ಕೇಂದ್ರಿಯ ವಿದ್ಯಾಲಯ ಸಂಘಟನೆಯು (ಕೆವಿಎಸ್) ನಾಲ್ಕು ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎನ್ನುವ ವಿವರ ಇಲ್ಲಿದೆ….
ಇದನ್ನೂ ಓದಿರಿ ತಿರುಪತಿ ತಿರುಮಲದಲ್ಲಿರುವ ಆಸ್ತಿ ಮೌಲ್ಯ ಐದು ಸಾವಿರ ಕೋಟಿ! 10.25 ಟನ್ ಬಂಗಾರ, ಒಟ್ಟಾರೆ ಆಸ್ತಿ ಎಷ್ಟು ಗೊತ್ತೆ?
ಕೇಂದ್ರಿಯ ವಿದ್ಯಾಲಯ ಸಂಘಟನೆಯು (ಕೆವಿಎಸ್) ನಾಲ್ಕು ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ನೇಮಕ ಅಧಿಸೂಚನೆ ಬಿಡುಗಡೆಗೊಳಿಸಿದೆ.
ಅಧಿಸೂಚನೆ ಅನ್ವಯ ಪಿಜಿಟಿ, ಟಿಜಿಟಿ, ಪ್ರಿನ್ಸಿಪಾಲರು, ಉಪ ಪ್ರಾಂಶುಪಾಲರು, ಹಣಕಾಸು ಅಧಿಕಾರಿ, ಸೆಕ್ಷನ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಪ್ರಾಂಶುಪಾಲ, ಉಪಪ್ರಾಂಶುಪಾಲರ ಹುದ್ದೆಗಳಿಗೆ 1500 ರೂಪಾಯಿ ಇತರೆ ಹುದ್ದೆಗಳಿಗೆ 1000 ಸಾವಿರ ರೂಪಾಯಿ ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ.
ರೈತರ ಖಾತೆಗೆ ನೇರವಾಗಿ ಡೀಸೆಲ್ ಸಬ್ಸಿಡಿ ಪಾವತಿ; ದಾಖಲೆಯೂ ಬೇಕಿಲ್ಲ: ಬಿ.ಸಿ ಪಾಟೀಲ್
-
ಯಾವ ಹುದ್ದೆಗಳಿಗೆ ಆಹ್ವಾನ
- ಹುದ್ದೆ; ನೇಮಕಾತಿ
- ಉಪ ಪ್ರಾಂಶುಪಾಲ: 176
- ಹಣಕಾಸು ಅಧಿಕಾರಿ : 7
- ಸೆಕ್ಷನ್ ಅಧಿಕಾರಿ : 22
- ಸ್ನಾತಕೋತ್ತರ ಪದವಿ ಉಪನ್ಯಾಸಕರು(ಪಿಜಿಟಿ) : 1200
- ತರಬೇತಿ ಪದವಿ ಉಪನ್ಯಾಸಕರು(ಟಿಜಿಟಿ) : 2154
- ಮುಖ್ಯೋಪಾಧ್ಯಾಯರು : 237
- ಒಟ್ಟು ಹುದ್ದೆಗಳ ಸಂಖ್ಯೆ: 4014
ಹುದ್ದೆವಾರು ವಿದ್ಯಾರ್ಹತೆ
- ಪ್ರಾಂಶುಪಾಲ: ಪಿಜಿ, ಬಿ.ಇಡಿ ಜತೆಗೆ ಎಂಟು ವರ್ಷ ಸೇವಾ ಅನುಭವ
ಉಪ-ಪ್ರಾಂಶುಪಾಲ: ಪಿಜಿ, ಬಿ.ಇಡಿ ಜತೆಗೆ 5 ವರ್ಷ ಸೇವಾ ಅನುಭವ
ಹಣಕಾಸು ಅಧಿಕಾರಿ : ಪದವಿ ಜತೆಗೆ 4 ವರ್ಷ ಸೇವಾ ಅನುಭವ
ಸೆಕ್ಷನ್ ಆಫೀಸರ್ : ಪದವಿ ಜತೆಗೆ 4 ವರ್ಷ ಸೇವಾ ಅನುಭವ
ಸ್ನಾತಕೋತ್ತರ ಪದವಿ ಉಪನ್ಯಾಸಕರು(ಪಿಜಿಟಿ): ಸ್ನಾತಕೋತ್ತರ ಪದವಿ ಜತೆಗೆ ಬಿ.ಇಡಿ ಶಿಕ್ಷಣ
ಟ್ರೈನ್ಡ್ ಗ್ರಾಜುಯೇಟ್ ಟೀಚರ್ (ಟಿಜಿಟಿ) : ಪದವಿ ಜತೆಗೆ ಬಿ.ಇಡಿ ಶಿಕ್ಷಣ ಮುಗಿಸಿರಬೇಕು
ಮುಖ್ಯೋಪಾಧ್ಯಾಯರು: ಪಿಆರ್‌ಟಿ ಜತೆಗೆ ಕನಿಷ್ಠ ಐದು ವರ್ಷ ಸೇವಾ ಅನುಭವ
ಪಶ್ಚಿಮ ಕೋಲ್‌ಫೀಲ್ಡ್‌ನಲ್ಲಿ ಉದ್ಯೋಗಾವಕಾಶ: ಬಿಇ, ಡಿಪ್ಲೊಮ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ - ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನ: ನವೆಂಬರ್ 9
- ಅರ್ಜಿ ಸಲ್ಲಿಸಲು ಕೊನೆ ದಿನ: ನವೆಂಬರ್ 16
- ಅರ್ಜಿ ಸಲ್ಲಿಸಲು ವೆಬ್: www.kvsangathan.nic.in ಸಂಪರ್ಕಿಸಬಹುದು.
ಅಪ್ಲಿಕೇಶನ್ ಸಲ್ಲಿಸಲು ಗರಿಷ್ಠ ವಯೋಮಿತಿ ಏನು
ಸ್ನಾತಕೋತ್ತರ ಪದವಿ ಉಪನ್ಯಾಸಕರು(ಪಿಜಿಟಿ): 40 ವರ್ಷ
ತರಬೇತಿ ಪದವಿ ಉಪನ್ಯಾಸಕರು(ಟಿಜಿಟಿ): 35 ವರ್ಷ
ಪ್ರಾಥಮಿಕ ಶಿಕ್ಷಕರು (ಪಿಆರ್‌ಟಿ): 30 ವರ್ಷ
ಪ್ರಾಂಶುಪಾಲರು: 50 ವರ್ಷ
ಉಪಪ್ರಾಂಶುಪಾಲರು: 45 ವರ್ಷ.
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರಿ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ಕಲ್ಪಿಸಲಾಗಿದೆ
ಹುದ್ದೆ ನೇಮಕಾತಿಗೆ ಸಂಬಂಧಿಸಿದಂತೆ ಮತ್ತಷ್ಟು ವಿವರಗಳಿಗೆ ಕೇಂದ್ರೀಯ ವಿದ್ಯಾಲಯ ಸಂಘಟನೆಯ ಅಧಿಕೃತ ವೆಬ್‌ಸೈಟ್ https://kvsangathan.nic.inಗೆ ಭೇಟಿ ನೀಡಬಹುದು.
Share your comments