ ನಿರುದ್ಯೋಗಿ ಅಭ್ಯರ್ಥಿಗಳು ಭಾಗವಹಿಸಬಹುದು.
Share your comments