1. ಸುದ್ದಿಗಳು

ದ್ವಿಚಕ್ರ ವಾಹನ ಖರೀದಿಗೆ 25 ಸಾವಿರ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನ

ಟ್ರ್ಯಾಕ್ಟರ್, ಕಾರ್, ಆಟೋ ಸೇರಿದಂತೆ ಇತರ ವಾಹನಗಳ ಖರೀದಿಗೆ ಸಹಾಯಧನ ನೀಡುವುದನ್ನು ಕೇಳಿದ್ದೇವೆ. ಆದರೆ ಬೈಕ್ ಖರೀದಿಗೆ ಸಹಾಯಧನ ನೀಡುವುದರ ಬಗ್ಗೆ ಕೇಳಿದ್ದೀರಾ. ಹೌದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಯುವಕರಿಗೆ ಬೈಕ್ ಖರೀದಿಸಲು 25 ಸಾವಿರ ರೂಪಾಯಿಯವರೆಗೆ ಸಾಲಸೌಲಭ್ಯ ನೀಡಲು ಮುಂದಾಗಿದೆ.

. ಅಮೇಜಾನ್, ಝೋಮೊಟೋ, ಸ್ವಿಗ್ಗಿ, ಊಬರ್ ಸೇರಿದಂತೆ ಇತರ ಸಂಸ್ಥೆಗಳಲ್ಲಿ ಕೆಲಸ ಪಡೆದು ಪಾರ್ಸೆಲ್ ಗಳನ್ನು ಮನೆಬಾಗಿಲಿಗೆ ತಲುಪಿಸಲು ನಿಮ್ಮ ಹತ್ತಿರ ಬೈಕ್ ಇಲ್ಲವೆ. ಚಿಂತೆ ಮಾಡಬೇಡಿ, ಇನ್ನೇಕೆ ತಡ ಕೂಡಲೇ ಅರ್ಜಿ ಸಲ್ಲಿಸಿ ಬೈಕ್ ಖರೀದಿಸಿ.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2020-21ನೇ ಸಾಲಿನಲ್ಲಿ   ನಗರ ಪ್ರದೇಶಗಳಲ್ಲಿ “ಇ-ವಾಣಿಜ್ಯ ಸಂಸ್ಥೆಗಳಾದ ಝೋಮಾಟೋ, ಸ್ವಿಗ್ಗಿ, ಉಬರ್ ಹಾಗೂ ಅಮೇಜಾನ್ ಮತ್ತಿತರ (Zomato, Swiggy, Uber ets, Amazon)  ಸಂಸ್ಥೆಗಳಲ್ಲಿ ಉದ್ಯೋಗ ಪಡೆದು ಮನೆಬಾಗಿಲಿಗೆ ಉತ್ಪನ್ನ ತಲುಪಿಸುತ್ತಿರುವ ಅರ್ಹ ಹಿಂದುಳಿದ ವರ್ಗಗಳಿಗೆ ಸೇರಿದ ಅರ್ಹ ಯುವಕರಿಗೆ ದ್ವಿಚಕ್ರ ವಾಹನ (ಬೈಕ್) ಕೊಂಡುಕೊಳ್ಳಲು ನಿಗಮದಿಂದ 25,000 ರೂಪಾಯಿಗಳ ಸಹಾಯ ಧನ ನೀಡಲಾಗುತ್ತಿದೆ.

 ಇದಕ್ಕಾಗಿ ಪ್ರವರ್ಗ-1 ಮತ್ತು ಪ್ರವರ್ಗ-2ಎ, 3ಎ ಹಾಗೂ 3ಬಿಗೆ ಸೇರಿದ (ವಿಶ್ವಕರ್ಮ, ಉಪ್ಪಾರ, ಅಂಬಿಗ, ಮಡಿವಾಳ, ಸವಿತಾ, ಅಲೆಮಾರಿ/ಅರೆ ಅಲೆಮಾರಿ ಜನಾಂಗದವರು ಹಾಗೂ ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ತಿಳಿಸಿದೆ.

  ದ್ವಿಚಕ್ರ ವಾಹನ ಖರೀದಿಗೆ ನಿಗಮದಿಂದ 25,000 ರೂ.ಗಳ ಸಹಾಯಧನ ನೀಡಲಾಗುತ್ತದೆ. ಉಳಿಕೆ ಮೊತ್ತ ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಗಳ ಮೂಲಕ ಸಾಲ ಪಡೆಯಬೇಕು. ಅರ್ಹ ಯುವಕರು ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಪಡೆದಿರುವ ಬಗ್ಗೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಡಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ/ದಾಖಲಾತಿಗಳೊಂದಿಗೆ ಆನ್‍ಲೈನ್ ಅಥವಾ ಆಫ್‍ಲೈನ್ ಮೂಲಕ 2020ರ ಡಿಸೆಂಬರ್ 19 ರೊಳಗಾಗಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳು ನಿಗಮದ ಜಿಲ್ಲಾ ಕಚೇರಿಯಿಂದ ಉಚಿತವಾಗಿ ಅರ್ಜಿ ನಮೂನೆ ಅಥವಾ ನಿಗಮದ www.dbcdc.karnataka.gov.in  ವೆಬ್‍ಸೈಟ್‍ದಿಂದ ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ  ಅವಶ್ಯಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. 

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‍ಸೈಟ್‍ನ್ನು ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಹಾಗೂ ನಿಗಮದ ಕಚೇರಿ ಮೊಬೈಲ್ ಸಂಖ್ಯೆ 08472-278635ಗೆ ಸಂಪರ್ಕಿಸಲು ಕೋರಲಾಗಿದೆ.

Published On: 24 November 2020, 07:19 PM English Summary: Application invited for purchase bike in subsidy

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2022 Krishi Jagran Media Group. All Rights Reserved.