1. ಸುದ್ದಿಗಳು

ಉಚಿತ ಕೋಳಿ ಸಾಕಾಣಿಕೆಗೆ ಅರ್ಜಿ ಆಹ್ವಾನ

ಮೈಸೂರು ನಗರದ ಹಿನಕಲ್ ಮುಖ್ಯರಸ್ತೆ ಯಲ್ಲಿರುವ ರುಡ್‌ಸೆಟ್‌ ಸಂಸ್ಥೆಯು ಉಚಿತವಾಗಿ ವಿವಿಧ ಕೌಶಲ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಅಕ್ಟೋಬರ್ 12 ರಿಂದ 22 ರವರೆಗೆ ಕೋಳಿ ಸಾಕಾಣಿಕೆ, ಅಕ್ಬೋಬರ್ 15 ರಿಂದ ನವೆಂಬರ್ 13 ರವರೆಗೆ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್‍ಸೆಟ್ ದುರಸ್ತಿ ತರಬೇತಿ ನೀಡಲಾಗುತ್ತದೆ. ತರಬೇತಿ ಉಚಿತವಾಗಿದ್ದು, 18 ರಿಂದ 45 ವರ್ಷ ವಯಸ್ಸಿನೊಳಗಿನವರು ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ದೂ: 0821-2519663 ಅಥವಾ ಮೊ: 9449860466 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಉಚಿತ ಕಂಪ್ಯೂಟರ್, ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ

ತುಮಕೂರು ನಗರದ ಸಮರ್ಥ್ ಫೌಂಡೇಷನ್ ವತಿಯಿಂದ ಉಚಿತವಾಗಿ ಕಂಪ್ಯೂಟರ್ ಹಾಗೂ ಹೊಲಿಗೆ ತರಬೇತಿ ನೀಡಲಾಗುತ್ತಿದೆ. ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್) ಯೋಜನೆಯ ಕೌಶಲ ತರಬೇತಿಗಾಗಿ ಅರ್ಜಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

18 ರಿಂದ 35 ವರ್ಷದ ನಿರುದ್ಯೋಗ  ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದು. 5ನೇ ತರಗತಿ ಪಾಸಾದ ಅಭ್ಯರ್ಥಿಗಳು ಹೊಲಿಗೆ ಹಾಗೂ 10ನೇ ತರಗತಿ ಪಾಸಾದವರು ಕಂಪ್ಯೂಟರ್ ತರಬೇತಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ  ಸಮರ್ಥ ಫೌಂಡೇಷನ್, ಸದ್ಗುರು, ಭವನ, ಜೈನ ಮಂದಿರಿದ ಹಿಂದುಗಡೆ, ವಿವೇಕಾನಂದ ರಸ್ತೆ, ತುಮಕುರು, ಅಥವಾ ಮೊ. 9986824210 ಗೆ ಸಂಪರ್ಕಿಸಲು ಕೋರಲಾಗಿದೆ.

Published On: 11 October 2020, 09:27 AM English Summary: application invited for free training poultry

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.